My Alarm Clock

ಸಂಗೀತದಲ್ಲಿ ಲಯ ಮತ್ತು ಕಾಲ ಪ್ರಮಾಣ / The sense of rhythm and its tempo in music

My Alarm Clockಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಕೃತಿ ಪ್ರಸ್ತುತಿ, ವಾದ್ಯ ಸಹಕಾರ, ತಾಳ ಇವೆಲ್ಲವೂ ನಮ್ಮ ಅರಿವಿಗೆ ಸಂತೋಷವುಂಟುಮಾಡಬೇಕಾದರೆ ಶೃತಿ ಶುದ್ಧತೆ, ರಾಗ ಶುದ್ಧತೆ, ಕೃತಿ ಪಾಠಕ್ಕೆ ನಿಷ್ಠೆಯ ಜೊತೆಗೆ ಆ ಕೃತಿಯ ಮನೋಧರ್ಮಕ್ಕೆ ಒಪ್ಪುವ ಹದವಾದ ಕಾಲಪ್ರಮಾಣವನ್ನೂ ಸಾಧಿಸಬೇಕಾಗುತ್ತದೆ.  ಲಯ (rhythm) ಮತ್ತು ಕಾಲ ಪ್ರಮಾಣ (tempo with its time units)  ಯಾವುದೇ ಸಂಗೀತ ಪ್ರಕಾರದ ಜೀವಾಳ.

ಈ ಲೇಖನದ ಉದ್ದೇಶ ಕಾಲ ಪ್ರಮಾಣದ ಪ್ರಾಮುಖ್ಯತೆಯನ್ನು ವಿವರಿಸುವುದಲ್ಲ.  ಬದಲಿಗೆ, ಶಾಸ್ತ್ರೀಯ ಸಂಗೀತದ ಎಳೆಯ ವಿದ್ಯಾರ್ಥಿಗಳಿಂದ ಹಿಡಿದು ಘನ ವಿದ್ವಾಂಸರುಗಳವರೆಗೆ ಎಲ್ಲರೂ ಆ ಕಾಲ ಪ್ರಮಾಣವನ್ನು ಕೈಗೂಡಿಸಿಕೊಳ್ಳಲು ಯಾಕೆ ಅಷ್ಟೊಂದು ಕಷ್ಟಪಡಬೇಕಾಗುತ್ತದೆ ಎಂದು ಚರ್ಚಿಸುವುದಾಗಿದೆ.

ಶೃತಿ ಶುದ್ಧವಾಗಿರಬಹುದು,  ಕಂಠ ಸಿರಿ/ಕೈ ಚಳಕ ಚೆನ್ನಾಗಿರಬಹುದು, ತಾಳವೂ ಗಟ್ಟಿಯಾಗಿರಬಹುದು.  ಆದರೆ ತಾಳದ ಕಾಲ ಪ್ರಮಾಣವು ಕೃತಿಯ ಆರಂಭದಿಂದ ಅಂತ್ಯದವರೆಗೆ ಒಂದೇ ಮಟ್ಟದಲ್ಲಿ ಉಳಿಯುವ ನಿದರ್ಶನಗಳು ಬಹಳ ಅಪರೂಪ.  ಕೆಲವೊಮ್ಮೆ ಬೇಕೆಂತಲೇ ವಿಳಂಬ ಲಯದಲ್ಲಿ ಆರಂಭಿಸಿ ಕೃತಿಯ ಮಧ್ಯೆ (ಉದಾ: ಚರಣದಿಂದ) ಮಧ್ಯ ಲಯಕ್ಕೆ ಹಾಯುವುದುಂಟು. ಆದರೆ, ಅಂತಹ ಸಂದರ್ಭಗಳಲ್ಲೂ ಕಾಲ ಪ್ರಮಾಣದಲ್ಲಿ ಗ್ರಹಿಕೆಗೆ ಸಿಗಬಲ್ಲ ಮಟ್ಟದಲ್ಲಿ ಏರಿಳಿತಗಳುಂಟಾಗುವುದು ಸಾಮಾನ್ಯ.  ಮಾದರಿ ಪ್ರಪಂಚದಲ್ಲಿ ನಾವಿದ್ದೇವೆಂದು ಭಾವಿಸುವುದಾದರೆ, ಕರ್ನಾಟಕ ಶಾಸ್ತ್ರೀಯ ಸಂಗೀತದ ಆಶಯಗಳು ನಿಸರ್ಗದಿಂದ ಪ್ರಭಾವಿತಗೊಂಡು ಬೆಳೆದವು ಎಂದು ನಂಬುವುದಾದರೆ, ಕೃತಿಗಳ ಪ್ರಸ್ತುತಿಯಲ್ಲಿ ಅಥವಾ ಲಯ ವಾದ್ಯ ವಾದನದಲ್ಲಿ ಸಮಬದ್ಧವಾದ ಕಾಲ ಪ್ರಮಾಣವನ್ನು ಸಾಧಿಸುವುದು ಯಾಕೆ ಅಷ್ಟೊಂದು ಕಷ್ಟಕರ?

