ಏನಿದೆಲ್ಲಾ ರಗಳೆ?

ನಾನು ನನ್ನವಳೊಂದಿಗೆ ರೈಲಿನಲ್ಲಿ ಹೊರಟಿದ್ದೆ. ದೀರ್ಘ ಪ್ರಯಾಣ ಆಗಿನ್ನೂ ಆರಂಭವಾಗಿತ್ತು. ಮಧ್ಯೆ ಯಾವುದೋ ಒಂದು ನಿಲ್ದಾಣದಲ್ಲಿ ರೈಲು ಸುಮಾರು ಐದು ನಿಮಿಷ ನಿಂತಿತ್ತು. ನಮ್ಮ ಬೋಗಿಗೆ ಒಬ್ಬ ಅಜ್ಜ ಮತ್ತು ಒಬ್ಬ ಅಜ್ಜಿ ಹತ್ತಿದರು. ಅವರು ನಮಗಿಂತ ಮೂರ್ನಾಲ್ಕು ಸಾಲು ಮುಂದೆ ಕಿಟಕಿಯ ಪಕ್ಕ ಕುಳಿತರು. ರೈಲಿನ ಹೊರಗೆ ಅವರ ಕಿಟಕಿಯ ಪಕ್ಕ ಮಧ್ಯ ವಯಸ್ಸಿನ ಹೆಂಗಸೊಬ್ಬರು ಇಬ್ಬರು ಪುಟ್ಟ ಬಾಲಕಿಯರೊಂದಿಗೆ ನಿಂತಿದ್ದರು. ಅವರ ಪಕ್ಕ ಅಷ್ಟೇ ವಯಸ್ಸಿನ ಗಂಡಸು ಒಂದು ಸಣ್ಣ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ನಿಂತಿದ್ದರು. ಆ ಇಬ್ಬರು ಬಾಲಕಿಯರಲ್ಲಿ ಸಣ್ಣವಳು (೫ ವರ್ಷ ಇರಬಹದು) ಅರಚಿ ರಂಪ ಮಾಡುತ್ತಿದ್ದಳು. ರೈಲಿನ ಹತ್ತಿರ ಬಂದು ಅಜ್ಜಿಯ ಕೈ ಎಳೆದು ಅಳುತ್ತಿದ್ದಳು. (ಬಹುಶಃ) ಅವಳ ಅಕ್ಕ (ಸು ೧೦ ವರ್ಷ) ದೂರದಲ್ಲಿಯೇ ನಿಂತಿದ್ದಳು. ಅವಳ ಮುಖದಲ್ಲಿ ದುಗುಡ ತುಂಬಿತ್ತು. ಅಜ್ಜಿ ಮಾತ್ರ ನಗುತ್ತ ಆ ಹೆಂಗಸಿಗೆ ಏನನ್ನೋ ಹೇಳುತ್ತಿದ್ದರು. ಆ ಕಂಕುಳ ಕೂಸನ್ನು ಹತ್ತಿರ ಕರೆಸಿಕೊಂಡು ಕಿಟಕಿಯಿಂದಲೇ ಮೈ ದಡವಿದರು. ಸುಮಾರು ೨ ವರ್ಷದ ಆ ಮಗು ತನ್ನ ಇಬ್ಬರು ಅಕ್ಕಂದಿರನ್ನೂ ಅಜ್ಜಿಯನ್ನೂ ಪಿಳಿ ಪಿಳಿ ನೋಡುತ್ತಾ …”ಏನಿದೆಲ್ಲಾ ರಗಳೆ?“…ಎಂದು ನಾನು ನನಗನ್ನಿಸಿದ್ದನ್ನು ನನ್ನವಳೊಂದಿಗೆ ಹಂಚಿಕೊಳ್ಳಲು ತಿರುಗಿದೆ. ರೈಲು ಹೊರಟಿತು.

ರೈಲು ಪ್ರಯಾಣ ದೀರ್ಘವಾಗಿದ್ದಾಗ ಸಹ ಪ್ರಯಾಣಿಕರ ಪರಿಚಯವಿದ್ದರೆ ಪ್ರಯಾಣದ ಆಯಾಸವನ್ನು ಮಾತುಕತೆಯಾಲಿ ಮರೆಯುವುದಕ್ಕೆ ಸಹಾಯವಾಗುತ್ತದೆ. ಆದರೆ ಹಲವು ಬಾರಿ ಪ್ರಯಾಣ ದೀರ್ಘವಾಗಿದ್ದರೂ ಮನಸ್ಸಿನ ಪರಿಧಿ ಹಿರಿದಾಗಿರುವುದಿಲ್ಲ. ಸಹ ಪ್ರಯಾಣಿಕರ ಪರಿಚಯ ಮಾಡಿಕೊಳ್ಳುವ ಸಮಯ, ಸಂದರ್ಭ ಯಾವುವೂ ಒದಗುವುದಿಲ್ಲ. ಹೀಗಿದ್ದಾಗ್ಯೂ, ಭಾರತೀಯರಲ್ಲಿರುವ "ಗಮನಿಸುವಿಕೆ"ಯ ಗುಣದಿಂದ ಪರಿಚಯವಿರದಿದ್ದರೂ ಕೆಲವು ಅನ್ಯ(ರ) ವಿಚಾರಗಳು ತಾವಾಗಿ ಗೋಚರಿಸುತ್ತವೆ. ನಾನು "ಗಮನಿಸುವಿಕೆ" ಎಂದು ಹೇಳಿದ್ದನ್ನು "ಕೆಟ್ಟ ಕುತೂಹಲ"ದ ಮಟ್ಟಕ್ಕೆ ಕುಸಿಯುವಂತೆ ದಯಮಾಡಿ ಅರ್ಥೈಸಿಕೊಳ್ಳಬೇಡಿ. "ಕೆಟ್ಟ ಕುತೂಹಲ"ವೂ ನಮ್ಮಲ್ಲಿದೆ. ಅದನ್ನು ಕಡಿಮೆ ಮಾಡಿಕೊಂಡಷ್ಟೂ ಆರೋಗ್ಯಕ್ಕೆ ಒಳ್ಳೆಯದು.
ರೈಲು ಪ್ರಯಾಣ ದೀರ್ಘವಾಗಿದ್ದಾಗ ಸಹ ಪ್ರಯಾಣಿಕರ ಪರಿಚಯವಿದ್ದರೆ ಪ್ರಯಾಣದ ಆಯಾಸವನ್ನು ಮಾತುಕತೆಯಲಿ ಮರೆಯುವುದಕ್ಕೆ ಸಹಾಯವಾಗುತ್ತದೆ. ಆದರೆ ಹಲವು ಬಾರಿ ಪ್ರಯಾಣ ದೀರ್ಘವಾಗಿದ್ದರೂ ಮನಸ್ಸಿನ ಪರಿಧಿ ಹಿರಿದಾಗಿರುವುದಿಲ್ಲ. ಸಹ ಪ್ರಯಾಣಿಕರ ಪರಿಚಯ ಮಾಡಿಕೊಳ್ಳುವ ಸಮಯ, ಸಂದರ್ಭ ಯಾವುವೂ ಒದಗುವುದಿಲ್ಲ. ಹೀಗಿದ್ದಾಗ್ಯೂ, ಪರಿಚಯವಿರದಿದ್ದರೂ ಕೆಲವು ಅನ್ಯ(ರ) ವಿಚಾರಗಳು ತಾವಾಗಿ ಗೋಚರಿಸುತ್ತವೆ.
Advertisements

Please have your say

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s