ನರ ಜನ್ಮ ಬಂದಾಗ, ನಾಲಿಗೆ ಇರುವಾಗ

Ariyakudi-Semmangudi-Rudrapatna-2ಯಾವುದೇ ಕಾರ್ಯ ಕ್ಷೇತ್ರದಲ್ಲಿ ಹಿಮಾಲಯದ ಎತ್ತರಕ್ಕೆ ನಿಲ್ಲುವ ಮಹಾನ್ ವ್ಯಕಿತ್ವ, ಪ್ರತಿಭೆಗಳು ಒಂದು ಶತಮಾನದಲ್ಲಿ ನಾಲ್ಕೈದು ಮಂದಿ ಸಿಕ್ಕರೆ ಹೆಚ್ಚು.  ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಂತಹ ಎತ್ತರಕ್ಕೆ ಸಂದವರಲ್ಲಿ ಒಬ್ಬರು ವಿದ್ವಾನ್ ಆರ್ ಕೆ ಶ್ರೀಕಂಠನ್.  ಕಳೆದ ತಿಂಗಳು ಅವರ ನಿಧನದ ಸುದ್ದಿ ತಿಳಿದ ಮೇಲೆ ಅವರ ಬಗ್ಗೆ ಪತ್ರಿಕೆಗಳಲ್ಲಿ ಬೇಕಾದಷ್ಟು ಬಂತು.  ಅವರ ಶಿಷ್ಯ ಸಮುದಾಯ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದೂ ಆಯಿತು.  ಆದ ಕಾರಣ ನಾನು ಅವರ ಬಗ್ಗೆ ಇಲ್ಲಿ ಹೆಚ್ಚು ವಿವರವಾಗಿ ಬರೆಯುವ ಅಗತ್ಯವಿಲ್ಲ.  ನನ್ನ ಉದ್ದೇಶ ಅದಲ್ಲ.  ನನ್ನ ಕೌತುಕಕ್ಕೆ ಕಾರಣ ಅವರ ವಿದ್ವತ್ತಲ್ಲ. ಅವರ ಇಂಗದ ಹಸಿವು.  ಅದನ್ನು ಆಸೆಯೆಂದೂ ಕರೆಯಬಹುದೇನೋ. ಆ ಹಸಿವು ಇದ್ದಿದ್ದರಿಂದಲೇ ಅವರು ಆ ಎತ್ತರೆಕ್ಕೆ ಬೆಳೆದರು ಎಂಬುದು ಒಪ್ಪಬೇಕಾದ ವಿಚಾರ.  ಅಷ್ಟು ಎತ್ತರಕ್ಕೆ ಹೋದ ಮೇಲೂ ಅಂಥ ಸಾಧಕರಿಗೆ ಇನ್ನೂ ಎತ್ತರಕ್ಕೆ ಬೆಳೆಯಬೇಕೆಂಬ ಹಂಬಲ ಇರುತ್ತದಲ್ಲಾ?  ಅದು ಹೇಗೆ ಸಾಧ್ಯ?  ಮನುಷ್ಯನಿಗೆ ಒಂದು ವಯಸ್ಸಾದ ಮೇಲೆ, ಆತ  ಯಾವುದೇ ಸಾಧನೆ ಮಾಡಿದ್ದರೆ ಅದರ ಬಗ್ಗೆ ಸಮಾಜ ತೋರುವ ಅಕ್ಕರೆ ಮತ್ತು ಕೃತಜ್ಞತೆಯಿಂದ ಬಹಳಷ್ಟು ಬಾರಿ ಆ ಸಾಧನೆ ಅಲ್ಲಿಗೇ ತೃಪ್ತಿ ಹೊಂದುವುದೂ ಸಹಜ.  ಅಂತಹ ತೃಪ್ತಿಗೆ ಅವಕಾಶವಿದ್ದಾಗ್ಯೂ ಅದಕ್ಕೆ ಸೋಲದೇ ಇರುವುದು ಹೇಗೆ?

