ಕರ್ನಾಟಕವನ್ನು ಪ್ರತಿನಿಧಿಸುವ ಭಾರತೀಯ ಕ್ರಿಕೆಟಿಗರು / Cricketers who represent Karnataka for India and the world

ನನಗೆ ಖುಷಿ ಕೊಡುವ ಕೆಲಸಗಳಲ್ಲಿ ಛಾಯಾಚಿತ್ರಗಳನ್ನು ಜೋಡಿಸುವುದೂ ಒಂದು. ನಾಡಪ್ರೇಮ ಹೆಚ್ಚೋ ದೇಶ ಪ್ರೇಮ ಹೆಚ್ಚೋ ಎನ್ನುವ ಚರ್ಚೆ ‘ಕಾವೇರಿ’ರುವ ಸಂದರ್ಭದಲ್ಲಿ, ಕನ್ನಡ ‘ಮಹಾದಾಯಿ’ ರಾಜ್ಯೋತ್ಸವ ಹತ್ತಿರ ಇರುವಾಗ, ಅಂತರ್ಜಾಲದಲ್ಲಿ ಲಭ್ಯವಿರುವ (ಕಾಪಿರೈಟ್ (ಬಹುಶಃ) ಇಲ್ಲದ) ಕರ್ನಾಟಕದ ಕ್ರಿಕೆಟಿಗರ ಫೋಟೋಗಳನ್ನು ಬಳಸಿಕೊಂಡು ಪುಟ್ಟದೊಂದು ಪೋಸ್ಟರ್ ತಯಾರಿಸಿದ್ದೇನೆ. ಆ ಪೋಸ್ಟರ್ ಅನ್ನು ಈವತ್ತು ಕಣ್ಠೀರವನ ಮೂಲಕ ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

“ಕರ್ನಾಟಕವನ್ನು ಪ್ರತಿನಿಧಿಸುವ ಭಾರತೀಯ ಕ್ರಿಕೆಟಿಗರು / Cricketers who represent Karnataka for India and the world”. 

ಅಕ್ಟೋಬರ್ 22, 2016 ಕ್ಕೆ ನನ್ನ ಈ ವೆಬ್ಲಾಗ್ ಕಣ್ಠೀರವ (CanTHeeRava)ನಿಗೆ ಎಂಟು ವರ್ಷ ತುಂಬುತ್ತಿದೆ. ಕಣ್ಠೀರವನನ್ನು ಎಂಟು ವರ್ಷಗಳಿಂದ ಸಾವಿರಾರು ಮಂದಿ ಓದಿದ್ದಾರೆ. ಇಲ್ಲಿ ಬರೆದ ಬರಹಗಳು ಸಕಾಲಿಕವೋ ಅಥವಾ ಆಕಳಿಕೆಗೂ ಅರ್ಹತೆ ಇಲ್ಲದ್ದೋ ಎಂಬ ತೀರ್ಮಾನ ಓದುಗರದ್ದು. ಬರೆದದ್ದನ್ನು ಓದಿದ, ಓದುತ್ತಿರುವ, ಓದಿ ವಿಚಾರಗಳನ್ನು ಹಂಚಿಕೊಂಡ ಎಲ್ಲರಿಗೂ ಕೃತಜ್ಞನಾಗಿದ್ದೇನೆ.

