Category Archives: Kannada

ಹಣ್ಣಿನಂಗಡಿ ಮತ್ತು ಸುಪ್ತ ಶೋಕ

ಹಣ್ಣಿನಂಗಡಿ ಮತ್ತು ಸುಪ್ತ ಶೋಕ

ಎರಡು ದಿನಗಳ ಹಿಂದೆ ನಮ್ಮ ಕುಟುಂಬದ ಹತ್ತಿರ ಸಂಬಂಧಿಗಳಲ್ಲಿ ಒಬ್ಬ ಹಿರಿಯರು ತೀರಿಕೊಂಡ ಸುದ್ದಿ ತಲುಪಿತು.  ಸುದ್ದಿ ಸಹಜ ನೋವು ಆ ಕ್ಷಣಕ್ಕೆ ನನ್ನ ಅನುಭವಕ್ಕೆ ಬಂತು. ನಾನು ಸಣ್ಣವನಿದ್ದಾಗ ಅವರು ಅಪರೂಪಕ್ಕೆ ಸಿಕ್ಕಾಗಲೆಲ್ಲಾ (ಸರ್ವೇ ಸಾಧಾರಣವಾಗಿ ಎಲ್ಲರೂ ಮಾಡುವಂತೆ) ನನ್ನನ್ನು ಎತ್ತಿ ಆಡಿಸುತ್ತಿದ್ದುದು ನೆನಪಿದೆ. ಅವರು ಯಾವಾಗ ಸಿಕ್ಕರೂ ಸೌಜನ್ಯಯುತವಾಗಿ, ಆಪ್ತವಾಗಿ ಮಾತನಾಡಿಸುತ್ತಿದುದರ ಬಗ್ಗೆ ನನ್ನಲ್ಲಿ ಯಾವತ್ತೂ ಗೌರವವಿತ್ತು. ಅಪರೂಪಕ್ಕೆ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ಬೇಸಿಗೆ ರಜೆಯಲ್ಲಿ ಅವರ ಮನೆಗೆ ಹೋಗಿ ನಾಲ್ಕು ದಿನ ಖುಷಿಯಾಗಿ ಕಾಲ ಕಳೆದುದನ್ನೂ ನಾನು ಮರೆತಿಲ್ಲ. ಹೀಗಿದ್ದೂ ಸಹ, ನನ್ನ ಅವರ ನಡುವೆ ಅಪೂರ್ವವಾದ ಬಾಂಧವ್ಯ ಎಂದು ಹೇಳುವಂಥದ್ದು ಏನೂ ಇರಲಿಲ್ಲ ಎಂಬುದೂ ನಿಜ. ಹೀಗೆ ಔಪಚಾರಿಕತೆಗಿಂತ ಹತ್ತು ಸೇರು ಹೆಚ್ಚು, ಹೃದಯ ಸಂಬಂಧಕ್ಕೆ ಎರಡು ಸೇರು ಕಡಿಮೆ ತೂಗುವ ಇಂತಹ ಸಂಬಂಧಿಕ, ಹಿರಿಯರ ಸಾವಿನ ಸುದ್ದಿ ನೋವನ್ನುಂಟು ಮಾಡಿದ್ದೂ ಅಷ್ಟೇ ನಿಜ. ಅವರನ್ನು ಕೊನೆಯದಾಗಿ ನೋಡಲೂ ಸಹ ದೂರದ ಊರಿನಲ್ಲಿದ್ದ ನನ್ನಿಂದ ಸಾಧ್ಯವಾಗಲಿಲ್ಲ.

ಹಣ್ಣಿನಂಗಡಿ ಮತ್ತು ಸುಪ್ತ ಶೋಕ
ಹಣ್ಣಿನಂಗಡಿ ಮತ್ತು ಸುಪ್ತ ಶೋಕ

ಸುದ್ದಿ ತಿಳಿದ ರಾತ್ರಿ ಚೆನ್ನಾಗಿ ನಿದ್ದೆ ಬಂದಿರಬಹುದು ಎನಿಸಿತ್ತು. ಕನಸಿನಲ್ಲಿ ನಾನು ಯಾರದ್ದೋ ಮನೆಗೆ ಹೋಗಿದ್ದೆ. ಯಾರದೆಂದು ಗುರುತಿಸಲು ಸಾಧ್ಯವಾಗಲಿಲ್ಲ. ಅಜ್ಜಿಯೊಬ್ಬರು ಅಂಗಳದಲ್ಲಿ ಕುರ್ಚಿಯ ಮೇಲೆ ಕುಳಿತು ದೊಡ್ಡ ತುರಿಯುವ ಮಣೆಯನ್ನು ತೊಡೆಗೆ ಆನಿಸಿಕೊಂಡು ಕೊಬ್ಬರಿ ತುರಿಯುತ್ತಿದ್ದರು. ಪಕ್ಕದ ಕಟ್ಟೆಯ ಮೇಲೆ ನನ್ನ ಸೋದರ ಸಂಬಂಧಿ (ತೀರಿಹೋದ ಹಿರಿಯ ಸಂಬಂಧಿಕರ ಮಗ) ಕುಳಿತಿದ್ದ. ನಾನು ಅವನ ಬಳಿ ಹೋಗಿ ಪಕ್ಕದಲ್ಲೇ ಕುಳಿತು ಹೆಗಲ ಮೇಲೆ ಕೈಹಾಕಿ ಮಾತನಾಡಲು ತಿರುಗಿದೆ. ಕ್ಷಣಾರ್ಧದಲ್ಲಿ ಅವನು ಅವರಪ್ಪನಾಗಿ ಬದಲಾಗಿದ್ದ! ನಾನು ಸಣ್ಣವನಿದ್ದಾಗ ಅವರಪ್ಪ ತಮ್ಮ ಹಣೆಯ ಮೇಲಿದ್ದ ಪುಟ್ಟ ಚುಕ್ಕಿಯಾಕಾರದ ಕುಳಿಯನ್ನು ತೋರಿಸುತ್ತಾ “ಇಲ್ಲಿ ಚಂದಿರ ಇದೆ, ಕೊಡುತ್ತೇನೆ ಬಾ” ಎಂದು ಹೇಳಿ ನನ್ನನು ಕರೆಯುತ್ತ ಇದ್ದುದು ನೆನಪಾಯ್ತು. ಅವರೂ ತಮ್ಮ ಎಂದಿನ ಸೌಜನ್ಯದೊಂದಿಗೆ ಆ ಚುಕ್ಕಿಯ ತೋರಿಸುವಂತೆಯೇ ನನ್ನೊಂದಿಗೆ ಮಾತನಾಡುವರೇನೋ ಎನ್ನುವಂತೆ ನನ್ನ ಕಡೆ ತಿರುಗಿದರು. ನಾನು ಮಾತನಾಡುವ ಬದಲಾಗಿ ಜೋರಾಗಿ ಅತ್ತು ಬಿಟ್ಟೆ. ನನ್ನ ಅಳು ನಿಂತ ಕ್ಷಣ ಅವರು ಮತ್ತೆ ನನ್ನ ಸಮಕಾಲೀನ ಸೋದರ ಸಂಬಂಧಿಯಾಗಿ ಬದಲಾಗಿದ್ದರು. ನಾನು ಮಾತು ಮುಗಿಸಿದವನಂತೆ ಎದ್ದೆ. ಸುಪ್ತ ಶೋಕದಿಂದ ಎದ್ದ ನಂತರ ಮನಸ್ಸು ಹಗುರಾಗಿದ್ದಂತೆ ಅನಿಸಿತು.