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ದೊಡ್ಡ ಹೆಸರು ಗಳಿಸಿದ ಮೇಲೂ, ವಯಸ್ಸು ೮೦ ದಾಟಿದರೂ ಯಾವ ಸಣ್ಣ ಸಂಗೀತ ಸಭೆ ಕಛೇರಿ ಏರ್ಪಡಿಸಿ ಕರೆದರೂ ಶ್ರದ್ಧೆಯಿಂದ ಕಾರ್ಯಕ್ರಮ ನಡೆಸಿಕೊಡುತ್ತಿದ್ದವರು  ವಿದ್ವಾನ್ ಆರ್ ಕೆ ಶ್ರೀಕಂಠನ್. ಬೆಂಗಳೂರಿನ ಒಂದು ಹಳೆ ಬಡಾವಣೆಯಲ್ಲಿ  ೬೦ ವರ್ಷಗಳಿಂದ ವಾರ್ಷಿಕ ತ್ಯಾಗರಾಜ, ಪುರಂದರ ಮತ್ತು ಕನಕ ದಾಸರ ಆರಾಧನೆಯನ್ನು ನಡೆಸುತ್ತಿರುವ ಸಣ್ಣ ಸಂಗೀತ ಸಭೆಯೊಂದಿದೆ.  ಆ ಅರವತ್ತು ವರ್ಷಗಳಲ್ಲಿ ಸುಮಾರು ನಾಲ್ವತ್ತು ವರ್ಷಗಳು ಒಮ್ಮೆಯೂ ತಪ್ಪಿಸದೇ ಕಛೇರಿ ನಡೆಸಿಕೊಟ್ಟಿದ್ದ ಹೆಗ್ಗಳಿಕೆ ಆರ್ಕೆಶ್ರೀ ಅವರದ್ದು. ಕಾರ್ಯಕ್ರಮಗಳಲ್ಲಿ ಜಮಖಾನ ಹಾಕುವ, ಕಲಾವಿದರು ಬಂದಾಗ ಅವರ ವಾದ್ಯಗಳನ್ನು ವೇದಿಕೆಗೆ ಹೊತ್ತೊಯ್ಯುವ, ಧ್ವನಿವರ್ಧಕದವರಿಗೆ ಕಾಫಿ-ಟೀ ಒದಗುಸಿವ ಕೆಲಸ ನೋಡಿಕೊಳ್ಳುತ್ತಿದ ಪ್ರಾಥಮಿಕ ಶಾಲೆಯ ಹುಡುಗನಾಗಿದ್ದ  ನನಗೆ  ೧೯೯೦ ರ ದಶಕದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಪ್ರತಿ ವರ್ಷವೂ ತಪ್ಪದೆ ಒಮ್ಮೆ ಆರ್ ಕೆ ಶ್ರೀಕಂಠನ್ ಅವರನ್ನು ಹತ್ತಿರದಿಂದ ಕಾಣುವ ಅವಕಾಶ ಸಿಕ್ಕಿತ್ತು.  ಆ ದೊಡ್ಡ ಹೆಸರು ನಮ್ಮ ಅರಳಿಕಟ್ಟೆಯ ದೇವಸ್ಥಾನದ ಸಣ್ಣ ವೇದಿಕೆಯ ಬಗ್ಗೆ ತೋರಿಸುತ್ತಿದ್ದ ಅಭಿಮಾನ ಅವರಲ್ಲಿ ನನಗೆ ಬೆಳೆದ ವಿಶೇಷ ಅಭಿಮಾನಕ್ಕೆ ಕಾರಣವಾಯ್ತು.