ಎಲ್ಲಾ ಜೀವಿಗಳಲ್ಲೂ ಅಂತರ್ಗತವಾದ ದೈನಿಕ ಕಾಲ ಮಾಪನ ಶಕ್ತಿ ಇರುವುದು ತಿಳಿದಿರುವ ವಿಚಾರ.  ಬಹುಪಾಲು ಉದಾಹರಣೆಗಳಲ್ಲಿ ಆ ಅಂತಃಲಯವು ಸೂರ್ಯನೊಂದಿಗೆ ಓಡುವ ಹಗಲು-ಇರುಳಿನ (ಹೆಚ್ಚೂ ಕಡಿಮೆ ೨೪ ಗಂಟೆಗಳ) ಬದಲಾವಣೆಯನ್ನು ಆಧರಿಸಿರುತ್ತದೆ.  ಸೂರ್ಯೋದಯ-ಸೂರ್ಯಾಸ್ತದ ಬಾಹ್ಯ ಸಮಯ ಸೂಚೀ ಸುಳುಹುಗಳು ವಾರಗಟ್ಟಲೆ ಸಿಗದಿದ್ದಾಗ ಜೀವಿಗಳ ಅಂತಃಲಯ ಮಾಪಕವು ತನ್ನ ಸ್ವಾಭಾವಿಕ ದೈನಿಕ ಕಾಲ ಚಕ್ರದಿಂದ ನಿಧಾನವಾಗಿ ದೂರ ಸರಿಯುತ್ತಾ ಹೋಗಿ ಕ್ರಮೇಣ ಆ ಚಕ್ರದ ಕಾಲ ಪ್ರಮಾಣವು ಹಿಗ್ಗುವುದು ಅನೇಕ ಸಂಶೋಧನೆಗಳಿಂದ ದೃಢಪಟ್ಟಿದೆ (ಉದಾ:  ೨೪ ಗಂಟೆಯ ದಿನವು ಸೂರ್ಯನ ಪರಿವೆಯಿಲ್ಲದ ಮನಸ್ಸಿಗೆ ಕ್ರಮೇಣ ೪೮ ಗಂಟೆಗಳ ದಿನವಾಗಿ ಪರಿಣಮಿಸುವುದು).

ಶಾಸ್ತ್ರೀಯ ಸಂಗೀತದ ಲಯ-ಚಕ್ರಗಳು ನಮ್ಮೊಳಗಿನ ಲಯ ಚಕ್ರಗಳಿಗಿಂತ ಭಿನ್ನವಾದುದೇನಲ್ಲ.  ಎರಡೂ ಲಯಗಳೇ.  ಎರಡಕ್ಕೂ ಬಾಹ್ಯ ಸಮಯ ಸೂಚಿಗಳ ಆವಶ್ಯಕತೆ ಇದೆ.  ಅಂತಃಲಯಕ್ಕೆ ಸೂರ್ಯನ ಸೂಚಿ, ಸಂಗೀತ ಲಯಕ್ಕೆ ತಾಳ ಸೂಚಿ. ಕೊನೆಯ ಪಕ್ಷ ಆಗೊಮ್ಮೆ ಈಗೊಮ್ಮೆಯಾದರೂ ಆ ಬಾಹ್ಯ ಸೂಚಿಯ ಆಸರೆ ಸಿಗದಿದ್ದರೆ ತಮ್ಮ ಕಾಲ ಪ್ರಮಾಣವನ್ನು ಅವು ನಿಧಾನವಾಗಿ ಕಳೆದುಕೊಳ್ಳುತ್ತವೆ.  ನಮ್ಮ ಅಂತಃಲಯವು ಸೂರ್ಯನ ಆಸರೆ ಇಲ್ಲದಾಗ ನಿಧಾನವಾಗುತ್ತದೆ ಎಂದು ಒಪ್ಪೋಣ.  ಸಂಗೀತದ ಲಯವು ತಾಳದ ಆಸರೆ ಇದ್ದಾಗ್ಯೂ ಯಾಕೆ ಓಟ-ಎಳೆತಗಳಿಗೊಳಗಾಗಬೇಕು?