ನನ್ನ ಇದುವರೆಗಿನ ಜೀವನದಲ್ಲಿ ರಾತ್ರಿ ಕಂಡ ಕನಸುಗಳನ್ನು ನೆನಪಿಸಿಕೊಂಡು ಅವುಗಳಿಂದ ಹಗಲಿನಲ್ಲಿ ಹೊಸದನ್ನು ಕಲಿಯುವುದರ ಪಾತ್ರ ಬಹಳ ದೊಡ್ಡದು. ಇರುಳು ಕಂಡ ಬಾವಿಯಲ್ಲಿ ಹಗಲು ಬೀಳುವುದೆಂದರೂ ಚಿಂತೆಯಿಲ್ಲ. ನೂರರಲ್ಲಿ ೯೫ ಕನಸುಗಳು ಸಂಪೂರ್ಣವಾಗಿ ನೆನಪಿಗೆ ಬಾರದೆ ಹೋಗುತ್ತವೆ. ಹಲವು ಕನಸುಗಳಿಗೆ ಅರ್ಥ ಹುಡುಕುವುದೇ ಕಷ್ಟವಾಗುತ್ತವೆ (ಹಗಲುಗನಸುಗಳಿಗೂ ಕೊರತೆಯಿಲ್ಲ ಎನ್ನಿ). ಆದರೆ ನಾನು ಮೇಲೆ ವಿವರಿಸಿದ ದೃಶ್ಯದಷ್ಟು ಸರಳವಾದ ಕನಸು, ನೆನೆಪಿನಲ್ಲುಳಿಯುವಂಥ ಅಪರೂಪದ ಅನುಭವವವನ್ನುಂಟು ಮಾಡಿ, ಎದ್ದ ಮೇಲೂ ವಿವರವಾಗಿ ಜ್ಞಾಪಕವಿರುವುದು ವಿಶೇಷ ಎನಿಸಿತು. ಹೀಗೆ ಹಿಂದೆಯೂ ಕೆಲವೊಮ್ಮೆ ಆಗಿದೆ.

ಸರಳವಾದ ಈ ಮೇಲ್ಕಂಡ ಕನಸಿಗೆ ಕಾರಣವನ್ನು ಹುಡುಕುವ ಕಷ್ಟ ಇಲ್ಲದಿದ್ದರೂ, ಆ ಕನಸಿನ ಅರ್ಥವನ್ನು ಗ್ರಹಿಸಲು ನಾನು ಪ್ರಯತ್ನಪಟ್ಟೆ. ಆಗ ನನಗೆ ತೋಚಿದ ಸಮರ್ಥನೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಎರಡನೇ ತರಗತಿಯಲ್ಲಿದ್ದಾಗ ನಮಗೆ ಕನ್ನಡದ ಪಠ್ಯ ಪುಸ್ತಕದಲ್ಲಿ ಒಂದು ಪುಟ್ಟ ಗದ್ಯವಿತ್ತು. ಅದರಲ್ಲಿ ಬಾಲಕನೊಬ್ಬ ಹಣ್ಣಿನಂಗಡಿಯ ಮುಂದೆ ನಿಂತುಕೊಂಡು, ಹಿಸಿದ ಹಲಸಿನ ಹಣ್ಣನ್ನು ನೋಡುತ್ತಾ ಏನೋ ಯೋಚಿಸುತ್ತಿರುತ್ತಾನೆ. ಅಂಗಡಿಯವನು ಬಾಲಕನನ್ನು “ಹಣ್ಣು ಕೊಳ್ಳುವೆಯಾ?” ಎಂದು ಕೇಳುತ್ತಾನೆ. ಬಾಲಕ ಇಲ್ಲ ಎನ್ನುತ್ತಾನೆ. ಆಗ ಅಂಗಡಿಯವನು “ಈ ಹಣ್ಣುಗಳ ವಾಸನೆಯನ್ನು ನೀನು ಅಷ್ಟು ಹೊತ್ತಿನಿಂದ ಸೇವಿಸಿದ್ದೀಯೆ. ಅದಕ್ಕೆ ನೀನು ಹಣ ಕೊಡಬೇಕು” ಎಂದು ಚೇಷ್ಟೆ ಮಾಡುತ್ತಾನೆ. ಆ ಬಾಲಕ ಒಂದು ಕ್ಷಣ ಯೋಚಿಸಿ ತನ್ನ ಜೇಬಿನಲ್ಲಿದ್ದ ಚಿಲ್ಲರೆಯನ್ನು ಕುಲುಕಿ “ಝಣಝಣ” ಎಂದು ಸದ್ದು ಮಾಡಿಸಿ “ವಾಸನೆಯ ಬೆಲೆ ಇದೇ” ಎಂದು ಹೇಳುತ್ತಾನೆ. “ಹಣ್ಣು ಬಂದಿದೆ, ಜನರು ಹಣ್ಣು ಕೊಳ್ಳಿರೊ, ಪುರಂದರವಿಠಲನೆಂಬೋ ಹಣ್ಣು ಬಂದಿದೆ” ಎಂದು ಪುರಂದರ ದಾಸರು ಪ್ರೊಮೋಟ್ ಮಾಡಿದ ಹಣ್ಣನ್ನು ಕೊಂಡು, ಸರಾಗವಾಗಿ ಎಲ್ಲವನ್ನೂ ಜೀರ್ಣಿಸಿಕೊಂಡು ಹೋದವರಿದ್ದಾರೆ, ಮುಂದೂ ಬರುತ್ತಾರೆ. ಇರುವ ತನಕ ಝಣಝಣ ಸದ್ದು ಮಾಡುತ್ತಲೇ ಹಣ್ಣನ್ನು ಕೊಂಡೂ ಕೊಳ್ಳದಂತೆ ಆನಂದಪಡುವುದೂ ತಪ್ಪಲ್ಲ (“ಝಣಝಣ” ಶಬ್ದ = ಸುಪ್ತ ಶೋಕ).

Also see To Quantify Grief and Yours sincerely, PM

yours sincerely_ Gordon Brown

 

Advertisements

ಬೆಂಗಳೂರಿನಲ್ಲಿ ನಡೆದ “ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಸ್ತುತತೆ” ಚಿಂತನ ಗೋಷ್ಠಿ: ಒಂದು ವರದಿ

ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಸ್ತುತತೆ ಎಂಬ ಚಿಂತನ ಗೋಷ್ಠಿ ಹೋದ ವಾರ ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಬೆಂಗಳೂರಿನ ಮುನ್ನೋಟ ಪುಸ್ತಕ ಮಳಿಗೆ ಮತ್ತು ಐಟಿ ಕನ್ನಡ ಕೂಟವು ಜಂಟಿಯಾಗಿ ಹಮ್ಮಿಕೊಂಡಿದ್ದವು.  ಅದರ ಬಗ್ಗೆ ಪತ್ರಿಕೆಗಳಲ್ಲಿ ನಾಲ್ಕು ಸಾಲು ಸಹ ಸರಿಯಾಗಿ ಯಾರೂ ಬರೆಯಲಿಲ್ಲ.  ಮಧ್ಯದ ಪುಟದಲ್ಲಿ ಎಲ್ಲೋ ಮೂಲೆಯಲ್ಲಿ ಸಾರವಿಲ್ಲದ ಸಾರಾಂಶವನ್ನು ಗೀಚುವ ಪತ್ರಿಕೆಗಳನ್ನು ನೋಡುವ ಅಗತ್ಯವಿಲ್ಲ. ಇಂಥ ಮುಖ್ಯವಾದ ವಿಚಾರವನ್ನು ಪತ್ರಿಕೆಗಳು ವರದಿ ಮಾಡುವ ವಿಧಾನವನ್ನು ಮೂದಲಿಸುವ ಗೋಜಿಗೆ ಹೋಗದೆ ನಾನು ಆವತ್ತು ಕೇಳಿಸಿಕೊಂಡ ವಿಚಾರಗಳನ್ನು ಇಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ.  ಮುಖ್ಯ ಅಂಶಗಳಲ್ಲಿ  ನೆನಪಿನಲ್ಲಿರುವುದನ್ನು ಮಾತ್ರ ಬರೆಯುತ್ತಿದ್ದೇನೆ. ಯಾವ ನೋಟ್ಸ್ ಮಾಡಿಕೊಳ್ಳಲಿಲ್ಲ, ಯಾವುದನ್ನೂ ರಿಕಾರ್ಡ್ ಮಾಡಿಕೊಳ್ಳಲಿಲ್ಲ.  ಕಾರ್ಯಕ್ರಮ ನಡೆದು ಒಂದು ವಾರ ಕಳೆದಮೇಲೂ ನನ್ನ ನೆನಪಿನಲ್ಲಿ ಕೆಲವು ಅಂಶಗಳು ಉಳಿದಿವೆ ಎಂದರೆ ಅವು ಪರಿಣಾಮ ಬೀರಿದೆ ಎಂದು ಹೇಳಬಹುದು.

