ಚಿದಂಬರ ರಹಸ್ಯ: ಪೂರ್ಣಚಂದ್ರ ತೇಜಸ್ವಿ ಬರೆದ ಕಾದಂಬರಿಯ ಪರಿಚಯ

chidambara-rahasyaಪೂರ್ಣಚಂದ್ರ ತೇಜಸ್ವಿ ಅವರು ಬರೆದಂಥ ‘ಚಿದಂಬರ ರಹಸ್ಯ’ ಕಾದಂಬರಿಯ ಮುಖ್ಯ ಕಥಾ ಹಂದರದ ಸ್ಥೂಲ, ಸೂಕ್ಷ್ಮ ಪರಿಚಯ ಮಾಡಲು ಪ್ರಯತ್ನಿಸುವ ಬರಹ ಇದು.

ಪಿ ಲಂಕೇಶರ ‘ಮುಸ್ಸಂಜೆಯ ಕಥಾ ಪ್ರಸಂಗ’ ಕಾದಂಬರಿಯ ಕುರಿತು ನನ್ನ ಒಂದು ಚಿಕ್ಕ ವಿಮರ್ಶೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯೂ ಇದೆ. ಸರಿಯಾದ ನೋಟ್ಸ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಅದಕ್ಕೆ ಮುಂಚೆ ಅದೇ ರೀತಿಯ ಆಶಯವನ್ನು ವ್ಯಕ್ತ ಪಡಿಸುವ ಪೂರ್ಣಚಂದ್ರ ತೇಜಸ್ವಿ ಅವರ ‘ಚಿದಂಬರ ರಹಸ್ಯ’ ಕಾದಂಬರಿಯನ್ನು ಪರಿಚಯಿಸುತ್ತಿದ್ದೇನೆ.  ‘ಮುಸ್ಸಂಜೆಯ ಕಥಾ ಪ್ರಸಂಗ’ಕ್ಕಿಂತ ‘ಚಿದಂಬರ ರಹಸ್ಯ’ದ ಹರವು ಸರಳ ಮತ್ತು ಸಣ್ಣದು.   ಹಾಗಾಗಿ, ಓದುಗರು ತೇಜಸ್ವಿ ಅವರ ‘ಚಿದಂಬರ ರಹಸ್ಯ’ ಓದಿದ ಮೇಲೆ ಲಂಕೇಶರ ‘ಮುಸ್ಸಂಜೆಯ ಕಥಾ ಪ್ರಸಂಗ’ವನ್ನು ಓದುವುದು ಒಳಿತು.

‘ಚಿದಂಬರ ರಹಸ್ಯ’ದ ಕೆಸರೂರು ೧೯೮೦ ರ ದಶಕದಲ್ಲಿ ಕರ್ನಾಟಕದ ಚಿಕ್ಕಮಗಳೂರಿನಲ್ಲಿದ್ದ ಒಂದು ಗ್ರಾಮ.  ಏಲಕ್ಕಿ ಬೆಳೆಗೆ ಹೆಸರು ಮಾಡಿದ್ದ ಜಾಗ.  ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕಳ್ಳರ ಮನೆಹಾಳು ಕೆಲಸಗಳ ಮಧ್ಯೆ, ಏಲಕ್ಕಿಯ ಮಾರಾಟ ದರ, ಗುಣಮಟ್ಟ, ಮತ್ತು ಇಳುವರಿ ಎಲ್ಲವೂ ಕುಸಿದಿರುತ್ತದೆ.

ಕೆಸರೂರಿನ ಹೊಟ್ಟೆಯೊಳಗಿನ ಟಾರು ಜಾತಿ ದ್ವೇಷದ ದಳ್ಳುರಿಯಲ್ಲಿ ಮೆಲ್ಲನೆ ಕರಗ[ತೊಡಗಿರುತ್ತದೆ] (p 179)

ಇಂಥ ವಿಷಮ ಪರಿಸ್ಥಿತಿಯಲ್ಲಿ ಕೆಸರೂರಿನ ಏಲಕ್ಕಿ ಸಂಶೋಧನಾ ಕೇಂದ್ರದ ಸಸ್ಯ/ಕೃಷಿ ವಿಜ್ಞಾನಿ ಡಾ ಜೋಗೀಹಾಳ್ ಅವರು ಸಂಶಯಾಸ್ಪದವಾಗಿ ಸಾವನ್ನಪ್ಪಿರುತ್ತಾರೆ.  ಇದೆಲ್ಲದರ ಮಧ್ಯೆ

