ಕರ್ನಾಟಕ ಸುವರ್ಣ ಸಂಭ್ರಮ – ಎಷ್ಟು ದಿನ ಈ ಒಲ್ಲದ ಮೆರವಣಿಗೆ

ಕರ್ನಾಟಕದ ನಾಮಕರಣ ಸುವರ್ಣ ಸಂಭ್ರಮದ ವರ್ಷವಿದು.  ರಾಜ್ಯಕ್ಕೆ ಕರ್ನಾಟಕವೆಂದು ಅಧಿಕೃತವಾಗಿ ನಾಮಕರಣವಾದ ಘಳಿಗೆಗೆ ಮಾತ್ರ ಸುವರ್ಣ ಸಂಭ್ರಮ ಎಂದು ಜನ ಮರೆತಿರುವಂತಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಮೈಸೂರು ಪ್ರಾಂತ್ಯದವರ ಮತ್ತು ಉತ್ತರ ಕರ್ನಾಟಕ ಭಾಗದ ಜನರಲ್ಲಿದ್ದ ಭಿನ್ನಾಭಿಪ್ರಾಯಗಳನ್ನು ಇತಿಹಾಸ ಅಧ್ಯಯನ ಮಾಡುವ ಕೆಲವರು ಅಕ್ಷರ ಮಾತ್ರವಾಗಿ ಓದಿ “ಕರ್ನಾಟಕ ಏಕೀಕರಣ” ಅಲ್ಲ ಅದು “ಕರ್ನಾಟಕವೆಂಬ ಹೊಸ ರಾಜ್ಯದ ಉಗಮ” ಎನ್ನುವ ವಾದವನ್ನೂ ಮಾಡುತ್ತಿದ್ದಾರೆ. ಕುವೆಂಪು ಮತ್ತು ಆಲೂರು ವೆಂಕಟರಾಯರಂಥವರು ಕಂಡ ಕರ್ನಾಟಕ ದೇಶದ ಪರಿಕಲ್ಪನೆಗೆ ಸಹಸ್ರಮಾನಕ್ಕೂ ಮಿಗಿಲಾದ ಇತಿಹಾಸವಿದೆ ಎಂಬ ಸತ್ಯವು ಇವರೆಲ್ಲರಿಗೂ ಅಪ್ರಿಯವಾಗಿರುವುದರ ವಿಚಾರ ಬೇರೆ. ಇವರಲ್ಲಿ ಕೆಲವರು ಭಾರತ ದೇಶ ಮೊದಲು, ಕರ್ನಾಟಕ ಎಂದರೆ ಏನು? ಅದು ಭಾರತವೇ ಅಲ್ಲವೇ ಎನ್ನುವ ದೇಶಪ್ರೇಮಿಗಳೂ ಇದ್ದಾರೆ.  ಇವರ ಮಧ್ಯೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಮತ್ತು ಕನ್ನಡದ ಸ್ಯಾಯತ್ತತೆ ಎದುರಿಸುತ್ತಿರುವ ಸವಾಲುಗಳು ಎಂಥದ್ದು ಎಂಬುದರ ಅರಿವು ಇದೆಯೆ ಎಂಬ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತಿರುತ್ತದೆ.  ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಉದಾಹರಣೆಯಾಗಿ ಗಮನಿಸಿದರೆ “ದೇಶ ಮೊದಲು” ಎನ್ನುವ ದೇಶಪ್ರೇಮಿಗಳ ಸೋಗಿನಲ್ಲಿರುವ ನಾಡದ್ರೋಹಿಗಳು ಮಾಡುತ್ತಿರುವ ಅಪಾಯವು ಸ್ವಲ್ಪ ಮಟ್ಟಿಗಾದರೂ ಅರಿವಿಗೆ ಬರುತ್ತದೆ.  

೧.  ಶತಮಾನಕ್ಕಿಂತ ಹಳೆಯದಾದ ರಾಜ್ಯ ವಿಶ್ವವಿದ್ಯಾಲಯವನ್ನು ಕೇಂದ್ರೀಯ ವಿಶ್ವವಿದ್ಯಾಲಯವನ್ನಾಗಿಸಿದರೆ ಕೇಂದ್ರದಿಂದ ಹಣ ಸಿಗುತ್ತದೆ ಎನ್ನುವ ಮಾತನ್ನು ಮೈಸೂರು ವಿಶ್ವವಿದ್ಯಾಲಯದ ಪದಾಧಿಕಾರಿಗಳೊಬ್ಬರು ಹೇಳಿರುವುದನ್ನು ಪ್ರಜಾವಾಣಿಯು ಪ್ರಕಟಿಸಿತ್ತು. ದೇಶದ ಎಲ್ಲೆಡೆಯಿಂದ ಸಂಶೋಧಕರು ಅಧ್ಯಯನಾರ್ಥಿಗಳು ಮೈಸೂರಿಗೆ ಬರಲು ಸಹಾಯವಾಗುತ್ತದೆ ಎಂಬ ಆಶಯ ಅವರದು.  ಹಂಪಿಯಲ್ಲಿರುವ ಕನ್ನಡ ವಿವಿಯು ಸಂಫೂರ್ಣವಾಗಿ ರಾಜ್ಯ ಸರ್ಕಾರದ ಸುಪರ್ದಿನಲ್ಲಿದೆ.  ಅದರ ಇಂದಿನ ಆರ್ಥಿಕ ಮತ್ತು ಬೌದ್ಧಿಕ ದುಸ್ಥಿತಿಯನ್ನು ನೋಡಿರುವವರಿಗೆ   ಮೈಸೂರು ವಿವಿಗೆ ಕೇಂದ್ರ ಸರ್ಕಾರದ ಮೇಲೆ ಯಾಕೆ “ಲವ್” ಉಂಟಾಗಿದೆ ಎಂದು ಗೊತ್ತಾಗುತ್ತದೆ.  ಹೀಗೆ ರಾಜ್ಯ ವಿವಿಗಳನ್ನು ಉಪವಾಸ ಕೆಡವಿ, ಇಲ್ಲವೇ ಕೇಂದ್ರಕ್ಕೆ ಒಪ್ಪಿಸಿ, ಇರುವ ಮೂರು ಮುಕ್ಕಾಲು ಹಲ್ಲುಗಳನ್ನು ಕೀಳಿಸಿಕೊಂಡು ಬೊಚ್ಚು ಬಾಯಿ ಪೆಚ್ಚು ಮುಖ ಇಟ್ಟುಕೊಂಡು ಸನ್ಯಾಸ ಸ್ವೀಕರಿಸಲು ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಪಣ ತೊಟ್ಟಂತಿದೆ.