ನಾವೆಲ್ಲರೂ ಮಾಡಿ-ನೋಡಿ-ಕೇಳಿ ಅನುಭವಿಸಿರುವಂತೆ ಕೃತಿ ಆರಂಭವಾದಾಗ ಇರುವ ತಾಳದ ವೇಗ ಕ್ರಮೇಣ ಓಟಕ್ಕೊಳಗಾಗಿ ಮುಗಿಯುವ ವೇಳೆಗೆ ಕೃತಿ ಬೇರೆ ತೆರನಾಗಿ ಕೇಳುವುದು ಸಾಮಾನ್ಯ.  ಸಂಗೀತದ ಲಯವು ನಮ್ಮೊಳಗಿನ ದೈನಿಕ ಲಯದಷ್ಟೇ ಪ್ರಾಂಜಳವೂ, ಚಿಕಿತ್ಸಕ ಕರಾರುವಾಕ್ಕುತನ ಹೊಂದಿರುವುದೂ ನಿಜವೇ ಆದರೆ ತೊಂದರೆ ಇರುವುದು ಆ ಲಯಕ್ಕೆ ಆಸರೆಯಾಗಬೇಕಾದ ಬಾಹ್ಯ ಸೂಚಿಯಲ್ಲಿ… ತಾಳದಲ್ಲಿ ಅನ್ನಿಸುತ್ತದೆ.
ನಮ್ಮ ತಾಳವು ಸೂರ್ಯನಷ್ಟು ಪ್ರಜ್ವಲವಾದ ಭೌತಿಕ ಲಯ ಸೂಚಿಯಾಗುವುದು ತುಂಬಾ ಕಷ್ಟ. ಸೂರ್ಯನ ಚಿತ್ತವನ್ನು ಕದಲಿಸುವ ಶಕ್ತಿ ಎಲ್ಲಿದೆ? ತಾಳ ಒಂದು ಜೈವಿಕ ಕ್ರಿಯೆ, ಜೊತೆಗೆ ಅದರ ಚಿತ್ತ ಸೂಕ್ಷ್ಮವಾದುದು.

ಅದೆಲ್ಲಾ ಸರಿ.  ನನ್ನನ್ನು ಕಾಡುವ ಪ್ರಶ್ನೆ ಇನ್ನೊಂದಿದೆ.  ನಾವು ಮನುಷ್ಯನ ತಾಳದ ಚಂಚಲತೆಯನ್ನು ಮೀರಲು ಯಂತ್ರದ ಸಹಾಯವನ್ನೂ ಪಡೆಯುವುದನ್ನು ನೋಡಿದ್ದೇವೆ.  ತಾಳದ ಯಂತ್ರದ ಕಾಲ ಪ್ರಮಾಣವು ಹೆಚ್ಚು ಕಡಿಮೆ ಆಗವುದು ಬಹುತೇಕ ಅಸಾಧ್ಯ.  ಅಂಥದ್ದರಲ್ಲಿ ಯಂತ್ರದ ತಾಳಕ್ಕೆ ಹಾಡಿದರೆ ಅಥವಾ ನುಡಿಸಿದರೆ ಯಾಕೆ ಮನಸ್ಸಿಗೆ ಹಿಂಸೆಯಾಗುತ್ತದೆ?  ಸಂಗೀತದಲ್ಲಿ ಆ ಚಿಕಿತ್ಸಕ ಕರಾರುವಾಕ್ಕುತನಕ್ಕೆ ಜಾಗವಿಲ್ಲವೇ?  ಸಂಗೀತ ಲಯದಲ್ಲಿ ನಾವು ಬೇಡ ಎಂದರೂ ಬರುವ ಮಾನುಷ ಏರಿಳಿತಗಳು ಸ್ವಾಭಾವಿಕವಾದುವೇ ಎಂಬ ಅನುಮಾನ ಉಂಟಾಗುತ್ತದೆ. ಅದು ಸ್ವಾಭಾವಿಕವೇ ಇರಬೇಕು.  ಆ ಏರಿಳಿತದ ಮಟ್ಟಕ್ಕೆ ಮಿತಿಯಿದೆ ಎಂದು ಹೇಳಬಹುದೇನೋ.  ದೊಡ್ಡ ಸಾಧಕರೆನಿಸಿಕೊಂಡವರು ತಮ್ಮ ಸಂಗೀತದ ಲಯದ ಏರಿಳಿತಗಳನ್ನು ಸೂಕ್ಷ್ಮಾತಿಸೂಕ್ಷ್ಮ ಮಟ್ಟಕ್ಕೆ ಕೊಂಡೊಯ್ಯುತ್ತಾರೆನಿಸುತ್ತದೆ.  ಅಂಥಾ ಸಂಗೀತವನ್ನು ಅನುಭವಿಸಿದಾಗಲೇ ನಾನು ಆರಂಭದಲ್ಲಿ ಹೇಳಿದ್ದ ತೃಪ್ತಿ ನಮಗೆ ಸಿಗುತ್ತದೇನೋ.