okkoota-pradeshika-BVB-May18-2017
Relevance of Regional Political Parties in the Indian Union- A discussion in Bengaluru, held on May 18, 2017,

ಸಭೆಗೆ ಮುಖ್ಯ ಅತಿಥಿಯಾಗಿ ಬಂದಿದ್ದವರು ಎಚ್ ಡಿ ದೇವೇಗೌಡರು. ಸುಮಾರು ಒಂದೂವರೆ ತಾಸು ತಡವಾಗಿ ಬಂದು ಕ್ಷಮೆ ಕೇಳಿದರು. ಅವರಿಂದ ಕಾರ್ಯಕ್ರಮ ಸಂಜೆ ೪ ಗಂಟೆಗೆ ಶುರುವಾಗಬೇಕಾಗಿದ್ದುದು ೫:೪೫ ಕ್ಕೆ ಶುರುವಾಯ್ತು. ಮುನ್ನೋಟದ ವಸಂತ ಶೆಟ್ಟಿ ಪ್ರಾಸ್ತಾವಿಕವಾಗಿ ಸುಮಾರು ಹದಿನೈದು ನಿಮಿಷ ಮಾತಾಡಿ, “ಕರ್ನಾಟಕಕ್ಕೆ ಈವತ್ತು ನಾಡು-ನುಡಿಯ ನಾಡಿ ಮಿಡಿತ ಬಲ್ಲ ಪ್ರಾದೇಶಿಕ ಪಕ್ಷವೊಂದರ ಅಗತ್ಯ ಯಾಕೆ ಇದೆ” ಎಂಬ ವಿಷಯಕ್ಕೆ ಪಾಯ ಹಾಕಿ ಕೊಟ್ಟರು.  ಹಿಂದಿ ಹೇರಿಕೆ, ಕೇಂದ್ರ ಸರ್ಕಾರಿ ಕೆಲಸಗಳಲ್ಲಿ ಕನ್ನಡಿಗರ ಅವಗಣನೆ, ನೀರಾವರಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಕರ್ನಾಟಕದ ಸ್ವಾಯತ್ತತೆಯು ಸಾಯುತ್ತಿರುವ ಬಗೆಯನ್ನು ಶೆಟ್ಟಿ ಗಟ್ಟಿಯಾಗಿ ಹೇಳಿದರು. ಅವರ ನಂತರ ವಕೀಲ-ರಾಜಕಾರಣಿ ಬಿ.ಎಲ್. ಶಂಕರ್ ಸುಮಾರು ೪೦ ನಿಮಿಷ ನಿರರ್ಗಳವಾಗಿ ವಿಷಯದ ಹಲವು ಆಯಾಮಗಳ ಕುರಿತು ಮಾತಾಡಿದರು. ಅವರು ಹೇಳಿದ ಅಂಶಗಳು…

  • ಭಾರತದ ಸಂವಿಧಾನದ ತಕ್ಕಡಿಯಲ್ಲಿ ಕೇಂದ್ರ ಸರ್ಕಾರದ ಬೊಟ್ಟು ರಾಜ್ಯ ಸರ್ಕಾರಗಳ ಬೊಟ್ಟಿಗಿಂತ ಹೆಚ್ಚು ತೂಗುತ್ತದೆ. ಸಂವಿಧಾನದ ತಿದ್ದುಪಡಿ ಮಾಡಲು ಲೋಕಸಭೆಗೆ ಅಧಿಕಾರವಿದೆ. ಲೋಕಸಭೆಯಲ್ಲಿ ೨/೩ ರ ಬಹುಮತದೊಂದಿಗೆ ಭಾರತ ಒಕ್ಕೂಟದ ಶೇಕಡಾ ೫೦ ರಾಜ್ಯಗಳು ಒಪ್ಪಿದರೆ ಸಾಕು, ಯಾವ ಬದಲಾವಣೆಯನ್ನು ಬೇಕಾದರೂ ತರಬಹುದು (ಉದಾ: GST ಮಸೂದೆ / ಕಾಯ್ದೆ). ರಾಜ್ಯ ಸರ್ಕಾರಗಳು ತಿದ್ದುಪಡಿಗಳನ್ನು ಸೂಚಿಸಲು ಕೂಡ ಅಶಕ್ತವಾಗಿವೆ.
  • ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಕೇಂದ್ರದಷ್ಟೇ ಬಲಿಷ್ಠವಾಗುವ ತನಕ “ಫೆಡರಲಿಸಂ” ಪದದ ನಿಜವಾದ ಅರ್ಥ “ಟ್ರೀಟಿ ಅಥವಾ ಒಪ್ಪಂದ” ಕ್ಕೆ ನ್ಯಾಯ ಸಿಗದು.
  • ಕನ್ನಡೇತರ ಐಎಎಸ್ ಅಧಿಕಾರಿಗಳಿಂದ, ಸ್ವಂತ ಬುದ್ಧಿ ಇಲ್ಲದ ರಾಜಕಾರಣಿಗಳಿಂದ ಕರ್ನಾಟಕಕ್ಕೆ ಕಂಟಕ ಬಂದಿದೆ

ಇದರ ನಂತರ ಪತ್ರಕರ್ತ ಎನ್. ಎ. ಇಸ್ಮಾಯಿಲ್ ಅವರು ಹಿಂದಿ ಹೇರಿಕೆಯ ಬಗ್ಗೆ ಚುಟುಕಾಗಿ ಆದರೆ ಮೊನಚಾಗಿ ಮಾತಾಡಿದರು.  “ಹಿಂದಿ ಭಾಷೆಯ ಬಗ್ಗೆಯಾಗಲೀ ಅಥವಾ ಬಾಲಿವುಡ್ ಸಿನೆಮಾ ಬಗ್ಗೆಯಾಗಲೀ ದಕ್ಷಿಣ ರಾಜ್ಯಗಳಲ್ಲಿ ಎಂದೂ ಹೆದರಿಕೆ ಇರಲಿಲ್ಲ. ಕೇಂದ್ರ ಸರ್ಕಾರದ ಹಿಂದಿ ಹೇರುವ ನೀತಿಗೆ ಕೇಂದ್ರ ಸರ್ಕಾರದ ರಾಜಕೀಯ ಅಸುರಕ್ಷಿತ ಭಾವನೆ ಅಥವಾ ಪೊಲಿಟಿಕಲ್ ಇನ್ಸೆಕ್ಯೂರಿಟಿಯೇ ಮುಖ್ಯವಾದ ಕಾರಣ” ಎಂದು ಇಸ್ಮಾಯಿಲ್ ಹೇಳಿದರು. ” ಹಿಂದಿ ಹೇರಿಕೆ ಒಂದು ರಾಜಕೀಯ ತಂತ್ರ. ಅದನ್ನು ಎದುರಿಸಲು ನಾಡು-ನುಡಿಯ ಬಗ್ಗೆ ಕಾಳಜಿ  ಇರುವ ರಾಜಕೀಯ ಹೋರಾಟ ಬೇಕಾಗಿದೆ” ಎಂದು ಅವರು ಹೇಳಿದಾಗ ಪ್ರೇಕ್ಷಕರು ಕರತಾಡನ ಮಾಡಿ ಒಪ್ಪಿಗೆ ಸೂಚಿಸಿದರು.

“ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಗಳಿಗೆ ಆಗಿರುವ ನ್ಯಾಯಾನ್ಯಾಯಗಳು” ಎಂಬ ವಿಚಾರವಾಗಿ ಮಾತನಾಡಿದವರು ಶಿಕ್ಷಕ-ರಾಜಕಾರಣಿ ವೈ.ಎಸ್.ವಿ. ದತ್ತ. ಇವರ ಮಾತಿಗೆ ಸಮಯದ ಅಭಾವ ಉಂಟಾಗಿತ್ತು.  ಹಾಗಾಗಿ, ಇವರು ವಿವರಗಳಿಗೆ ಹೋಗದೆ ಸೂಚ್ಯವಾಗಿ ಕೆಲವು ಉದಾಹರಣೆಗಳನ್ನು ಸ್ವಾರಸ್ಯಪೂರ್ಣವಾಗಿ ಪಟ್ಟಿ ಮಾಡಿದರು.  ಕೊಟ್ಟ ಉದಾಹರಣೆಗಳೆಲ್ಲವೂ ಸೂಕ್ತವಾಗಿದ್ದುವು ಮತ್ತು ಕರ್ನಾಟಕಕ್ಕೆ ಸೀಮಿತವಾಗಿರಲಿಲ್ಲ.  ಬಲಿಷ್ಠ ಪ್ರಾದೇಶಿಕ ನೇತೃತ್ವ ಇದ್ದಾಗ ಕೇಂದ್ರವು ರಾಜ್ಯದ ಪಾದಸೇವೆಗೆ ದೌಡಾಯಿಸುತ್ತಾ ಬಂದಿದೆ ಎಂದು ಅವರು ಕಾವೇರಿ ನ್ಯಾಯಮಂಡಳಿ ರಚನೆ ಮಾಡುವಾಗ (ತಮಿಳಿನಾಡಿನಲ್ಲಿ) ನಡೆದ ಬೆಳವಣಿಗಳನ್ನು ಉದಾಹರಿಸಿದರು.  ಎಚ್. ಡಿ. ದೇವೇಗೌಡರು, ದೇಶದ ಪ್ರಧಾನಿ ಆಗಿದ್ದಾಗ (ಯುನೈಟೆಡ್ ಫ್ರಂಟ್ ಸರ್ಕಾರ) ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುಕೂಲ ಮಾಡಿಕೊಡುವ ಸಲುವಾಗಿ, ಹಣಕಾಸಿನ ಕೊರತೆಯಿಂದ ನೆನೆಗುದಿಗೆ ಬಿದ್ದಿದ್ದ ದೇಶದ ಎಲ್ಲಾ ನೀರಾವರಿ ಯೋಜನೆಗಳಿಗೂ ಹಣ ಒದಗಿಸುವ ನಿಷ್ಪಕ್ಷಪಾತ ನಿರ್ಧಾರ ತೆಗೆದುಕೊಂಡರು ಎಂದು ಸ್ಮರಿಸಿದರು. ಆದರೆ, ದತ್ತ ಅವರು ತೆಗೆದುಕೊಂಡ ಬಹುತೇಕ ಉದಾಹರಣೆಗಳು ನೀರಾವರಿಗೆ ಸಂಬಂಧಿಸಿದ್ದೇ ಆಗಿದ್ದರಿಂದ ಕೊಟ್ಟ ವಿಷಯಕ್ಕೆ ನ್ಯಾಯ ಸಿಗಲಿಲ್ಲವೇನೋ ಎನಿಸಿತು.

ಇವಿಷ್ಟೂ ಚರ್ಚೆಗೆ ಪ್ರತಿಕ್ರಿಯೆ ಕೊಡುವ ಜವಾಬ್ದಾರಿ ದೇವೇಗೌಡರ ಮೇಲಿತ್ತು.  ಅವರು ತಮ್ಮ ರಾಜಕೀಯ ಸ್ಥಾನಕ್ಕೆ ತಕ್ಕುದಾದ ರೀತಿಯಲ್ಲಿ ಯಾರನ್ನೂ ವೈಯಕ್ತಿಕವಾಗಿ ದೂಷಿಸುವುದಕ್ಕೆ ಹೋಗಲಿಲ್ಲ. ಕಾವೇರಿ ವಿಚಾರದಲ್ಲಿ ರಾಜ್ಯ ರಾಜಕಾರಣವು ಒಗ್ಗಟ್ಟಾಗಿ ನಿಲ್ಲುವ ಸಂದರ್ಭದಲ್ಲಿ ದೇವೇಗೌಡರು ನಡೆದುಕೊಂಡ ಸಮಯೋಚಿತ ರೀತಿಯನ್ನು ಸಭೆಯಲ್ಲಿದ್ದವರೆಲ್ಲರೂ ಭಾರೀ ಕರತಾಡನದೊಂದಿಗೆ ಶ್ಲಾಘಿಸಿದರು. ಕೇಂದ್ರದಲ್ಲಿರುವ ಈಗಿನ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸುವುದಕ್ಕೆ ದೇವೇಗೌಡರು ಹಿಂಜರಿಯಲಿಲ್ಲ. ಆದರೆ, ಕಾರ್ಯಕ್ರಮದಲ್ಲಿ ಇತರರು ಮಂಡಿಸಿದ್ದ ವಿಚಾರಕ್ಕೆ ನೇರವಾಗಿ ಪ್ರತಿಕ್ರಿಯೆ ಕೊಡಲು ಅವರಿಗೆ ಸಾಧ್ಯವಾಗಲಿಲ್ಲ. ತಮ್ಮ ರಾಜಕೀಯ ಜೀವನದಲ್ಲಿ ಅನುಭವಿಸಿದ “ನೋವು” ಎಂದು ಪದೇ ಪದೇ ಪ್ರಸ್ತಾಪಿಸಿದರು.  ಆ “ನೋವು ಏನು ಎಂದು ವಿವರಿಸುವುದಿಲ್ಲ” ಎಂದು ಹೇಳಿದರು.  ವಿವರಿಸಲು ಇಷ್ಟವಿರದ ವಿಚಾರವನ್ನು ಪ್ರಸ್ತಾಪಿಸುವುದಾದರೂ ಯಾಕೆ ಎಂಬ ಪ್ರಶ್ನೆ ಅನೇಕರಲ್ಲಿ ಎದ್ದಿರುವಂತೆ ಕಂಡಿತು.  ತಮ್ಮ ಪ್ರತಿಕ್ರಿಯೆಯ ಉದ್ದಕ್ಕೂ “ನಾನು ಪ್ರಧಾನಿ ಆಗಿದ್ದಾಗ ತೆಗೆದುಕೊಂಡ ನಿರ್ಧಾರಗಳನ್ನು ಯಾರೂ ಸ್ಮರಿಸುವುದಿಲ್ಲ,  ನಾನು ಕರ್ನಾಟಕಕ್ಕೆ ಅನುಕೂಲವಾಗುವ ಅನೇಕ ನಿರ್ಧಾರಗಳನ್ನು ತೆಗೆದುಕೊಂಡೆ.  ಅದರ ಹೆಸರು ಬೇರೆಯವರಿಗೆ ಸಿಕ್ಕಿತು” ಎಂದು ಹಲುಬಿದರು. ದೇವೇಗೌಡರ ಇಳಿವಯಸ್ಸಿನ ಪ್ರತಿಕ್ರೆಯೆಯಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಿದ ನಮ್ಮದೂ ತಪ್ಪಿರಬಹುದು.  ಅವರ ೮೫ ನೇ ಹುಟ್ಟಿದ ಹಬ್ಬದ ಪ್ರಯುಕ್ತ ಅನೇಕರು ಅವರನ್ನು ಸನ್ಮಾಸಿದರು. ಕಾರ್ಯಕ್ರಮದುದ್ದಕ್ಕೂ ಅವರನ್ನು ಎಲ್ಲರೂ ಹೊಗಳುವವರೇ ಆಗಿದ್ದರು. ಯಾರೂ ಸಹ ಪ್ರಾದೇಶಿಕ ಪಕ್ಷಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸದೇ ಹೋದ ಯಾವ ಸಂದರ್ಭವನ್ನೂ ನೆನಸಿಕೊಳ್ಳಲಿಲ್ಲ.  ಪ್ರಾದೇಶಿಕ ಪಕ್ಷಗಳು ಪ್ರಸ್ತುತವಾಗಬೇಕಾದರೆ ಏನು ಮಾಡಬೇಕು ಎಂದು ಪರಿಹಾರಗಳನ್ನು ಹೇಳಲಿಲ್ಲ.  ಈ ಕೊರತೆಗಳ ಮಧ್ಯೆ ಯುವಕರ ಸಮೂಹವೊಂದು ಕರ್ನಾಟಕದ ಪರ ಯೋಚನೆಗಳನ್ನು ಮಾಡುತ್ತಾ,  ಕರ್ನಾಟಕದ ಹಿತವನ್ನು ಕಾಯಲು ಸಂಘಟಿತ ಪ್ರಯತ್ನದ ಮುನ್ನುಡಿ ಬರೆಯುತ್ತಿದ್ದಾರೆ ಎಂಬ ಆಶಾ ಭಾವನೆ ಎಲ್ಲರಲ್ಲೂ ಇತ್ತು.  