೨.  ಬೆಂಗಳೂರು ಮತ್ತು ಚೆನ್ನೈ ನಡುವೆ ಹೈ ಸ್ಪೀಡ್ ರೈಲನ್ನು ಓಡಿಸಲು ಕೇಂದ್ರ ರೈಲ್ವೆ ಸಚಿವರು ಆಸಕ್ತಿ ತೋರಿಸಿದ್ದಾರೆ ಎಂದು ವರದಿಯಾಗಿತ್ತು. ಅವರಿಗೂ ಕರ್ನಾಟಕ್ಕಕ್ಕೂ ಸಂಬಂಧವಿಲ್ಲ. ಕೇಂದ್ರ ಸರ್ಕಾರಕ್ಕೆ ಕರ್ನಾಟಕವೆನ್ನುವುದು ಚಿನ್ನದ ಮೊಟ್ಟೆ ಇಡುವ ಕೋಳಿ.  ಜಿ ಎಸ್ ಟಿ ಮತ್ತು ಸೆಸ್ ಮೂಲಕ ವಸೂಲಿ ಮಾಡುತ್ತಿರುವುದನ್ನು ಬಿಹಾರ, ಗುಜರಾತು, ಮತ್ತು ಉತ್ತರಪ್ರದೇಶದಲ್ಲಿ ಸುರಿಯಲು ಬಹಳ ಅನುಕೂಲವಾಗಿರುವಾಗ ಕರ್ನಾಟಕದ ಬಗ್ಗೆ ಕಾಳಜಿ ಎಲ್ಲಿಂದ ಬರಬೇಕು?  ಕರ್ನಾಟಕದ ಉಪಮುಖ್ಯಮಂತ್ರಿಗಳು ಬೆಂಗಳೂರು ಮೆಟ್ರೋ ವನ್ನು ತಮಿಳುನಾಡಿನ ಹೊಸೂರಿನವರೆಗೆ ವಿಸ್ತರಿಸಿದರೆ ಏನು ತಪ್ಪು ಎಂದು ಮಾತಾಡಿರುವುದು ವರದಿಯಾಗಿತ್ತು.  ಹೀಗಿದ್ದಾಗ, ಕರ್ನಾಟಕಕ್ಕೆ ಉಳಿಗಾಲವಿದೆಯೇ?  ಕರ್ನಾಟಕದ ಪ್ರಮುಖ ನಗರಗಳಾದ ಹುಬ್ಬಳ್ಳಿ, ಮಂಗಳೂರು, ಬೆಳಗಾವಿ, ಕಲಬುರ್ಗಿ ಮತ್ತು ಶಿವಮೊಗ್ಗಗಳನ್ನು ಬೆಂಗಳೂರಿಗೆ ಸೇರಿಸುವ ಹೈ ಸ್ಪೀಡ್ ರೈಲು ಮಾಡುವ ಹಂಬಲ ಮತ್ತು ಬದ್ಧತೆ ಇವರಿಗಿದೆಯೇ? ತಮಿಳು ನಾಡಿನಿಂದ ಬೆಂಗಳೂರಿಗೆ ಜಾಲಿ ರೈಡ್ ಮಾಡಲು ಬ್ರಿಟಿಷರು ಮಾಡಿದ ಕೆಲಸಕ್ಕೆ ಇನ್ನೂ ಜೀವ ತುಂಬುತ್ತಿರುವ ರೈಲ್ವೆ ಅಧಿಕಾರಿಗಳಿಗೆ ಧಿಕ್ಕಾರ ಹೇಳಬೇಕಾಗಿದೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಕರ್ನಾಟಕದ ರೈಲುಗಳಿಗೆ ಜಾಗ ಇಲ್ಲದಂತೆ ಮದ್ರಾಸಿಗೆ ರೈಲು ಓಡಿಸುವ ನೈಋತ್ಯ ಮತ್ತು ದಕ್ಷಿಣ ರೈಲ್ವೆ ಆಡಳಿತವನ್ನು ತರಾಟೆಗೆ ತೆಗೆದುಕೊಳ್ಳದ ರಾಜ್ಯ ಸರ್ಕಾರವು ಇದ್ದರೆಷ್ಟು ಬಿಟ್ಟರೆಷ್ಟು?  ಕರ್ನಾಟಕದ ಕಲಬುರ್ಗಿ ಮತ್ತು ವಿಜಯಪುರದ ಜನ ರೈಲಿಗಾಗಿ ಅಲವತ್ತುಕೊಂಡರೂ ಮರುಗದ ರೈಲ್ವೆ ಇಲಾಖೆಯನ್ನು ಕರ್ನಾಟಕ ದ್ರೋಹಿ ಎನ್ನದೆ ಇನ್ನೇನೆನ್ನಬೇಕು? ದೇಶದ್ರೋಹಿಗಿಂತ ಒಂದು ಸೇರು ಹೆಚ್ಚು ಈ ನಾಡದ್ರೋಹಿಗಳ ಪಾಪ.  

೩.  ಕನ್ನಡ ಮಾಧ್ಯಮ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಪಬ್ಲಿಕ್ ಶಾಲೆಗಳನ್ನಾಗಿ ಮಾಡುವ ತಲೆಕೆಟ್ಟ ಯೋಜನೆಯು ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮದಲ್ಲಿ ಸೂತಕದ ಛಾಯೆ ಮೂಡಿಸುತ್ತಿದೆ.  ಇತ್ತೀಚೆಗೆ ಬೆಂಗಳೂರಿನಲ್ಲಿ ನಾನು ಓದಿದ ಕನ್ನಡ ಮಾಧ್ಯಮ ಪ್ರಾಥಮಿಕ ಸರ್ಕಾರಿ ಶಾಲೆಗೆ ಹೋಗಿದ್ದೆ.  ಅದಕ್ಕೆ ಐದು ಎಕರ ಭೂಮಿಯನ್ನು ೧೯೪೦ ದಶಕದಲ್ಲಿ ಕೊಟ್ಟವರು ಶ್ರೀ ಜಯಚಾಮರಾಜೇಂದ್ರ ಒಡೆಯರು. ಇವತ್ತು ಅವರ ಕಾಲದಲ್ಲಿ ಕಟ್ಟಿಸಿದ ಕಟ್ಟಡದ ಭಾಗವು ಇನ್ನೂ ಗಟ್ಟಿಯಾಗೇ ಇದೆ.  ದಶಕಗಳಲ್ಲಿ ಶಾಲೆಯ ಕಟ್ಟಡದ ವಿಸ್ತೀರ್ಣವೂ ದೊಡ್ಡದಾಗಿದೆ.  ಆದರೆ, ಪಾಠ ಮಾಡಲು ಶಿಕ್ಷಕರೇ ಇಲ್ಲ.  ಇರುವ ಶಿಕ್ಷಕರಿಗೆ ಇಂಗ್ಲೀಶ್ ಬಾರದು.  ಮಕ್ಕಳಿಗೆ ಕನ್ನಡವೂ ಬಾರದು, ಇಂಗ್ಲಿಷ್ ಸಹ ಬಾರದಂಥ ಪರಿಸ್ಠಿತಿ ಇದೆ. ಆ ಶಾಲೆಯಲ್ಲಿ ಮಕ್ಕಳಿಗೆಂದು ಮೀಸಲಾಗಿದ್ದ ಮೂರು ಎಕರೆಗೂ ದೊಡ್ಡದಾದ ಆಟದ ಮೈದಾನದಲ್ಲಿ ನೀರಿನ ಟ್ಯಾಂಕು, ಜಲಮಂಡಲಿ ಕಚೇರಿ, ನಡಿಗೆದಾರರಿಗೆ ಉದ್ಯಾನ, ಮತ್ತು ಇತ್ತೀಚೆಗೆ ಇಂದಿರಾ ಕ್ಯಾಂಟೀನ್ ಅನ್ನು ನಿರ್ಮಿಸಿ ಆಟದ ಮೈದಾನವನ್ನು ಒಂದು ಎಕರೆಗೆ ಇಳಿಸಿದ್ದಾರೆ.  ಅದನ್ನು ನುಂಗಲು ಇನ್ನೆಷ್ಟು ನುಂಗಣ್ಣಗಳು ಕಾದಿದ್ದಾರೋ ನಾನರಿಯೆ.  ಪ್ರಜಾವಾಣಿಯು ಚಿಕ್ಕಪೇಟೆಯಲ್ಲಿ ತನ್ನ ಸ್ವತ್ತನ್ನು ಉಳಿಸಿಕೊಂಡ ಸರ್ಕಾರಿ ಶಾಲೆಯ ಯಶೋಗಾಥೆಯನ್ನು ಪ್ರಕಟಿಸಿತ್ತು.  ಅದನ್ನು ಕಬಳಿಸುವ ಹುನ್ನಾರವನ್ನು ಬೆಳಕಿಗೆ ತಂದಿದ್ದರಿಂದ ಆ ಹೋರಾಟಕ್ಕೆ ಬಲ ಸಿಕ್ಕಿತ್ತು.  ಇವತ್ತು ಕನ್ನಡ ಸರ್ಕಾರಿ ಶಾಲೆಗಳನ್ನು ಹಂತ ಹಂತವಾಗಿ ಕೊಲೆ ಮಾಡಲಾಗುತ್ತಿದೆ.  ಅದಕ್ಕೆ ಕಣ್ಣು ಮುಚ್ಚಿ ಕುಳಿತ ರಾಜ್ಯ ಸರ್ಕಾರವೇ ಹೊಣೆ. ರಾಜ್ಯದ ಯಾವುದೇ ಭಾಗದಲ್ಲಿ ಆಯ್ಕೆ ಆಗಿದ್ದರೂ ಬೆಂಗಳೂರಿನಲ್ಲಿಅಥವಾ ದಿಲ್ಲಿಯಲ್ಲಿ ಕೊಳೆಯುವ ಜನಪ್ರತಿನಿಧಿಗಳು ಇರುವ ತನಕ ರಾಜ್ಯದ ಹಿತವನ್ನು ನಿರೀಕ್ಷಿಸುವುದೇ ಮೂರ್ಖತನವಾದೀತು.