ನಾನು ಆರ್ಕೆಶ್ರೀ ಅವರ ಸಂದರ್ಶನಗಳಲ್ಯಾವುವಾದರೂ ಸಿಗುತ್ತವೇನೋ ಎಂದು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರು ಫ್ರಂಟ್-ಲೈನ್ ಪಾಕ್ಷಿಕ ಪತ್ರಿಕೆಗೆ ೧೯೯೮ ರಲ್ಲಿ ನೀಡಿದ್ದ ಸಂದರ್ಶನ ಸಿಕ್ಕಿತು.  ಆ ದೀರ್ಘ ಮಾತುಕತೆಯಲ್ಲಿ ಸೆಮ್ಮಂಗುಡಿ ಅವರು “ಅಕಸ್ಮಾತ್ ಇನ್ನೊಂದು ಜನ್ಮ ಇದ್ದರೆ ನಾನು ಅರಿಯಾಕ್ಕುಡಿ ಅವರಂತೆ ಹಾಡಬೇಕು” ಎಂದಿರುವುದು ದಾಖಲಾಗಿದೆ.  ಅದನ್ನು ಓದಿದ ನನಗೆ ನನ್ನ ಮೃದಂಗದ ಗುರುಗಳು ಹೇಳಿದ್ದ ಸಂಗತಿಯೊಂದು ಜ್ಞಾಪಕಕ್ಕೆ ಬಂತು. ಅವರು ಪಾಠ ಮಾಡುವಾಗ ಯಾವುದೋ ಕಾರಣಕ್ಕೆ ಆರ್ಕೆಶ್ರೀ ಅವರ ಪ್ರಸ್ತಾಪ ಬಂತು.  ಆರ್ಕೆಶ್ರೀ ಅವರಿಗೆ ಇಳಿ ವಯಸ್ಸಿನಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಆದ ಮೇಲೆ ಅವರ ಸಂಗೀತದ ಶುದ್ಧಿ ಹೇಗೆ ಇನ್ನಷ್ಟು ದೈವತ್ವವನ್ನು ಪಡೆದಂತಾಗಿದೆಯಲ್ಲ ಎಂದು ನನ್ನ ಗುರುಗಳು ಗೌರವಪೂರ್ಣ ಆಶ್ಚರ್ಯ ವ್ಯಕ್ತ ಪಡಿಸುತ್ತಾ ಘಟನೆಯೊಂದನ್ನು ನೆನಪಿಸಿಕೊಂಡರು.  ಗುರುಗಳ ಸ್ನೇಹಿತರೊಬ್ಬರು ಆರ್ಕೆಶ್ರೀ ಅವರನ್ನು ನೋಡಲು ಅವರ ಮನೆಗೆ ಹೋಗಿದ್ದಾಗ  ಆರ್ಕೆಶ್ರೀ ಅವರ ಓದಿನ ಕೋಣೆಯಲ್ಲಿ ಅರಿಯಾಕ್ಕುಡಿ ರಾಮಾನುಜ ಅಯ್ಯಂಗಾರ್ಯರ ಛಾಯಾಚಿತ್ರವೊಂದಿತ್ತಂತೆ.  ಅದನ್ನು ತೋರಿಸಿ ಆರ್ಕೆಶ್ರೀ “ನನಗೆ ಇನ್ನೊಂದು ಜನ್ಮ ಅಂತ ಏನಾದರೂ ಇದ್ದರೆ ಅರಿಯಾಕ್ಕುಡಿ ಅವರಂತೆ ಹಾಡಬೇಕೆಂಬ ಹಂಬಲವಿದೆ” ಎಂದಿದ್ದರಂತೆ.  ಅರಿಯಾಕ್ಕುಡಿ ಅವರು  ಸೆಮ್ಮಂಗುಡಿ ಅವರಿಗಿಂತ ೧೮ ವರ್ಷ ದೊಡ್ದವರು.  ಅದೇ ರೀತಿ ಸೆಮ್ಮಂಗುಡಿ ಅವರು  ಆರ್ಕೆಶ್ರೀ ಅವರಿಗಿಂತ ೧೨ ವರ್ಷ ದೊಡ್ಡವರು.  ಇಪ್ಪತ್ತನೇ ಶತಮಾನದಲ್ಲಿ ಅರಿಯಾಕ್ಕುಡಿ ಅವರು ಪ್ರಭಾವಿಸದ ಸಂಗೀತಗಾರರು ಯಾರೂ ಇರಲಿಲ್ಲ ಎನ್ನುವುದು ನಿಜವೇ.