                

Gopalakrishna Adiga on Poetry and on Being a Poet

m-gopalakrishna-adiga
M. Gopalakrisha Adiga (1918-1992); photo courtesy: kamat.com

Mogeri Gopalakrisha Adiga (1918-1992) is one of the pioneers of the Navya (post-romantic) literary movement in Kannada that began in the second half of the 20th century. Some argue that MG Adiga (MGA) is to Kannada what TS Elliot is to English. The Waste Land (1922) by TS Eliot is one of the landmark poems of the 20th century English literature, marking the beginning of a new era of free verse, an era where a sense of despair triumphed over the sense of hope and harmony of the Wordsworthian Romantics. Adiga’s critically acclaimed poems in the navya genre punctuated the looming deterioration of Nehruvian Romanticism in India (late 1950s and early 1960s).

Kannadiga teenagers, who are introduced to Adiga in high school, generally fall in love with him because for them Adiga personifies angst and disillusionment. I was one of those teenagers who found Adiga the most practical and the hardened realist of all poets in my textbooks. However, I grew out of Adiga’s frustration as I got older. On my way to rediscovering my roots, I became more and more at home with the Navodaya (Romantic) tradition (B.M.Sri, Govinda Pai, Kuvempu, DR Bendre, Pu.Ti.Narasimhachar, SR Ekkundi, Kadengodlu, KSNa, SV Parameshwara Bhatta, GS Shivarudrappa and others). The Navya school of Kannada poetry, to which Adiga was the fountain head, rejected the style and interests of Navodaya poets. In my view, to reject a noble tradition (in this instance, the Navodaya tradition) one has to be steeped in it. When someone who is steeped in a tradition rejects his tradition, it is easier to believe that the rejection is authentic and legitimate. Many of Adiga’s poems that are popular with the commoner today were written in the romanticist style (including Yaava Mohana Murali Kareyitu, Aluva Kadalolu Teli Barutalide). Adiga was perhaps eligible to reject the style and mindset of the Navodaya tradition because Adiga was perfectly capable of writing some of the best Navodaya poems of his time. The same cannot be said of many of his contemporaries and literary successors.

I know Gopalakrishna Adiga through his poems. Many like me, who read modern classics in Kannada poetry, never saw the great poets and will never know what it is like to be one of those towering intellectuals of a given generation. It is important that we understand the poet to understand his poems.  Reading a few magic lines of verse has never been sufficiently satisfactory and certainly not to me. A few weeks ago, I was reading U R Ananthamurthy (1932-2014) and his recollections of Adiga and suddenly I realised that the year 2018 will mark the birth centenary of Adiga.

Here, I have translated (from Kannada to English) excerpts of an interview with Adiga done by U R Ananthamurthy (URA). URA was a pupil and an approving critic of Adiga. The interview was published in the deepavali special issue of Udayavaani in 1980. In the full Kannada version (available at kanaja.in) URA asks ten questions and Adiga has answered them all. In this excerpt, I have selected and combined a few of those questions and answers and I feel these are of interest to poets of any language. It is intriguing that a post-romantic socialist and existentialist like U R Ananthamurthy sounds very romanticist in his questions to Adiga. Don’t we all romanticise people we adore?

URA: Your poems draw a lot of inspiration from memories and experiences of your childhood.  Why is that? Will you illustrate one or two important incidents from your childhood that moulded your intelligence for writing poetry?

MGA: There are no easy answers to your question. It is worth searching for an answer though. Everything in this world looks fresh and new when seen through a child’s ever curious eyes. A child’s mind is like a (semi-molten) ball of wax and the worldly experiences get imprinted invisibly, only to reveal themselves at the right time later.  While this is true for every human being, the collective experience of a childhood takes a new dimension in the life of anyone [poet] with a creative imagination. These experiences and imaginations go beyond the standard notions of spatiotemporal reality and some of my successful poems may have experimented with such acts of creativity. It is difficult to tag distinct childhood experiences as less or more important.  When I look back, immediately I can hear the outcry of a frog struggling to escape the clutching pair of beaks of a crow. I can hear my own despairing heartbeat failing to save the frog.  I can hear and see tens and hundreds of big frogs in the pond near my home, making their ritualistic noise after the rains… I can go on listing many more.  None are less important and none are more so. Each incident had appeared important to me at some stage.

URA: It appears that you shifted from urban(e) symbols in some of your early poems to rural contexts in your later poems.  Has this shift anything to do with your childhood in rural Karnataka? Did the constraints of a language [Kannada] play any role?

MGA: It is true that at the time of Indian independence, we [poets and creative thinkers] were responding to our immediate past, which was characterised by an urbane consciousness. We were trying to escape from the shackles of urbane symbols and inadvertently I used urbane symbols in my early poems.  Perhaps, I should also acknowledge the influence of English poetry since urban thought was characteristic of many western civilisations.  However, writing poetry requires a lot more than merely being conscious of one’s surroundings.  A literary consciousness has to not only recognise and acknowledge the astonishing diversity of life but it also has to draw from a rich array of transient and symbolic inner experiences. Our [Indian] urban construct has not evolved to the level where it can distinguish itself from its rural roots. An adulterated urban language (a mixture of English and Kannada) is incapable of capturing transient inner experiences.The urban consciousness lingered in the superficial layers of my mind for too long and that may have forced me to search for vitality in a rural context (despite deterioration of the rural ideal).  It is natural that a person like me with a rural background, goes in search of a language framework in his rural roots. A poet succeeds when he finds a language that reconciles his inner [sub-conscious?] experiences with the conscious external experiences and knowledge.

This takes me to the constraints of Kannada on thinking and writing poetry [in 1980s] .  The formal form of Kannada language has evolved over many hundred years to serve the poets. There is the spoken form of the masses, and there is the modern scientific and technological vocabulary which is growing by the day. It is a constant three way dialogue between these three forms. Kannada as a language has to produce independent books and articles on the state-of-the-art scientific knowledge, which is still a long way away. A Kannada poet who wants to think about these modern challenges is struggling and his best bet is to go for the language that realistically captures his experiences [implied: rural and childhood experiences].

URA:  Do you feel you should write poems that are accessible [comprehensible] to the people?

MGA: When you say people, immediately the question arises which people? No art is easy for any people. Let us leave the common people alone.  Don’t we see many of those who are supposedly enlightened [educated?] showing limited or no sensitisation to art?  It is important that simple experiences materialise [in poems] with an ease that matches the simplicity of those experiences. At the same time, there will be other more layered and complicated experiences that require an equally sophisticated form of expression. It is wrong to say that a poem becomes a poem only when it is easily accessible and it is equally wrong to think that a poem is a good poem only when it is inaccessible. It is necessary that one has to break the boundaries of literary rhythm and [this is possible] only after one masters the form. However, the aim of breaking free from rhythmic verse is not a quest for ‘loose verse’.  We break free from one rigid frame [form] only to reframe [reinvent] ourselves in a new form. I agree that in the current context we [poets] have a duty to be accessible to the people [India was fresh out of political emergency in 1980]. This must be achieved through good education, through mass media and through nurturing a robust intellectual discourse.