೪. ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ನಲ್ಲೂ ಸಂಪಾದಕೀಯವನ್ನು ಬರೆದು ನಾಮಫಲಕಗಳಲ್ಲಿ ಕನ್ನಡ ಕಡೆಗಣಿಸಿರುವವರ ವಿರುದ್ಢ ಸಮರ ಸಾರಿರುವ ಕನ್ನಡ ಪರ ಜನರು ಕಾನೂನನ್ನು ಉಲ್ಲಂಘಿಸಿ ಖಾಸಗಿ ಆಸ್ತಿಗೆ ಹಾನಿ ಮಾಡಿದ್ದು ತಪ್ಪು ಎಂದು ಸ್ಪಷ್ಟವಾಗಿ ಬರೆದಿದ್ದರು. ಆದರೆ, ಅದೇ ಉಸಿರಿನಲ್ಲಿ  ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ವಾಣಿಜ್ಯ ಮತ್ತು ವಸತಿ ಸಮುಚ್ಚಯ ಕಟ್ಟಡಗಳಲ್ಲಿ ಕನ್ನಡವನ್ನು ಕಡೆಗಣಿಸುತ್ತಾ ಬಂದಿರುವವರಲ್ಲಿ ಬಹುತೇಕರು ಅನ್ಯಭಾಷಿಕರಿದ್ದಾರೆ. ಅವರ ಜೊತೆಗೆ ಕೆಲವು ಬೇರು ಕಡಿದುಕೊಂಡಿರುವ ಲಜ್ಜೆಗೇಡಿ ಕನ್ನಡಿಗರೂ ಸೇರಿದ್ದಾರೆ ಎಂದು ಬರೆಯಲು ಇಂಥಾ ಪತ್ರಿಕೆಗಳಿಗೆ ಸಾಧ್ಯವಾಗಿಲ್ಲವಾಗಿರುವುದು ನಾಡಿನ ದೌರ್ಭಾಗ್ಯ. ಇವರ ಅನ್ಯಪ್ರೀತಿ ಗೋಸುಂಬೆತನದಿಂದ ಕನ್ನಡ ಮತ್ತು ಕರ್ನಾಟಕದ ಬುಡಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ಕನ್ನಡದ ಆತಂಕಗಳ ಬಗ್ಗೆ ಅನುಕಂಪ ಕನ್ನಡಕ್ಕೆ ಬೇಕಿಲ್ಲ. ಪ್ರೀತಿ ಪ್ರೇಮದಿಂದ ಕನ್ನಡಕ್ಕೆ ಮನ್ನಣೆ ದೊರಕಿಸಿಕೊಡುವುದು ಸಾಧ್ಯವಾದಲ್ಲಿ ನಾನೂ ಸಂತಸ ಪಡುತ್ತೇನೆ.  ಮಾಸ್ತಿ ವೆಂಕಟೇಶ ಅಯ್ಯಂಗಾರರಂಥ ಮಹನೀಯರೇ ಆ ಸಂಯಮದ ದಾರಿಯನ್ನು ಒತ್ತಿ ಹೇಳಿದ್ದನ್ನು ನಾನು ಎಂದೂ ಮರೆತಿಲ್ಲ, ಮರೆಯುವುದೂ ಇಲ್ಲ.  ಆದರೂ,    ಕನ್ನಡವೆಂದರೆ ಮೂಗು ಮುರಿಯುವ ಮಂದಿಗೆ ಚುರುಕು ಮುಟ್ಟಿಸಿರುವ ಕೆಲಸವನ್ನು ಕಾನೂನಿನ ದೃಷ್ಟಿಯಿಂದ ತಪ್ಪು ಎಂದು ಹೇಳಬಹುದೇ ವಿನಃ ಅವರ ಆಕ್ರೋಶಕ್ಕೆ ನ್ಯಾಯವಾದ ಕಾರಣವಿರುವುದನ್ನು ಮರೆಯುವುದೂ ಅಷ್ಟೇ ತಪ್ಪಾಗುತ್ತದೆ.

೫.  ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಣೆ ಮಾಡಿದಾಗಿನಿಂದ ಆಗಿರುವ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ಸಾಕಷ್ಥು ಪ್ರಚಾರ ಆಗುತ್ತಿದೆ (ಅದಕ್ಕೆ ಶುಭವಾಗಲಿ).  ಆದರೆ, ಈ ಯೋಜನೆಯಿಂದ ಕೆ ಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ಯಲ್ಲಿ ಆಗಿರುವ ತೊಂದರೆಗಳ ಬಗ್ಗೆ ಯಾರಿಗಾದರೂ ಕಾಳಜಿ ಇದೆಯೇ ಎನ್ನುವ ಅನುಮಾನವೂ ಇದೆ.  ಸಾಮಾನ್ಯ ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ಇವತ್ತು ವಯಸ್ಸಾದವರು ಮತ್ತು ಸಣ್ಣ ಮಕ್ಕಳಿರುವ ಯಾರೂ ಪ್ರಯಾಣ ಮಾಡಲು ಸಾಧ್ಯವಾಗದಷ್ಟು ನೂಕು ನುಗ್ಗಲು ಉಂಟಾಗಿದೆ.  ಬಿಎಂಟಿಸಿಯು ನಿಶ್ಶಬ್ದವಾಗಿ ಈ ಹಿಂದೆ ಇಲ್ಲದ ಮಾರ್ಗಗಳಲ್ಲಿ ಸ್ತ್ರೀ ಶಕ್ತಿ ಅನ್ವಯಿಸದ ಎ/ಸಿ ವೊಲ್ವೋ ಬಸ್ಸುಗಳನ್ನು ಓಡಿಸಲು ಆರಂಭಿಸಿದೆ.  ಸಾಮಾನ್ಯ ಬಸ್ಸುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಅಧಿ”ಕಾರು”ಗಳು ಮಾತ್ರ ಬಸ್ಸುಗಳು ಕಡಿಮೆಯಾಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ನಿತ್ಯ ಓಡಾಡುವವರ ಅನುಭವ ಬೇರೆಯೇ ಇದೆ.  ಕೆ ಎಸ್ ಆರ್ ಟಿ ಸಿ ಯು “ಸರಕು ಸಾಗಣೆ ಲಾರಿಗಳನ್ನು” ಖರೀದಿಸಲು ಮುಂದಾಗಿದೆ ಎಂದು ವರದಿಯಾಗಿತ್ತು.  ಅಂದರೆ, ಈಗ್ಗೆ ೨೦ ವರ್ಷಗಳ ನಂತರ ಕೆ ಎಸ್ ಆರ್ ಟಿ ಸಿ ಯು ಜನರ ಬದಲಾಗಿ ವಸ್ತುಗಳನ್ನು ಸಾಗಿಸುವ ಸಂಸ್ಥೆಯಾಗಲು ತಯಾರಿ ನಡೆಸುತ್ತಿದೆ ಎನಿಸುತ್ತದೆ.  ಕರ್ನಾಟಕ ಸುವರ್ಣ ಸಾರಿಗೆಗೆ ಸುವರ್ಣ ಸಂಭ್ರಮ ವರ್ಷದಲ್ಲಿ ಹೆಚ್ಚಿನ ಜನ ಬರುತ್ತಿದ್ದಾರೆ ಎನ್ನುವ ಸಂತಸವಿರಬಹುದು.  ಆದರೆ, ಕರ್ನಾಟಕದ ಇತರ ಎಲ್ಲಾ ವಿಚಾರಗಳಂತೆ ಇದೂ ಸಹ “ಎಷ್ಥು ದಿನ ಈ ಒಲ್ಲದ ಮೆರವಣಿಗೆ” ಎನ್ನುವ ಅನುಮಾನವನ್ನೂ ಹುಟ್ಟುಹಾಕಿದೆ.