ಒಬ್ಬ ದೊಡ್ಡ ಸಾಧಕನಾದ ಮೇಲೆ ಕಲಾವಿದನಿಗೆ ಗುರುಸ್ಥಾನ ಪ್ರಾಪ್ತಿಯಾಗುತ್ತದೆ. ಆದರೆ ಗುರುಸ್ಥಾನಕ್ಕೆ ಯೋಗ್ಯವಾದ ನಡವಳಿಕೆ ಎಲ್ಲರಲ್ಲೂ ಕಂಡುಬರುವುದಿಲ್ಲ.  ಆದರೆ ಸೆಮ್ಮಂಗುಡಿ ಮತ್ತು ಆರ್ಕೆಶ್ರೀ ಅಂಥವರು ನಿಜವಾಗಿಯೂ ಗುರುಸದೃಶರಾಗುತ್ತಾರೆ.  ಅವರು ತಮ್ಮೊಳಗಿನ ಶಿಷ್ಯನನ್ನು ಕಡೆಯವರೆಗೂ ಎಚ್ಚರವಾಗಿರಿಸಿದ್ದೂ ಅದಕ್ಕೆ ಕಾರಣ.  ಪರ್ವತಗಳಿಗೂ ಎತ್ತರಕ್ಕೇರುವ ಆಸೆ ಇದ್ದೇ ಇರುತ್ತದೆ.   ಹಿಮಾಲಯವು ಇನ್ನೂ ಬೆಳೆಯುತ್ತಲೇ ಇದೆಯಲ್ಲ…

________________________

114874-004-297B207E
everlasting hunger

It is true that most people have an intention to do better than ‘just okay’ in whatever they do in their lives.  However, only a handful of people scale the heights of Himalayas (figuratively) in their chosen field.  In the last century one might find a handful of Carnatic musicians who fulfil the stringent criteria for greatness.  One of them was Vid R K Srikantan (1920-2014), who passed way last month at the age of 94.  Many touching tributes were published in newspapers.  I do not have to repeat his biography here.  My interest in RKS the person and musician is not due to his towering accomplishment in music rather it was due to my fascination towards his unfathomable hunger.  No doubt that his hunger for knowledge and success drove him to the heights that he scaled.  But, often we have seen how all the love and adoration from the artiste’s peers and the society at large would breed an urge to rest, especially after a person crosses a certain age.  People like RKS do not do that.  What could be the secret of their recipe?

Even after becoming star name in Carnatic music, even after becoming an octogenarian, R K Srikantan continued to honour his long standing relationship with small-town music societies all across Karnataka.  He did not say no to a concert.   I had the good fortune meeting him once every year during his annual concert (in the 1990s) at an old music sabha in sub-urban Bangalore.

I was searching for a transcript of an interview of R K Srikantan that was telecast on Doordarshan around 10 years ago.  I came across an interview of Semmangudi Srinivasa Iyer (1908-2009) published in the magazine Frontline in 1998.  In that interview Semmangudi had said that if he were to reborn as a human being, he wished he could sing like Ariyakudi Ramanuja Iyengar (1890-1974).  After reading that I recollected an incident my mridanga teacher had shared with me some years ago.  My teacher had told me about a friend of his who had gone to visit R K Srikantan at his home.  In his living room RKS had a photograph of Ariyakudi.  Pointing to the photo RKS had reportedly said that if he had another chance (afterlife) to become a musician he wished to sing like Ariyakudi.  There is no doubt that Ariyakudi had influenced three generations of musicians in the 20th century and none more so than Semmangudi and RKS.

An artiste after doing the hard-yards and reaching a certain stage in his/her pursuit automatically obtains the authority of a teacher in his/her field.  However, not all possess and display the qualities befitting of a teacher.  Genuinely great teachers (people like RKS) will always aspire to get better and keep the student within them alive.  The Himalaya could be the highest mountain range in the world but it is still growing.

Advertisements

Please have your say

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s