Towards knowing Gandhiji – Part 4: Views on Linguistic Pluralism in India

The Q in GandhijiThere were several reasons why MK Gandhi was successful in becoming a pivot around which the common Indian opinion spun itself to become desi khadi.  Many believe that Gandhi’s success was in parts due to his stubbornness (be it the ethically contentious idea of ahimsa, or the crazy idea of celibacy or the brilliant idea of non-cooperation), and also his instinct for radical journalism played a role. One of the questions that has troubled me immensely over the last decade concerns the future of linguistic pluralism in India. Karnataka is inhabited by Kannada peoples (Kannadigas, Tuluvas, Kodavas, Konkanis and others who have learnt to speak/read/write one of these languages while they inhabit Karnataka). The tyranny of Hindi imposition (inhibition of other languagues) by the Indian central government on Karnataka makes my blood boil. My restraint is a form of cowardice and I have no hesitation in admitting that.

In 1922 Gandhi says

Non-violence, which only an individual can use is not of much use in terms of the society…our non-violence need not be of the strong, but it has to be of the truthful…Some of us seem unfortunately, to have merely postponed the date of revenge”. 

I wish my restraint had more inner strength as well as truthfulness, but I am not that lucky. I don’t know when I will end up doing something “foolish”.  I started wondering about the Mahatma’s position on languages in India. Here, I discuss my readings of Gandhi’s view on language pluralism in the pre-independent Indian subcontinent. I try to see if his views have any resonance with the present-day language federalism debate in India.

Gandhi used to run a multilingual journal while he was in South Africa and continued to do that after he came back to India. He apparently constituted state-congress committees on linguistic lines. These just show that Gandhi probably understood the importance of effective communication in the vernaculars of India. However, my initial readings of his selected works did not convince me that Gandhi had a pluralistic language philosophy.

gandhi-image

In 1909, Gandhi says

If man will only realise that it is unmanly to obey laws that are unjust, no man’s tyranny will enslave him.  This is the key to Self Rule. It is a superstition and ungodly thing to believe that an act of a majority binds a minority”.

And he goes on to say

it is we the English knowing Indians [less than 0.1% of ~2 million Indians in 1920s, now nearly 1 million out of 1.2 billion] that have enslaved India…we may learn and use English as the case may be.  Those who have studied English will have to teach morality to their children in their mother tongue, and to teach them another Indian language, but when they have grown up, they may [opt] to learn English. We have to improve all our languages…English books which are valuable should be translated into various Indian languages”

All of these sound just great, don’t they?  If we take Gandhi’s arguments in the context of Hindi majoritarian politics played by the Central government today, Kannadigas must feel no obligation to follow unjust constitutional provisions exploited by the Central government.  Hindi must not be allowed to be the official language of the Indian union.  They must repeal all privileges extended to Hindi (at the cost of other Indian languages) or they must extend all privileges to all Indian languages. The former is more practical than the latter. If and only if we (Kannadigas) disobey the central government (on these matters) that we will fulfil our ambitions of living in economically, linguistically, and psychologically autonomous Karnataka. We don’t and must not oppose the Indian constitutional values. We must however not accept constitutional provisions that undermine our regional and ethnic identity (I cannot say the same with conviction when it comes to religious and caste identities). Before we feel enthused by Gandhi’s universal philosophy of disobedience (when faced with unjust laws), I was disappointed to read this from Gandhi who argues the following (again in 1909)

Every cultured Indian will know in addition to his own provincial language [two more languages] …A Hindu [will know] Sanskrit, a Muslim [will know] Persian, and all [will know] Hindi.  Northerners should learn Tamil. A universal language for India should be Hindi, with an option to write it in both Persian and Nagari characters…in order that Hindus and Muslims may have closer relations”.

In 1925 Gandhi says the following

if English were our common language…then the democracy will be [that] of a mere handful. Common language of the vast mass can never be English. It is a matter of course a resultant of Hindi and Urdu or Hindustani as I would call it….our English speech [has made us] foreigners in our own land. I have profound admiration for the English language…but I have no matter of doubt in my mind that the English language and people occupy a place in our life which retards our progress”

Let me suggest to all of you to replace the word ‘English’ with the word ‘Hindi’ in Gandhi’s quote given above and replace ‘Hindi’ with ‘Regional languages’. That will be a neat summary of my attitude towards Hindi today.  Gandhi mentions Tamilu as an example perhaps because he was familiar with Tamil through his South African experience.  But, I hate it when North Indians (including MK Gandhi) see all South Indians as Tamilians. Are all North, West and East Indians Hindi speakers?  I am sure non-South Indians will be offended by such a remark.  People living in Karnataka are Kannada peoples (please see the introductory paragraph for a definition of Kannada peoples). North Indians must know that Kannada is among the most ancient living languages in the world (not just South India) and Kannada’s prolific literary tradition is second to none in the world (let alone South India).

Back to Gandhi’s ideas on Hindi, and frankly some of them are outrageous in the modern Indian context.  Gandhi was thinking about religious harmony but he could not foresee the venomous propaganda of a Hindi-centric central administrator. Let us grant and understand that Gandhi was trying to unify divergent religious forces to fight the British. However, his notion that Hindi must be known by all Indians is at the heart of Hindi hegemony in India. Hindi is retarding our progress. By raising our voice for linguistic autonomy in everything in our lives, we Kannada people are not advocating a Kannada majoritarian oppression of others in Karnataka. We are asking (requesting) people residing in Karnataka state to learn Kannada or any other language of Karnataka. By doing so, non-Kannada people will not only win their bread while in Karnataka, they will also win our hearts and minds.  

ಕಾವೇರಿ ವಿವಾದ: ಕರ್ನಾಟಕವನ್ನು ಜಯಲಲಿತಾ ದ್ವೇಷಿಸಲು ಕಾರಣವೇನು?

parallelsಮದ್ರಾಸಿನಿಂದ ಬೆಂಗಳೂರಿಗೆ ಇರುವಷ್ಟು ಬಸ್ಸು ರೈಲುಗಳ ಸಂಚಾರ ದುರದೃಷ್ಟವಶಾತ್ ಬೆಂಗಳೂರು ಹುಬ್ಬಳ್ಳಿ, ಅಥವಾ ಬೆಂಗಳೂರು ಬೀದರ್, ಅಥವಾ ಬೆಂಗಳೂರು ಮಂಗಳೂರಿನ ನಡುವೆ ಇಲ್ಲ.  ಈಗಿನ ಟೆಲಿಫೋನ್, ಇಂಟರ್ನೆಟ್ ವ್ಯವಸ್ಥೆಯಂತೂ ಹಿಂದೆಂದಿಗಿಂತಲೂ ಚೆನ್ನಾಗಿದೆ. ಬೆಂಗಳೂರು ಐಟಿ ನಗರಿ ಬೇರೇ!  ಹೀಗಿದ್ದಾಗ್ಯೂ ತಮಿಳುನಾಡಿನ ಮುಖ್ಯಮಂತ್ರಿ (೨೦೧೬ ಅಕ್ಟೋಬರ್ನಲ್ಲಿ ಇನ್ನೂ ಅಧಿಕಾರದಲ್ಲಿರುವ) ಜಯಲಲಿತಾ ಅವರು ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ಕರ್ನಾಟಕವನ್ನು ಸುಪ್ರೀಂ ಕೋರ್ಟಿನಲ್ಲೇ ಲಾಯರ್ಗಳ ಮೂಲಕ ಮಾತನಾಡಿಸುವುದು ಆಕೆಯ ಪದ್ಧತಿ. ಅದ್ಯಾವುದೂ ಬೇಡ. ಕೇಂದ್ರ ಸರ್ಕಾರವನ್ನು ಬೇಕಾದಂತೆ ಹೆದರಿಸಿ, ಪುಸಲಾಯಿಸಿ ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿಗಳ ಸಾಂದ್ರತೆಯನ್ನು ಹೆಚ್ಚಾಗಿಸಿಕೊಂಡಿರುವ ಕೀರ್ತಿ ಅವರದ್ದು.  ಮನಸ್ಸು ಮಾಡಿದರೆ ಜಯಲಲಿತಾ ಅವರು ತಮ್ಮ ಐಷಾರಾಮಿ ಯಂತ್ರ ರಥದಲ್ಲಿ ಬೆಂಗಳೂರಿಗೆ ಬರುವುದೂ ಕಷ್ಟವಲ್ಲ.  ಆದರೆ,  ಆಕೆ ಹಾಗೆ ಮಾಡುವುದಿಲ್ಲ.  ಪಾಪ, ಮುದುಕ ಕರುಣಾನಿಧಿಯವರಾದರೂ ಕರ್ನಾಟಕದ ರಾಜಕಾರಣಿಗಳ ಜೊತೆ ಮಾತನಾಡುವ ಕರುಣೆ ಸೌಜನ್ಯ ತೋರುತ್ತಾರೆ.  ಈ ಜಯಲಲಿತಾ ಎಂಬ ಮಾಜಿ ನಟಿ, ನರ್ತಕಿಗೆ ಕರ್ನಾಟಕ ಎಂದರೆ ಕಿಡಿ ಕಾರುವಷ್ಟು ದ್ವೇಷ.  ಯಾಕೆ ಹೀಗೆ?