ಕರ್ನಾಟಕ – ಶಕ್ತಿ ಯೋಜನೆ – ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವ ಪಾರಮಾರ್ಥಿಕ ತತ್ವದಿಂದ ಆರ್ಥಿಕ ದುಡುಕಿನವರೆಗೆ

ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರವು ಉಚಿತ ಗ್ಯಾರಂಟಿಗಳನ್ನು ಜಾರಿಗೆ ತರಲು ಪಡುತ್ತಿರುವ ಪೇಚಾಟವು ನಿಜಕ್ಕೂ ಗಂಭೀರವಾದ ವಿಚಾರ. ಷರತ್ತುಗಳನ್ನು ಹಾಕಿಯೂ ಸುಮಾರು 30 ಸಾವಿರ ಕೋಟಿ ರೂಪಾಯಿಗಳು (ಪ್ರತಿ ವರ್ಷ) ತಜ್ಞರು ಹೇಳಿದ್ದಾರೆ ಎಂದು ವರದಿಯಾಗಿದೆ.  ರಾಜ್ಯ ಸರ್ಕಾರವು ಪೈಸೆ ಪೈಸೆಗೂ ಕೇಂದ್ರ ಸರ್ಕಾರದ ಮುಂದೆ ಅಂಗಲಾಚುವ ಪರಿಸ್ಥಿತಿ ಇರುವುದು ಸರ್ಕಾರದ ಪೇಚಾಟಕ್ಕೆ ಇಂಬು ಕೊಟ್ಟಿದೆ.  ಈ ಯೋಜನೆಗಳನ್ನು “ರಾಜ್ಯವನ್ನು ದಿವಾಳಿಯಾಗಿಸುವ ಹುನ್ನಾರ” ಎನ್ನುವ ಯಾರಿಗೇ ಆಗಲಿ, ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ಬಹುತೇಕರ ಜೀವನ ಗುಣಮಟ್ಟ ಎಲ್ಲಿದೆ ಮತ್ತು ಹೇಗಿದೆ ಎನ್ನುವುದರ ಸಾಮಾನ್ಯ ಜ್ಞಾನವೂ ಇಲ್ಲವೆಂದೇ ಹೇಳಬೇಕು.  ನಮ್ಮ ರಾಜ್ಯದ ತೆರಿಗೆ ಸಂಪತ್ತಿನ ಅರ್ಹ ಪಾಲು ನಮ್ಮ ರಾಜ್ಯಕ್ಕೇ ಸಿಕ್ಕಲ್ಲಿ ವಾರ್ಷಿಕ 30 ಸಾವಿರ ಕೋಟಿ [ಆರ್ಥಿಕ ಅಶಿಸ್ತಿನಿಂದ 60 ಸಾವಿರ ಕೋಟಿ] ಎನ್ನುವುದು ಮೂರುವರೆ ಲಕ್ಷ ಕೋಟಿಯ ರಾಜ್ಯ ಸರ್ಕಾರದ ವಾರ್ಷಿಕ ಆಯವ್ಯಯಕ್ಕೆ ಹೊರೆ ಎನಿಸಲಾರದು.  ಅನುಷ್ಠಾನ ಗೊಳಿಸುವಾಗ ಪ್ರಾಮಾಣಿಕವಾಗಿದ್ದರೆ ಅದರಿಂದ ಸಾಮಾನ್ಯ ಜನರಿಗೆ ಅನುಕೂಲವೂ ಆಗಲಿದೆ.   ರಾಜ್ಯ ಸರ್ಕಾರವಾಗಲೀ ಕೇಂದ್ರ ಸರ್ಕಾರವಾಗಲೀ ತನ್ನ ನಡೆಗಳನ್ನು ತಾನೇ ಪ್ರಾಮಾಣಿಕವಾಗಿ ಟೀಕಿಸದಿದ್ದರೆ ಅಥವಾ ಅದರ ಎಲ್ಲಾ ಹೆಜ್ಜೆಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಮರ್ಥಿಸುವ ಬಕೆಟ್ಟು-ಹಿಡಿವ ಬೆಂಬಲಿಗರ ಮಾತೇ ಹಿತವೆನಿಸಿದರೆ ರಾಜ್ಯ ಸಾಗಬೇಕಾದ ದಾರಿ ಮೊಟಕಾಗುತ್ತದೆ, ಆಗಬೇಕಾದ ಸುಧಾರಣೆ ಮರೀಚಿಕೆಯಾಗುತ್ತದೆ.  ರಾಜ್ಯದಲ್ಲಿ ಉಚಿತ ಗ್ಯಾರಂಟಿಗಳನ್ನು ಕ್ಷಣಾರ್ಧದಲ್ಲಿ ಜಾರಿಗೊಳಿಸದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎನ್ನುವವರಿಗೆ. ಸ್ವಾಭಿಮಾನಹೀನರಿಗೆ, ರಾಜ್ಯದ ಉಪ್ಪು ತಿಂದು ಎರಡು ಬಗೆವವರಿಗೆ, ಕೇಂದ್ರವು ರಾಜ್ಯದ ಮೇಲೆ ಹೇರುತ್ತಿರುವ ಯೋಜನೆಗಳನ್ನು ಕೊಂಡಾಡುವವರಿಗೆ, ವಿವೇಕವನ್ನು ಅಡ ಇಟ್ಟಿರುವ ಇನ್ನೂ ಅನೇಕರಿಗೆ “ಸರಿ-ತಪ್ಪು” ವಿಮರ್ಶಿಸುವ ಶಕ್ತಿ ಇಲ್ಲ  ಎಂಬುದು ಗೊತ್ತಿರುವ ವಿಚಾರ.  ಆದರೆ, ಗಂಭೀರವಾದ ಟೀಕೆಗಳನ್ನು ಅಲಕ್ಷಿಸಿದರೆ ಅದು ರಾಜ್ಯಕ್ಕೆ ಮಾರಕವಾಗಲಿದೆ. ದೊಡ್ಡ ಮಟ್ಟದ ಇಂತಹ ಯೋಜನೆಯನ್ನು ಹಿಂದು ಮುಂದು ಇಲ್ಲದೆ ಜಾರಿಗೆ ತರುವ ಮುಂಚೆ ಕೆಲವು ಜಿಲ್ಲೆಗಳಲ್ಲಿ ಪ್ರಯೋಗಾರ್ಥವಾಗಿ ಜಾರಿಗೆ ತಂದು, ನಂತರ ರಾಜ್ಯಕ್ಕೆ ವಿಸ್ತ್ರರಿಸುವುದು ಜವಾಬ್ದಾರಿಯುತ ಸರ್ಕಾರದ ಲಕ್ಷಣ.