ಅನೇಕರು ನವೆಂಬರ್ ಒಂದರಂದು ರಾಜ್ಯೋತ್ಸವ ಆಚರಿಸಿ ಅಂದು ಕನ್ನಡದಲ್ಲಿ ಮಾತನಾಡುತ್ತಾರೆ. ಆದರೆ ನಾನು ನವೆಂಬರ್ ಒಂದರಂದು ಕನ್ನಡದಲ್ಲಿ ಮಾತನಾಡುವುದಿಲ್ಲ. ಉಳಿದ 364.25 ದಿನಗಳಲ್ಲಿ ಕನ್ನಡದ(ಲ್ಲಿ) ಆಲೋಚನೆ ಮಾಡುವ ನನಗೆ, ನವೆಂಬರ್ ೧ ‘ಪ್ರತಿಭಟನೆಯ ದಿನ’. ಕನ್ನಡ ಬಂದರೂ ಇಂಗ್ಲಿಷ್ನಲ್ಲೇ ಮಾತನಾಡುವವರನ್ನು ವಿರೋಧಿಸುವ ದಿನ. ಕನ್ನಡ ಮಾತೃ ಭಾಷೆ ಆಗಿದ್ದರೂ ಒಂದು ವಾಕ್ಯವನ್ನು ಕನ್ನಡದಲ್ಲೇ ಆರಂಭಿಸಿ ಕನ್ನಡಲ್ಲೇ ಮುಗಿಸಲು ತಿಣುಕುವ ಜನರನ್ನು ವಿರೋಧಿಸುವ ದಿನ. ಕನ್ನಡವನ್ನು “ಕನ್ನಡ್” ಎಂದು, ಕರ್ನಾಟಕವನ್ನು ‘ಕರ್ನಾಟಕ್” ಎಂದು ತಪ್ಪಾಗಿ ಉಚ್ಚಾರ ಮಾಡುತ್ತಾ ಕರ್ನಾಟಕವನ್ನು ಹಿಂಸಿಸುವ ಹಿಂದೀವಾಲಾಗಳನ್ನು (ಉತ್ತರ ಭಾರತೀಯರನ್ನು) ವಿರೋಧಿಸುವ ದಿನ.  ಮನೆ ಮಾತು ಕನ್ನಡೇತರ ಭಾಷೆ ಆಗಿದ್ದು, 364.25 ದಿನ ಕನ್ನಡ ಎಂದರೆ ಮೂಗುಮುರಿದು, ನವೆಂಬರ್ ಒಂದರಂದು ಕೆಂಪು-ಹಳದಿ ಬಾವುಟದ ಶಾಲು, ವೇಲುಗಳನ್ನು ಹೊದೆದು ಕನ್ನಡ ಪ್ರೇಮಿಗಳಂತೆ ನಟಿಸುವವರನ್ನು ವಿರೋಧಿಸುವ ದಿನ.

Today (October 22nd, 2016), CanTHeeRava is celebrating his 8th virtual birthday. I feel immensely happy that he has written regularly for eight years at one place. I leave qualitative judgements to his readers. I wish to acknowledge everyone who has supported him and his weblog. Thank you.

We are going through a phase in our democracy where our imagination for federal identity is gaining momentum. Common people are expressing their views on Kannada and Kannadatva and I hope it culminates in greater psychological freedom and financial autonomy for Kannada people.  I don’t celebrate November the 1st as Kannada Rajyotsava.  There is no need for me to do that because I think about Kannada and think in Kannada during the remaining 364.25 days a year.  What I hate most is the symbolic (useless) love for Kannada that pops up only on this day.  I celebrate November the 1st as a day of protest.  I protest everything that is anti-Kannada and pseudo-proKannada on November 1st.

karnataka_cricketers_a4_posterbycantheerava

ಈ ಪೋಸ್ಟರ್ ನ ದೊಡ್ಡ ಫೈಲ್ (ಹೈ ರೆಸೊಲ್ಯೂಷನ್) ನಿಮಗೆ ಬೇಕಿದ್ದರೆ ತಿಳಿಸಿ. ನಿಮ್ಮ ಮಿಂಚೆಗೆ ಪೋಸ್ಟರ್ ಕಳಿಸುತ್ತೇನೆ.

To mark CanTHeeRava’s 8th birthday, I am sharing with you a poster of Karnataka cricketers. I have put together (freely available?) photographs on the internet.  If you are interested in receiving a high-resolution version of this poster by email, please do let me know, I will send a cleaner version of the poster by email to you.

 

Advertisements

Please have your say

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s