_________________________________________________________________

A classical composition (kriti) in Carnatic music can satisfy the senses of the performer and the listener when the singer/the instrumentalist does justice to his/her pitch (shruti) and maintains the purity of the raaga (an assemblage of musical notes that are expected to behave in a characteristic manner) in which the kriti is composed. It is also expected that the composition is presented in its original form with special care given to its lyrical meaning and maintaining a suitable and consistent tempo and its degree of duration (per aavartha) that indicates the mood of the composition.  Tempo and the sense of duration are at the heart of any form of music.  My intention is not to highlight the importance of these indicators that qualify music.  I would rather discuss the difficulties faced by students and experts in achieving consistency in kaala pramaaNa, which affects the tempo of a composition.

A consistent pitch, a pleasing voice/ a skilful handling of an instrument, a firm taaLa that supports meaningful arithmetic may augour well to support a composition.  However, to listen to a composition that is rendered in a consistent tempo from the beginning until its end is a rare phenomenon.  Sometimes artistes deliberately change the rhythm of a composition from slow (vilamba) to medium (madhya) while it is in progress.  Even then, it is frequently noticed that the magnitude of time (which is a measurable time unit shown through taaLa- could be in seconds or minutes for example) of their taaLa varies a lot even when they are singing in either slow or medium tempos.  If we assume for a moment that we live in an ideal world and if we also believe that the elements of Carnatic classical music have evolved under the deep influence of natural forces then it is hard to understand why we fail to maintain the magnitude of time of a taaLa and that too after putting in loads of effort (in vain).

We know that all living organisms have an internal clock and a sense of rhythm in everything their bodies do.  In most cases the biological rhythm follows the day night cycle, which is guided by the Sun.  Therefore, the internal rhythm follows a cyclical duration of 24 hours (unchanging magnitude) that takes its cue when the Sun rises and when the Sun sets.  When living beings are deprived of their external indicator of cyclicity their clock slows down and the size of their rhythmic cycle (magnitude of time) expands.  For example, many scientific experiments have confirmed that when people are exposed to artificial environments with no external indicators of day/night their sleep/wake cycle is shown to expand from 24 hours to gradually become 48 hours.  In other words, the biological clock needs frequent calibration.

The sense of musical rhythmic cycles is not very different from our internal biological rhythms. Both have a tempo and both need an external indicator to maintain their tempo.  In case of biological rhythm the external cue is provided by the Sun and in musical rhythm the indicator is the taaLa. Their sense of tempo will be lost if they don’t get the support of their external indicators at least once in a while. Let us agree that our internal clock slows down when we lose touch with the Sun or any other proxy for the Sun. Then it begs to be asked why does the tempo of a musical composition fail to maintain itself even when its essential external indicator the taaLa is continuously active?