ಅಗತ್ಯ ಸೇವೆಗಳಿಗೆ ಸಬ್ಸಿಡಿ ಕೊಡುವುದಕ್ಕಿಂತ ಉಚಿತ ಸೇವೆ ಕೊಡುವುದು ಹೆಚ್ಚು ಪರಿಣಾಮಕಾರಿ ಎನ್ನುವುದಕ್ಕೆ ಪುರಾವೆಗಳಿವೆ.  ಆದರೆ, ಯಾರಿಗೆ ಯಾವ ಸಂದರ್ಭದಲ್ಲಿ ಎನ್ನುವುದು ಮುಖ್ಯ. ಯೂನಿವರ್ಸಲ್ ವೆಲ್ಫ಼ೇರ್ (ಸರ್ವವ್ಯಾಪಿ ಸಾಮಾಜಿಕ ಸುರಕ್ಷತೆ) ಎನ್ನುವ ಆಲೋಚನೆಯು ಕೆಲವು ಕ್ಷೇತ್ರಗಳಿಗೆ ಮಾತ್ರ ಅನ್ವಯಿತ್ತದೆ ಮತ್ತು ಅವುಗಳಿಗೆ ಸೀಮಿತವಾಗಿದ್ದಾಗ ಮಾತ್ರ ದುರ್ಬಲ ವರ್ಗಗಳ  ಸಬಲೀಕರಣದ ಹಾದಿ ಸುಗಮವಾಗುತ್ತದೆ.  ಉತ್ತಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಮಕ್ಕಳ ಮತ್ತು ವೃದ್ಧರ ಆಹಾರ, ಮತ್ತು ಎಲ್ಲರ ಆರೋಗ್ಯ – ಈ ಕ್ಛೇತ್ರಗಳು ಉಚಿತ ಸೇವೆಗೆ ಅರ್ಹ.  ಆದರೆ, ಸರ್ಕಾರಗಳು, ಸರ್ಕಾರಿ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ನಿರ್ಲಕ್ಷಿಸುತ್ತಾ ಬಂದಿವೆ.  ಖಾಸಗಿ (ದುಬಾರಿ) ಶಾಲಾ ಕಾಲೇಜುಗಳು ನಾಯಿಕೊಡೆಗಳಂತೆ ಬೆಳೆದಿವೆ. ಸರ್ಕಾರಿ ಅಥವಾ ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಸಾಯಲು ಬಿಟ್ಟ ರಾಜಕಾರಣಿಗಳೇ ಮಕ್ಕಳ ಶಿಕ್ಷಣವನ್ನು ತಮ್ಮ ಕಿಸೆ ತುಂಬಿಸಿಕೊಳ್ಳುವ ಖಾಸಗಿ ಉದ್ಯಮವನ್ನಾಗಿಸಿಕೊಂಡಿದ್ದಾರೆ. ಕೆಲವನ್ನು ಹೊರತುಪಡಿಸಿ ಬಹುತೇಕ ಖಾಸಗಿ (ಲಾಭದ ವ್ಯಾಪಾರಿ) ಶಾಲೆ ಮತ್ತು ಆಸ್ಪತ್ರೆಗಳೊಂದಿಗೆ ಗುಣಮಟ್ಟದಲ್ಲಿ ಸ್ಪರ್ಧೆ ಒಡ್ಡುವುದು ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳಿಗೆ ಇಂದಿಗೂ ಸಾಧ್ಯವಾಗಿಲ್ಲ.  ಸರ್ಕಾರಕ್ಕೆ ಯಾವುದರಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತ ಅರ್ಹ ಜನರಿಗೆ ಸಿಗುವ ಸೇವೆಗಳನ್ನು ಹಕ್ಕಿನ ರೂಪದಲ್ಲಿ ತಲುಪಿಸಬೇಕೆಂಬ ನೈತಿಕ ಮತ್ತು ದೂರಗಾಮಿ ಆಡಳಿತಾತ್ಮಕ ಸ್ಪಷ್ಟತೆ ಇಲ್ಲದಿರುವುದು ಉಚಿತ ಗ್ಯಾರಂಟಿಗಳ ಮೂಲಭೂತ  ಸಮಸ್ಯೆ ಎಂದೇ ಹೇಳಬೇಕಾಗುತ್ತದೆ.