ಮನುಷ್ಯನಿಗೆ ತನ್ನ ಮೂಲ ಬೇರಿನ ಅರಿವು ಹುಟ್ಟಿನಿಂದ ಸಾವಿನವರೆಗೆ ಅನೇಕ ರೀತಿಗಳಲ್ಲಿ ಕಾಡುವಂಥ ವಿಷಯ.  ಕೆಲವರಿಗೆ ಅನಿವಾರ್ಯವಾಗಿ ತಮ್ಮ ಹುಟ್ಟಿದೂರಿನಿಂದ ದೂರ ಇರಬೇಕಾದ ಪರಿಸ್ಥಿತಿ ಇರುತ್ತದೆ. ಕೆಲಸಕ್ಕಾಗಿಯೋ, ಶುಶ್ರೂಷೆಗಾಗಿಯೋ, ಕೌಟುಂಬಿಕ ದುರಂತಗಳಿಂದಲೋ, ದಂಗೆ, ಭೂಕಂಪ, ನೆಲ ಮುಳುಗಡೆ ಇತ್ಯಾದಿಗಳ ಕಾರಣದಿಂದಲೋ ತಮ್ಮ ಹುಟ್ಟೂರನ್ನು ತೊರೆದು ಬೇರೆಡೆ ನೆಲೆಸಿರುವವರ ಸಾಲಿನಲ್ಲಿ ಜಯಲಲಿತಾ ಕೂಡ ಒಬ್ಬರು.  ಕರ್ನಾಟಕದ ಮೇಲುಕೋಟೆಯಲ್ಲಿ ಜನಿಸಿದ ಜಯಲಲಿತಾರ (ಅಯ್ಯಂಗಾರಿ ಹೆಣ್ಣು) ಅಜ್ಜ ಮೈಸೂರು ಮಹಾರಾಜರ ಆಸ್ಥಾನದಲ್ಲಿ ವೈದ್ಯರಾಗಿದ್ದವರು. ಕನ್ನಡ ಬಲ್ಲ ಅನೇಕ ಅನ್ಯ ಭಾಷಿಕ ಕುಟುಂಬಗಳು ಕರ್ನಾಟಕದಲ್ಲಿ ನೂರಾರು ವರ್ಷಗಳಿಂದ ನೆಲಸಿವೆ. ಮನೆಮಾತು ತೆಲುಗು, ತಮಿಳು ಅಥವಾ ಉರ್ದು ಆಗಿದ್ದರೂ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾರೆ ಆ ಜನ. ಮೇಲುಕೋಟೆಗೂ ಕಾವೇರಿ ನದಿಗೆ ಕಟ್ಟಿರುವ ಕನ್ನಂಬಾಡಿ ಕಟ್ಟೆಗೂ (KRS) ಬರೀ ೨೫ ಮೈಲು ದೂರ ಅಷ್ಟೇ. ಕಾರಣಾಂತರಗಳಿಂದ ಜಯಲಲಿತಾ ತಮಿಳುನಾಡಿನ ಮದ್ರಾಸಿನಲ್ಲಿ ಚಲನ ಚಿತ್ರನಟಿಯಾಗಿ ಬೆಳೆದರು. ರಾಜಕಾರಣಿಯಾದ ಮೇಲಂತೂ ಸಂಪೂರ್ಣವಾಗಿ ತಮಿಳು ಲೋಕದಲ್ಲಿ ತೇಲಾಡುವಂತಾಯ್ತು.  ಇಂತಹ ಹೆಂಗಸಿಗೆ ಕಾವೇರಿ ನದಿ ನೀರಿನ ಹಂಚಿಕೆಯ ವಿಚಾರದಲ್ಲಿ “ತಾನು ಕರ್ನಾಟಕದಲ್ಲಿ ಹುಟ್ಟಿದ್ದರೂ ಸಂಪೂರ್ಣವಾಗಿ ತಮಿಳ್ಕನ್ಯೆಯಾಗಿ ತಮಿಳರ ಸೇವೆ ಮಾಡುತ್ತಿದ್ದೇನೆ” ಎಂದು ತೋರಿಕೊಳ್ಳುವುದು ಮುಖ್ಯ ಆದರೆ ಆಶ್ಚರ್ಯ ಏನಿಲ್ಲ.  ತಮಿಳು ಭಾಷೆ, ತಮಿಳು ಜನ ಎಂದರೆ ಜಗತ್ತಿನಲ್ಲೇ ಶ್ರೇಷ್ಠ ಎಂದು ಕುರುಡು ನಂಬಿಕೆ, ಭ್ರಮೆಯಲ್ಲಿರುವ ಆ ರಾಜ್ಯದ ಜನತೆಯು  ಕನ್ನಡನಾಡಿನಲ್ಲಿ ಹುಟ್ಟಿದ ತಮಿಳ್ಗನ್ನಡತಿ ಒಬ್ಬಳನ್ನು ಮುಖ್ಯಮಂತ್ರಿ ಎಂದು ಒಪ್ಪಿರುವುದೇ ಆಶ್ಚರ್ಯ.  ಆಕೆ ತಮಿಳು  ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರಬಹುದು.  ಆದರೆ ದ್ವಿಭಾಷಾ, ತ್ರಿಭಾಷಾ, ಚತುರ್ಭಾಷಾ ಚಿತ್ರ ನಟರು ಎಷ್ಟು ಜನ ಬಂದು ಹೋಗಿಲ್ಲ?  ಕರ್ನಾಟಕಕ್ಕೆ ಈಕೆ ಒಂದು ಹನಿ ಮೃದುತ್ವ ತೋರಿಸಿದರೂ ತಮಿಳರು ಆಕೆಯನ್ನು ದ್ರೋಹಿ ಎಂದು ಹಣೆಪಟ್ಟಿ ಕಟ್ಟಿ ಅವಹೇಳನ ಮಾಡಿ ಗಡೀಪಾರು ಮಾಡಬಹುದು.  ಶಿಕ್ಷೆಗೆ ಹೆದರಿ ಜಯಲಲಿತಾ ತಮ್ಮ ಹುಟ್ಟಿದ ನಾಡಿಗೆ ವಿರುದ್ಧವಾಗಿ, ಅಗತ್ಯಕ್ಕಿಂತಲೂ ಹೆಚ್ಚಾದ ಕಿಡಿಕಾರುತ್ತಾರೆ ಎಂಬುದು ನನ್ನ ಅಭಿಮತ. 