ಮುದಿಯಾದ ಸಂಸ್ಕೃತಿಯ ಕೆಸರೂರಿನ ಮನೆಮನೆಯೊಳಗಿನ ಎಳೆಯ ಜೀವಗಳಿಗೆ ವಿಕಾಸಗೊಳ್ಳಲನುವು ಮಾಡಿಕೊಡುವುದರ ಬದಲು…ಮುದಿಯರೆಲ್ಲಾ ಎಳೆ ಹೃಯದೊಳಹೊಕ್ಕು ಪರಕಾಯ ಪ್ರವೇಶ ಮಾಡಲು ಹವಣಿಸುತ್ತಾ ಕೆಸರೂರನ್ನು ಒಂದು ಬೆಂತರ ಲೋಕ ಮಾಡಿ[ರುತ್ತಾರೆ]. ಮೇಲೆ ಏನೂ ಸಂಭವಿಸದಂತೆ ನಟಿಸುತ್ತಾ ಬಸ್ಸು ಕಾಯುವವರು ಬಸ್ಸು ಕಾಯುತ್ತಿ[ರುತ್ತಾರೆ]…ಗದ್ದೆ ಉಳುತ್ತಾ ಮಳೆ ಬರಲಿಲ್ಲೆಂದು ಗೊಣಗುವವರು ಗೊಣಗುತ್ತಾ [ಇರುತ್ತಾರೆ]. ಆದರೆ, ಜ್ವಾಲಾಮುಖಿಯೊಂದು ಒಳಗೇ ಭಯಂಕರ ಒತ್ತಡ ನಿರ್ಮಿಸುತ್ತಿ[ರುತ್ತದೆ]” (p 141)

ಆ ಭಯಂಕರ ಒತ್ತಡ ಸ್ಫೋಟಕ್ಕೆ ಕಾರಣವಾಯಿತೇ?… ಉತ್ತರಕ್ಕಾಗಿ ತೇಜಸ್ವಿಯವರ ‘ಚಿದಂಬರ ರಹಸ್ಯ’ ಕಾದಂಬರಿಯನ್ನು ಓದಿ.

ಪ್ರಜಾವಾಣಿಯಲ್ಲಿ ಇಂದು ಓದಿದ ಸುದ್ದಿ (ಡಿಸೆಂಬರ್ ೧೭, ೨೦೧೬).
“ಭೈರಾಪುರ–ಶಿಶಿಲ ನಡುವೆ ಮಲೆನಾಡು–ಕರಾವಳಿ ಸಂಪರ್ಕಿಸುವ ಬಹುಕೋಟಿ ವೆಚ್ಚದ ‘ತೂಗು ಸೇತುವೆ’ ನಿರ್ಮಾಣದ ಪ್ರಸ್ತಾವನೆ ಕೇಂದ್ರ ಸರ್ಕಾರದ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯಕ್ಕೆ ಇತ್ತೀಚೆಗಷ್ಟೆ ಸಲ್ಲಿಕೆ ಯಾಗಿರುವುದು ಬೆಳಕಿಗೆ ಬಂದಿದೆ. ಈ ಯೋಜನೆ ಕಾರ್ಯ ಸಾಧುವಲ್ಲ ಮತ್ತು ದುಬಾರಿ ವೆಚ್ಚದ್ದು ಎಂದು ಇಲಾಖೆ ಮಟ್ಟದಲ್ಲೇ ಕೈಬಿಡಲಾಗಿತ್ತು. ಪ್ರಸ್ತಾವಿತ ಭೈರಾಪುರ–ಶಿಶಿಲ ಮಾರ್ಗದ ಸುತ್ತಮುತ್ತ ಕುಕ್ಕೆ, ಧರ್ಮಸ್ಥಳ, ಉಡುಪಿ, ಶೃಂಗೇರಿ, ಹೊರನಾಡು ಇತ್ಯಾದಿ ಪುಣ್ಯಕ್ಷೇತ್ರಗಳಿವೆ. ದೇವಸ್ಥಾನಗಳನ್ನು ಸೇರಿಸುವ ನೆಪದಲ್ಲಿ, ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ನಿರಾಕರಣೆ ನಡುವೆಯೂ ಪಶ್ಚಿಮ ಘಟ್ಟದ ಹೃದಯ ಭಾಗದ ಕಾಡಿನ ನಡುವೆ ಭೈರಾಪುರ–ಶಿಶಿಲ ರಸ್ತೆ ನಿರ್ಮಿಸಲು ಹೊರಟಿರುವುದರ ಹಿಂದೆ ಯಾರಿಗೋ ಲಾಭವಿರುವುದು ನಿಸ್ಸಂಶಯ ಎಂದು ಹೆಸರು ಹೇಳಲಿಚ್ಛಿಸದ ಅರಣ್ಯ ಅಧಿಕಾರಿ ಹೇಳಿದ್ದಾರೆ” ಎಂದು ವರದಿ ಹೇಳುತ್ತಿದೆ.

ಪೂರ್ಣಚಂದ್ರ ತೇಜಸ್ವಿ ಅವರ “ಚಿದಂಬರ ರಹಸ್ಯ” “ಜುಗಾರಿ ಕ್ರಾಸ್”ಕಾದಂಬರಿಗಳನ್ನು ಓದಿದರೆ ಕರ್ನಾಟಕದ ಮತ್ತು ಹೊರ ರಾಜ್ಯದ ಯಾವ ಯಾವ “ಖದೀಮರು” ಭೈರಾಪುರ–ಶಿಶಿಲ ರಸ್ತೆಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ.

 

Lankesh and Tejaswi
P Lankesh with K P Poornachandra Tejaswi (Photo couresy:  M.A. Sriram, The Hindu Archives)
Advertisements

Please have your say

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s