ಎಲ್ಲ ಮಹಿಳೆಯರಿಗೆ ಎಲ್ಲಾ ಬಸ್ಸಿನಲ್ಲಿ (ದೂರದ ಊರಿಂದೂರಿಗೆ) ಉಚಿತ ಪ್ರಯಾಣವನ್ನು ಒದಗಿಸಿರುವುದನ್ನು ಮಹಿಳಾ ಸಬಲೀಕರಣದ ಹೆಸರಿನಲ್ಲಿ ಸಮರ್ಥಿಸುವುದು, “ಮಹಿಳಾ ಸಬಲೀಕರಣ”ಕ್ಕೆ ಹಾಸಿರುವ ರಾಜಬೀದಿಯೆಂಬಂತೆ ಬಿಂಬಿಸುವುದು ವಿಷಾದನೀಯ ಮತ್ತು ಅಪಾಯಕರ.  ಯಾವ ಮಹಿಳೆಯೇ ಆದರೂ ಉಚಿತ ಪ್ರಯಾಣವನ್ನು ನೆಚ್ಚಿಕೊಂಡು ಬೆಂಗಳೂರಿನಿಂದ ಬೀದರ್ ವರೆಗೆ ಅಡ್ಡಾಡಿಕೊಂಡು ತಾನು ಸಬಲೆ ಎಂದು ಭಾವಿಸಲಾರಳು.   ಸಾರ್ವಜನಿಕ ಸಾರಿಗೆ ಎಂಬುದೊಂದು ಸಹಾಯಕ ಸಂಪನ್ಮೂಲ.  ಆದರೆ ಅದು ಗಾಳಿ, ನೀರು, ಆಹಾರ, ಆರೋಗ್ಯದಂತೆ ಜೀವ ರಕ್ಷಕ ಸಂಪನ್ಮೂಲವಲ್ಲ.  ಹಾಗಾಗಿ ಯಾವುದೇ ಸಹಾಯಕ ಸಂಪನ್ಮೂಲಗಳು ಸರ್ವವ್ಯಾಪಿಯಾಗಿ ಉಚಿತವಾಗಿ ದೊರೆಯುವುದಕ್ಕೆ ಯೋಗ್ಯವಾಗುವುದಿಲ್ಲ ಎಲ್ಲ ಮಹಿಳೆಯರಿಗೆ ಎಲ್ಲಾ ಬಸ್ಸಿನಲ್ಲಿ ದೂರದ ಊರಿಂದೂರಿಗೆ ಯಾವಾಗಲೂ ಉಚಿತ ಎನ್ನುವ ಆರ್ಥಿಕ ನೀತಿಯನ್ನು ಯಾವ ಅಧ್ಯಯನವೂ ಬೆಂಬಲಿಸುವುದು ಅನುಮಾನ.  ಐಷಾರಾಮಿ ಬಸ್ಸುಗಳ ವಿಚಾರ ಇಲ್ಲಿ ಅಪ್ರಸ್ತುತ. “ನುಡಿದಂತೆ ನಡೆಯುತ್ತೇವೆ” ಎನ್ನುವ ಸ್ಮಶಾನ ಆದರ್ಶಕ್ಕೆ ಜೋತು ಬಿದ್ದು ಯೋಜನೆಗಳನ್ನು ರಾಜ್ಯವ್ಯಾಪಿಯಾಗಿ ತರಾತುರಿಯಲ್ಲಿ ಜಾರಿಗೆ ತರುತ್ತಿರುವುದನ್ನು ನೋಡಿದರೆ, ರಾಜ್ಯ ಸರ್ಕಾರವು ಅಗ್ಗದ ಕುಹಕಗಳಿಗೆ ಮನ್ನಣೆ ಕೊಡುತ್ತಿದೆ ಎಂದು ಭಾಸವಾಗುತ್ತಿದೆ.  ಸಾರಿಗೆ ಸಚಿವರು “ಮಹಿಳೆಯರಿಗೆ ಉಚಿತ ಪ್ರಯಾಣದ ಕಾರಣ ತೀರ್ಥಕ್ಷೇತ್ರಗಳು ತುಂಬಿ ತುಳುಕುತ್ತಿವೆ” ಎಂದು ಸಂಭ್ರಮಿಸಿರುವುದು ಹಾಸ್ಯಾಸ್ಪದ. ಬಹುಶಃ ಸಾರಿಗೆ ಸಚಿವರೇ ಮುಜರಾಯಿ ಸಚಿವರೂ ಆಗಿರುವುದು ಇದಕ್ಕೆ ಕಾರಣವಿರಬಹುದು!  “[ಶಕ್ತಿ] ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದರೂ ಅದನ್ನು ನಾವು ಆದಾಯವೆಂದು ಪರಿಗಣಿಸುತ್ತೇವೆ. ಅವರಿಗೆ ನೀಡಿರುವ ‘ಟಿಕೆಟ್‌’ ಮೊತ್ತವನ್ನು ಆಧರಿಸಿ ಸರ್ಕಾರ ನಮಗೆ ಮರುಪಾವತಿ ಮಾಡಲಿದೆ” ಎನ್ನುವ ಸಾರಿಗೆ ಅಧಿಕಾರಿಗಳ ಮಾತನ್ನು ಒಪ್ಪಲು ಸಾಧ್ಯವೇ?  ಸರ್ಕಾರ ತುಂಬಿಸಿಕೊಂಡುವ ಹಣವನ್ನು ಆದಾಯ ಎನ್ನಲು ಬರುತ್ತದೆಯೇ?  ಅನೇಕ ವಸ್ತುಗಳನ್ನು ಸರ್ಕಾರವು ಸರ್ಕಾರಿ ಉದ್ದಿಮೆಗಳಿಂದಲೇ ಖರೀದಿ ಮಾಡುತ್ತದೆ.  ಅನೇಕ ಸರ್ಕಾರಿ ಸಂಸ್ಠೆಗಳಿಗೆ ಸರ್ಕಾರವೇ ದೊಡ್ಡ ಗ್ರಾಹಕ.  ಅದನ್ನು ಆ ಸಂಸ್ಠೆಗಳು ನಿಜವಾದ ಆದಾಯ ಎಂದು ಪರಿಗಣಿಸಲು ಸಾಧ್ಯವೇ?  ಇಂತಹ ಒಳ ಒಪ್ಪಂದಗಳು ಸರ್ಕಾರಿ ಉದ್ದಿಮೆಗಳ ಗುಣಮಟ್ಟವನ್ನು ಕಾಪಾಡಬಲ್ಲುದೇ?  ಸರ್ಕಾರಿ ಏಕಸ್ವಾಮ್ಯವನ್ನು ಸಾಧಿಸಲು ಕಂಡುಕೊಂಡ ವಾಮಮಾರ್ಗವೇ?  ಪುರಂದರ ದಾಸರು ಹೇಳಿದ “ಕೆರೆಯ ನೀರನು ಕೆರೆಗೆ ಚೆಲ್ಲಿ” ಎನ್ನುವ ಪಾರಮಾರ್ಥಿಕ ತತ್ವವನ್ನು ಲೌಕಿಕ – ಆರ್ಥಿಕ ಮಟ್ಟಕ್ಕೆ ಇಳಿಸುವಂಥ ನೋಟವಿದು.

ಕಾರ್ಪೊರೇಟ್  ಕಂಪನಿಗಳಿಗೆ ಕೊಟ್ಟಿರುವ ತೆರಿಗೆ ವಿನಾಯ್ತಿಯನ್ನು ಎತ್ತಿ ತೋರಿಸಿ “ಅವರಿಗೆ ಕೊಟ್ಟ ಹಣ ಆರ್ಥಿಕ ಹೊರೆಯಲ್ಲವೇ” ಎನ್ನುವ ಜನರಿಗೆ ಸಾಮಾನ್ಯ ಜ್ಞಾನದ ಕೊರತೆ ಇದೆ. ಕಾರ್ಪೊರೇಟ್ ಎಂದರೆ ಟಾಟಾ ಬಿರ್ಲಾ ಅಂಬಾನಿ ಮಾತ್ರವೇ ಅಲ್ಲ. ನಮ್ಮಲ್ಲಿ ಸಾಮಾನ್ಯರು ನಡೆಸುವ ಸಣ್ಣ ಮತ್ತು ಮಧ್ಯಮ ಗಾತ್ರದ ಅನೇಕ ಕೈಗಾರಿಕೆಗಳು ಉದ್ದಿಮೆಗಳು ಬಹುಸಂಖ್ಯೆಯಲ್ಲಿವೆ.  ಅಂಥವರಲ್ಲಿ ಅರ್ಹರಿಗೆ ಕೊಡುವ ಉತ್ಪನ್ನಶೀಲ ವಿನಾಯ್ತಿಗಳು ಅನೇಕ ಇರುತ್ತವೆ. ಮಕ್ಕಳಿಗೆ ಶಾಲೆಯಲ್ಲಿ ಕೊಡುವ ಮಧ್ಯಾಹ್ನದ ಬಿಸಿ ಊಟ, ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ರಾಜ್ಯ ಸರ್ಕಾರವು ತೊಡಗಿಸಿರುವ ಹಣ, ಪ್ರಧಾನಮಂತ್ರಿ ಜನೌಷಧ ಅಂಗಡಿಗಳು, ಮನ್ರೇಗಾ ಅಡಿಯಲ್ಲಿ ಸಿಗುತ್ತಿರುವ ಕೆಲಸ ಖಾತ್ರಿ ಮತ್ತು ದಿನಗೂಲಿ, ರೈತರಿಗೆ ಸಿಗುವ ರಸಗೊಬ್ಬರ ಸಬ್ಸಿಡಿ, ಕೋವಿಡ್ ನಲ್ಲಿ ನಷ್ಟ ಅನುಭವಿಸಿದ್ದ ಉದ್ಯಮಗಳಿಗೆ ಕೊಟ್ಟಿದ್ದ ತೆರಿಗೆ ವಿನಾಯ್ತಿ, ಜನಪರ ಯೋಜನೆಗಳಿಗೆ ಇಂಬು ಕೊಡುವ ಮತ್ತು ಜನಜೀವನ ಸುಗಮಗೊಳಿಸುವ ಖಾಸಗಿ ಉದ್ಯಮಗಳಿಗೆ ಸ್ನೇಹಿತನಾಗಿ ಸರ್ಕಾರವು ಕೊಡುವ ತೆರಿಗೆ ವಿನಾಯ್ತಿಗಳನ್ನು ಉತ್ಪನ್ನಶೀಲ ಹೂಡಿಕೆ ಎನ್ನುತ್ತಾರೆ.  (ಶ್ರೀಮಂತ ರೈತರಿಗೆ ಸಿಗುತ್ತಿರುವ ತೆರಿಗೆ ವಿನಾಯ್ತಿಯನ್ನು ಏನೆಂದು ಕರೆಯಬೇಕು??) ಯಾವುದೇ ಮಹಿಳೆಯು ತನ್ನ ಮನೆಯಿಂದ ದೂರ ಇರುವ ಜಾಗಕ್ಕೆ (ನಡೆದು ಹೋಗಲು ದೂರ ಇರುವ ಅಥವಾ ಸುರಕ್ಷತೆ ದೃಷ್ಟಿಯಿಂದ) ಪ್ರಯಾಣಿಸಲು ಸಹಾಯ ಮಾಡುವಂಥ ಸ್ಠಳೀಯ ಸಾರಿಗೆಯಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಮಾಡುವುದು ಉತ್ಪನ್ನ ಶೀಲ ಹೂಡಿಕೆಯಾಗುತ್ತದೆ.  30 ಕಿ. ಮೀ ವರೆಗೂ ಯಾವುದೇ ಮಹಿಳೆಯು ಕೆಲಸದ ಸಲುವಾಗಿ ಅಥವಾ ವೈಯಕ್ತಿಕ ಇನ್ನಾವುದೇ ಕಾರಣಕ್ಕೆ ಪ್ರಯಾಣ ಮಾಡಲು ಹಣದ ಕೊರತೆಯಿಂದ ಅನನುಕೂಲವಾಗದಿರಲಿ ಎನ್ನುವ ಕಾರಣದಿಂದ ಸಾಮಾನ್ಯ ನಗರ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಅನುಮೋದಿಸಬಹುದು.  ಕಾರನ್ನುಅಥವಾ ಮೋಟರ್ ಸೈಕಲನ್ನು ನೆಚ್ಚಿಕೊಂಡಿರುವ ಮೇಲ್ ಸ್ತರದ ಸರ್ಕಾರಿ ಕಾರ್ಮಿಕರಿಗೆ ಬಸ್ ಪ್ರಯಾಣ ಭತ್ಯೆ ಕೊಟ್ಟು ಅವರು ಬಸ್ಸಿನಲ್ಲಿ ಪ್ರಯಾಣ ಮಾಡುವುದನ್ನು ಕಡ್ಡಾಯ ಮಾಡುವುದು ಒಳ್ಳೆಯದು.