ಹುಟ್ಟಿದೂರು, ಬೆಳೆದ ಊರು, ಅನ್ನ ಕೊಟ್ಟ ಊರು ಇತ್ಯಾದಿಗಳಲ್ಲಿ ಯಾವುದಕ್ಕೆ ಮನುಷ್ಯನ ನಿಷ್ಠೆ ಮೀಸಲಾಗಿರಬೇಕು ಎಂಬುದು ಜಟಿಲ ಸಮಸ್ಯೆ.  ನನ್ನ ಪ್ರಕಾರ ಮನುಷ್ಯನ ನಿಷ್ಠೆ ಅವನು ಬೆಳೆದ ಊರಿಗೆ ಮೀಸಲಾಗಿರುತ್ತದೆ. ಹುಟ್ಟಿದೂರು, ತಾಯ್ನುಡಿ, ದುಡಿದ ಊರು ಎಲ್ಲವೂ ಪ್ರಾಸಂಗಿಕ.   ಅನ್ನ ಕೊಟ್ಟ ಊರು ಅತಿ ಮುಖ್ಯ ಎಂದು ಜಯಲಲಿತಾರ ನಡವಳಿಕೆ (ಇನ್ನೂ ಅನೇಕರ ನಡವಳಿಕೆ) ತೋರಿಸುತ್ತದೆ.  ಆದರೆ ಜಯಲಲಿತಾರ ಹದಿಹರೆಯದಲ್ಲಿ ಅವರು ಮದ್ರಾಸಿನಲ್ಲೇ ಇದ್ದರು ಎಂಬುದನ್ನು ಮರೆಯಬಾರದು. ಹೊರ ದೇಶದಲ್ಲಿರುವ ಭಾರತೀಯ ಸಂಜಾತರನ್ನೇ ನೋಡಿ.  ಅವರಲ್ಲಿ ಭಾರತದ ಬಗ್ಗೆ ಇರುವ ಕಕ್ಕುಲಾತಿ ಕಡಿಮೆ ಆಗಿರುವುದಿಲ್ಲ.  ಅದಕ್ಕೆ ಕಾರಣ ಅನ್ನದ ಋಣ ಅಲ್ಲ.  ಬದಲಾಗಿ ಅವರ ಬಾಲ್ಯದ ಋಣ ಅಥವಾ ಬಾಲ್ಯದಲ್ಲಿ ಅವರ ಮನಸ್ಸನ್ನು ಕಟೆದ ವಾತಾವರಣಕ್ಕಾಗಿ ಹಾತೊರೆತ. ಹಾಗಿದ್ದಾಗ್ಯೂ ಅನ್ಯ ದೇಶದ ಭಾರತೀಯ ಸಂಜಾತ ನಾಗರಿಕರಿಗೆ ಭಾರತದ  ಆಂತರಿಕ ವ್ಯವಾಹಾರದಲ್ಲಿ ಎಷ್ಟೇ ಆಸಕ್ತಿ ಇದ್ದರೂ, ಅವರ ನಿಷ್ಠೆ ಭಾರತಕ್ಕಾಗಿ ಇರುವುದಿಲ್ಲ, ಇರಬಾರದು, ಇದ್ದರೆ ಅದು ತಪ್ಪು. ಭಾರತವನ್ನು ತೊರೆದು ಅನ್ಯ ದೇಶದ ನಾಗರಿಕತ್ವವನ್ನು ಸ್ವೀಕರಿಸಿದವರಿಗೂ ಅದು ಅನ್ವಯಿಸುತ್ತದೆ.  ಅನ್ಯ ದೇಶದಲ್ಲೇ ಹುಟ್ಟಿ ಬೆಳೆದ ಭಾರತೀಯ ಮೂಲದ ಮಕ್ಕಳನ್ನು ನೋಡಿ ಸಾಕು.  ಅವರು ಯಾವ ರೀತಿಯಿಂದಲೂ ಭಾರತೀಯರಲ್ಲ.  ಮೈ ಬಣ್ಣಕ್ಕೂ, ತಾಯ್ನುಡಿಗೂ, ವಂಶವಾಹಿಗಳಿಗೂ, ಭಾರತೀಯತೆಗೂ ಅರ್ಥಾತ್ ಸಂಬಂಧವಿಲ್ಲ. 

ಇಷ್ಟೆಲ್ಲಾ ಚರ್ಚಿಸಿ, ಜಯಲಲಿತಾರ ನಡವಳಿಕೆಯನ್ನು ಸಹಜದ ಸಾಲಿಗೆ ಸೇರಿಸುವ ಉದ್ದೇಶ ನನಗಿಲ್ಲ.  ಜಯಲಲಿತಾರ ನಿಷ್ಠೆ ಎನ್ನುವುದಕ್ಕಿಂತ ಸ್ವಪ್ರತಿಷ್ಠೆ ಕರ್ನಾಟಕಕ್ಕೆ ತೊಂದರೆ ಕೊಡುತ್ತಿದೆ ಎನ್ನಬಹುದು.  ಕಾರಣ ಏನೇ ಇದ್ದರೂ ಜಯಲಲಿತಾರ ಕರ್ನಾಟಕ ವಿರೋಧಿ ಧೋರಣೆ ತುಂಬಾ ಕೀಳು ಮಟ್ಟದ್ದು ಎಂಬುದರಲ್ಲಿ ಸಂಶಯವಿಲ್ಲ.  ನೀರಿಗಾಗಿ ಕನ್ನಡಿಗರನ್ನು ಕೋರ್ಟಿಗೆಳೆದು, ಅನ್ಯಾಯವಾಗಿ ನ್ಯಾಯಾಧೀಶರುಗಳಿಂದ ಕರ್ನಾಟಕವನ್ನು ನಿಂದನೆಗೆ ಗುರಿಪಡಿಸುವ ಜಯಲಲಿತಾ ಕರ್ನಾಟಕದಲ್ಲಿ ಹುಟ್ಟಿದವರು ಎಂಬುದು ನಾಚಿಕೆಗೇಡಿನ ವಿಷಯ.  ತಾನು ಯಾಕಾದರೂ ಕರ್ನಾಟಕದಲ್ಲಿ ಹುಟ್ಟಿದೆನೋ ಎಂದು ಆಕೆಯೂ ಪರಿತಪಿಸುತ್ತಿರಬಹದು.  ಪರಿತಪಿಸಿ ಪ್ರಯೋಜನವಿಲ್ಲ.  ಕರ್ನಾಟಕದೊಂದಿಗೆ ಅನುಸಂಧಾನ ತಮಿಳರಿಗೆ ಒಳಿತು ಎಂದು ಜಯಲಲಿತಾ ಅರಿತ ದಿನ ಅವರೂ ಉದ್ಧಾರ ಆಗುತ್ತಾರೆ, ಅವರ ಅಜ್ಜನಿಗೆ ಅನ್ನ ಹಾಕಿದ ಕನ್ನಡದ ನೆಲವೂ ನಿಟ್ಟುಸಿರು ಬಿಡುತ್ತದೆ. 

———————————————

Added on 14-Dec-2016

I know this is slightly off the point here but may be relevant nonetheless.  The demise of Ms Jayalalithaa (Chief Minister of Tamil Nadu) made many praise her for upholding federalism in India and showing how regional prominence can propel someone to national significance and thus obtain economic dividends for a state.  Some have even mourned the demise of federal politics in South India. What they don’t realise is regionalists have imposed their views on the nation too.  Let me give you an example (a silly one).  The current Chief Minister of West Bengal Ms Mamatha Banerjee was once a Union railway minister.  She introduced new superfast trains and called them “Duronto Express”.  Duronto is a Bengaali version of the the Hindi word “turant” (origin: Sanskrit; ‘twarita’ meaning “urgently”).  What she did not realise is the word Duronto and its variant Duranta has a different meaning in Kannada (again the word duranta is of Sanskrit origin). Duranta means “tragic end” in Kannada and may be in other languages too.  It was indeed a tragedy that Bengali was imposed on us.  She was championing her regional identity.  Let her name a regional express in West Bengal a tragic express.  Who cares? 

I am afraid people like me do not trust our representatives and less so of other states.  I do not like this distrust and this political distrust stems from economic distrust between the states, and between the state and the centre.  I strongly support greater autonomy for state governments in everything (except national security). I hope a day will come when we spend our money in our state for our people and not send crores to New Delhi (Hindiwallahs), who will use that money to destroy our identity and misuse our resources. Is there a peaceful way of getting a better deal for Karnataka and Kannada?  I certainly hope so.