All of us have experienced variation in the taaLa’s speed during the rendition of any composition and usually the shift tends be from slow to fast.  If musical rhythm is meant to be as precise and as balanced as our internal biological rhythm, then the observed inconsistency in musical rhythm must be due to a problem in its external indicator, which is the taaLa.  Our taaLa, which is a biological activity, cannot match the punctuality and precision of the Sun, which is a physical object.  It is almost impossible to distract the Sun (who can dare!) from its ways.  The taaLa’s  concentration is very fragile and it loses its course with the slightest of perturbations.  TaaLa may need another external indicator to maintain itself. To give you a light hearted example…during a performance if the guru (teacher) of the main artiste walks into the concert hall as the singer is still singing, then his taaLa’s heart will start beating faster for sure (now, that is not a good example for a small purturbation…a guru walking in must cause an exciting shock).

All of these arguments may make some sense.  Given all of this, there is still one question that bothers me all the time.  We have used and seen others use machines that provide taaLa support and act as the essential external indicator that maintains tempo.   A taaLa machine (unlike our hands) can concentrate on its task and be very accurate and precise.  But, many of us feel very uneasy when we play or sing for a machine generated taaLa or even listen to something that is composed using a machine.   It makes me wonder whether there is no space for clinical precision in music.  Probably there isn’t.  I think inconsistency and variation in duration of time cycle of a taaLa is a natural phenomenon that cannot be and need not be perfected.  However, such variation has an acceptable threshold and it is supposed to be so minimal that it should be beyond the resolution of human senses.  Some of the best ever legendary Carnatic musicians were able to take their inconsistencies to the most minimal level, which could not be detected even by the most trained minds.   Probably only such music can fully satisfy the inner thirst of human senses.

____________________________________________________________________

PS:  When I first wrote this article I had used the phrase ‘time volume’ to stand for ‘kaala pramaaNa’.  I could not think of any thing better.  Then recently I changed ‘time volume’ into ‘magnitude of time’.  I have also used the simple term ‘duration’ to refer to the absolute time represented by tempo, which could also mean ‘time-span’. If you have a better phrase in mind, then please do let me know by a comment. Thank you.  Rhythm and tempo are more or less synonymous with the sanksrit word laya.  However, rhythm refers to a repeating (cyclical) time interval.  Tempo refers to the speed of the cycle.  As always, carnatic classical music is best served by an Indian language (in this instance it is Kannada).  It is best read and understood in an Indian language.  English does serve a purpose and I hope the translation does its job. 

Advertisements

3 thoughts on “ಸಂಗೀತದಲ್ಲಿ ಲಯ ಮತ್ತು ಕಾಲ ಪ್ರಮಾಣ / The sense of rhythm and its tempo in music”

 1. As soon as I read the title, I thought that the phrase should have been “time measure”. “maana” or “pramaana” in samskrt means measure, not volume though volume is one kind of measure just like length or weight. I enjoyed the line of thought.
  Regards,
  Vijaya

  1. Thank you Vijaya for the suggestion. I am glad that you enjoyed the thought. Measure (verb) stands for maapana, and Measure (noun) can stand for amount (pramaana). I agree that the phrase time volume is very awkward. I was wondering if I could simply use the term ‘duration’ to stand for kaala pramaaNa. Would that do?

 2. ಸಂಗೀತ ಲಯದದಲ್ಲಿ ನಾವು ಬೇಡ ಎಂದರೂ ಬರುವ ಮಾನುಷ ಏರಿಳಿತಗಳು ಸ್ವಾಭಾವಿಕವಾದುವೇ ಎಂಬ ಅನುಮಾನ ಉಂಟಾಗುತ್ತದೆ.

  “ಲಯದದಲ್ಲಿ” ಆಗಿದೆ. ಸರಿ ಮಾಡಿಕೊ.

  ಮೊದಲ ಓದಿಗೆ, ಇನ್ನೂ ಸರಳವಾಗಿ ಬರೆಯಬಹುದಿತ್ತು ಅನ್ನಿಸುತ್ತದೆ. ಆದರೂ ಚೆನ್ನಾಗಿ ಬಂದಿದೆ. ಈಗಷ್ಟೇ ಓದಿರೋದಿಂದ ತಕ್ಷಣದ ವಿಮರ್ಶೆ ಮಾಡುವುದು ಸರಿ ಎನ್ನಿಸುವುದಿಲ್ಲ. ಸ್ವಲ್ಪ ಸಮಯದ ನಂತರ ಪ್ರತಿಕ್ರಿಯಿಸುತ್ತೇನೆ.

Please have your say

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s