ಬೆಂಗಳೂರಿಗೆ ಅಗತ್ಯವೆಂದು ಭಾವಿಸಲಾಗಿರುವ ಟನ್ನೆಲ್ ರಸ್ತೆಗಳಿಗೆ ರೂ 50 ಸಾವಿರ ಕೋಟಿಗಳು ಬೇಕೆಂದು ಪತ್ರಿಕೆಗಳು  ವರದಿ ಮಾಡಿವೆ.  ಅದನ್ನು ರಾಜ್ಯ ಸರ್ಕಾರವೇ ಹೊಂದಿಸಬೇಕಿದೆ.  ರಾಜ್ಯದ ಇತರ ನಗರಗಳಲ್ಲಿ ಮೂಲ ಸೌಕರ್ಯಗಳ ಕೊರತೆ ರಾರಾಜಿಸುತ್ತಿದೆ.  ಅದು ಉಳ್ಳವರ ಅಥವಾ ಮಧ್ಯಮ ವರ್ಗದವರ ಸಮಸ್ಯೆಯೆಂದು ರಾಜ್ಯ ಸರ್ಕಾರವು ಅಲಕ್ಷ್ಯ ಮಾಡಿದ್ದೇ ಆದರೆ ಮುಂದೆ ಪರಿತಪಿಸಬೇಕಾಗುತ್ತದೆ.  “ಎಲ್ಲರಿಗೂ ಎಲ್ಲವೂ ಫ್ರೀ” ಎನ್ನುವ ದುರಾಸೆಯನ್ನು ಕರ್ನಾಟಕದ ಜನ ಎಂದೂ ಇಟ್ಟುಕೊಂಡಿಲ್ಲ. ಮೈ ಮುರಿದು ದುಡಿಯುವ ಜನರಿಗೆ ತಮಗಿಂತ ಕಷ್ಟದಲ್ಲಿರುವವರಿಗೆ ಸಹಾಯ ಸಿಕ್ಕಲಿ ಎನ್ನುವ ಆಶಯವಿರುತ್ತದೆ.  ಆ ಸಹಜ ಮರುಕವನ್ನು ಅಣ್ಣಾವ್ರು ತಮ್ಮ ಸಿನೆಮಾದಲ್ಲಿ ಪ್ರತಿಪಾದಿಸುತ್ತಿದ್ದ “ನಿರ್ಮಲವಾದ ಪ್ರೀತಿ”ಗೆ ಸಮೀಕರಿಸುವುದು ಸೂಕ್ತ. 

KL Rahul should have won but did not win the Man-of-the-Match award for his 75*(91) against Australia (First ODI, Mumbai)

The first ODI cricket match in the 2023 series between India and Australia  (Australia touring India) was played at the Wankhede stadium in Mumbai. It was an old fashioned limited overs game. Except the first 15 overs of the  Australian innings (when Mitch Marsh was blazing in T20 fashion), the contest between bat and ball was even. The score was 1990s like (188 all out) and India struggled like they should to win the match. At one point, India were 16 for 3 (when KL Rahul came in) and later India were 83 for 5 (when Hardik was out).

The way Indian batsmen play these days is as if all of them think they are the best to have ever played the game. Take for instance the way Hardik Pandya got out. Marcus Stoinis was bowling gentle outswingers and keeping things tight. It appeared as if Mr Pandya didn’t like that. When Stoinis bowled a nicely directed bouncer, Mr Pandya went for that big bossy hook shot, India were 83 for 4 and what a shot to play.

At the other end, we had KL Rahul, who came in when India were 16 for 3 and he had played each ball on its merit. Apart from a single half-chance in the slips late in the day (when Steven Smith dived but couldn’t catch), KL Rahul’s innings was a fantastic ODI knock. He played with a straight bat when driving, cut the ball with precision when they bowled short, and ran singles and twos with great ease. On any other day, KL Rahul would have been the Man of the match for such a match defining knock. But he was not on this occasion. Who won it? No prizes for guessing. It was the good old Ravindra Jadeja. He did okay by holding on one end while batting with KL Rahul. Jadeja took two wickets and Rahul’s wicket keeping was no less. Jadeja’s innings was no where as classy as that of KL Rahul’s. Why didn’t KL Rahul get the MoM award?

I always feel that Indian cricket has two old lobby systems and a new third system of coteries who have ruled the corridors of cricket administration off the field. The cricketing powerhouse (on the field) of Karnataka has never enjoyed that kind of clout off the field. The first (old) two club promoters are Mumbai and Delhi cricket associations. Any half-player from those states gets a longer stint and gets an MoM award for half-decent performances. The third (new) club that has captured Indian cricket is the Chennai lobby or the super kings lobby. Whoever had played and plays for Chennai (or Mumbai) in the Indian Premier League has a great chance of making it to the Indian playing eleven (in test matches, woah!) and part of the deal is they will be favoured over others for an MoM award. Some people might just say that those two IPL
teams have divided the IPL trophy between themselves for the best part of the last 15 years and naturally their players would have performed better than  others. There is some truth in that, no doubt. However, I cannot overlook the fact that players from non-Mumbai, non-Delhi, and non-Chennai Super kings (not Tamil Nadu, mind you) get a raw deal from commentators, critics, and team selection panels. When you have commentators like Ravi Shastri and Sanjay Manjrekar, what better can you expect.

Everyone knows that Suryakumar Yadav will not be even 1/10th of a test batsman that Hanuma Vihari was in his diapers or for that matter Mayank Agarwal is playing brilliantly in the Ranji trophy. But, who makes a test debut in a marquee series? It is Suryakumar Yadav and only because he plays baseball for Mumbai Indians. Everyone knows that Cheteshwar Pujara who recently played his 100th test match for India with great distinction, had almost lost his place not so long ago because some wonks in the team management (including an erstwhile captain) thought that Pujara was too slow between the wickets and his batting tempo was too slow to serve the team needs. What a bunch of jokers they were. Everyone knows that Shreyas Iyer cannot play a decent short ball. Many past Indian batters (including Ganguly) found it tough to face short pitch bowling. But, Shreyas Iyer or Shubhman Gill will always play ahead of Sanju Samson or KL Rahul.

For what it is worth, I must end by saying how disappointed I have been with KL Rahul. He was playing beautifully as a test opener before the IPL monster ate his brains. The stint with Punjab and now the “privilege” of
leading Lucknow, have introduced unnecessary self-doubts in his mind. He tried playing like a test match opener in T20s (how confused) and now he has lost his test place because he couldn’t judge where his off-stump was. Real shame. I hope that cricketing Gods will forgive KL Rahul for his misplaced priorities and may he perform as he did during his brilliant unbeaten 75 (of 91 deliveries) in many more games in a white shirt for India. My understanding of Indian cricket has always been that bleeding blue will never be as satisfactory as bleeding red (marks) when in whites.

 

ಶಿವರಾಮ ಕಾರಂತರ ‘ಅಳಿದ ಮೇಲೆ’

ಕನ್ನಡ ಕಾದಂಬರಿ ಲೋಕದಲ್ಲಿ ಎಂದಿಗೂ ಅಳಿಯದ ಹೆಸರು ಶಿವರಾಮ ಕಾರಂತ.  ಕಾದಂಬರಿ ಮಾತ್ರವೇ ಏಕೆ, ಕನ್ನಡ ಕುಲಕೋಟಿಯು ಕಾರಂತರ ಸರ್ವತೋಮುಖ ಕನ್ನಡ ಸೇವೆಯನ್ನು ಎಂದಿಗೂ ಮರೆಯಬಾರದು. ಕಾರಂತರ “ಬೆಟ್ಟದ ಜೀವ”ವನ್ನು ಪರಿಚಯಿಸುವ ಒಂದು ಲೇಖನವನ್ನು ಈ ಹಿಂದೆ ಬರೆಯುತ್ತಾ “ಯಾವ ಋಣ ಯಾರನ್ನು ಎಲ್ಲಿ ಬಿಗಿದಿದೆಯೋ” ಎನ್ನುವ ಭಾವವೇ ಬೆಟ್ಟದ ಜೀವದ ಜೀವಾಳ ಎಂದು ಹೇಳಿದ್ದೆ. ಬೆಟ್ಟದ ಜೀವವು ಚರ್ಚಿಸುವ ಋಣ ವಿಶೇಷವು ಒಂದು ಬಗೆ ಮತ್ತು ಆ ಋಣಭಾವವು ನೆಲಕ್ಕೆ ಅಂಟಿಕೊಂಡಾಗ ಹುಟ್ಟುವಂಥದ್ದು. “ಅಳಿದ ಮೇಲೆ” ಕಾದಂಬರಿಯಲ್ಲಿನ ಋಣವು ನೆಲವನ್ನು ತೊರೆದಾಗ ಹುಟ್ಟುವಂಥದ್ಧು. ಕಾರಂತರು ಬೆಟ್ಟದ ಜೀವವನ್ನು ಬರೆದ (1930s) ಸುಮಾರು ಮೂವತ್ತು ವರ್ಷಗಳ (1960) ನಂತರ “ಅಳಿದ ಮೇಲೆ” ಬರೆದದ್ದು.  ಬೆಟ್ಟದ ಜೀವದಲ್ಲಿ ಬರುವ ಯುವ ಕಾರಂತರ ಪಾತ್ರಕ್ಕೂ ಆ ಮೂವತ್ತು ವರ್ಷಗಳ ನಂತರ ಅಳಿದ ಮೇಲೆ ಕಾದಂಬರಿಯಲ್ಲಿ ಬರುವ ಮಧ್ಯ ವಯಸ್ಸಿನ ಕಾರಂತರ ಪಾತ್ರಕ್ಕೂ ಇರುವ ಅಂತರವನ್ನು ಗ್ರಹಿಸುವುದೂ ಅತ್ಯಗತ್ಯ.  ಆ ಅಂತರವಿದ್ದಾಗ್ಯೂ ಕಾರಂತರ ಜೀವನ ದೃಷ್ಟಿ ತನ್ನ ಮೂಲ ಕೆಲ ಎಳೆಗಳನ್ನೂ ಸೆಲೆಗಳನ್ನೂ ಉಳಿಸಿಕೊಂಡು, ಋಣದ ಪರಿಕಲ್ಪನೆಯ ಹೊಸ ವಿಮರ್ಶೆ ಮಾಡುವುದನ್ನು “ಅಳಿದ ಮೇಲೆ” ಕಾದಂಬರಿಯಲ್ಲಿ ನಾವು ಗಮನಿಸಬಹುದು. 

Click on QR code to read on another device

ನಾನು ಓದಿದ “ಅಳಿದ ಮೇಲೆ” ಕಾದಂಬರಿಯ ಪ್ರತಿಯು ನನ್ನ ತಂದೆಯು ಕೊಂಡು ಓದಿದ್ದ 1970 ರ ಆವೃತ್ತಿ. ಪುಸ್ತಕದಲ್ಲಿ ಅವರಿಗೆ ಇಷ್ಟವಾದ ಗುರುತು ಹಾಕಿದ ಸಾಲುಗಳು, ಕಾರಂತರು ಬಳಸಿದ್ದ ಅಪರೂಪದ ಪದಗಳಿಗೆ ಮಾಡಿಕೊಂಡ ಟಿಪ್ಪಣಿಗಳು ಇದ್ದುವು.  ನಾನು ಇದೇ ಪುಸ್ತಕವನ್ನು ನನ್ನ ಹದಿಹರೆಯದಲ್ಲಿ ಓದಿದ್ದೆ.  2002-03 ಸುಮಾರಿನಲ್ಲಿ ಬೆಂಗಳೂರು ವಿವಿಧಭಾರತಿ ಬಾನುಲಿ ಕೇಂದ್ರದಿಂದ ಅಳಿದ ಮೇಲೆ ಕಾದಂಬರಿಯ ರೇಡಿಯೋ ರೂಪಾಂತರವು ಪ್ರಸಾರವಾಗಿತ್ತು.  ಅದನ್ನು ಕೇಳಿ, ಪ್ರೇರಿತನಾಗಿ, ಮೂಲ ಪುಸ್ತಕವನ್ನು ಅಪ್ಪನಿಂದ ಪಡೆದು ಓದಿದ್ದೆ.  ಕಥೆ ನನಗೆ ಆಗಲೂ ಇಷ್ಟವಾಗಿತ್ತು.  ಈಗ, 2022 ರಲ್ಲಿ, ಇಪ್ಪತ್ತು ವರ್ಷಗಳ ನಂತರ ಇನ್ನೊಮ್ಮೆ ಓದಿದೆ (ಅದಕ್ಕೆ ಅನೇಕ ವೈಯಕ್ತಿಯ ಕಾರಣಗಳಿವೆ, ಇಲ್ಲಿ ವಿವರಿಸಲಾರೆ). 2003 ರಲ್ಲಿ ಕೇವಲ ಇಷ್ಟವಾಗಿತ್ತು. 2022 ರಲ್ಲಿ ನನ್ನ ಮನಸ್ಸಿನ ಆಳಗಳನ್ನು ಕೆದಕಿ ಇನ್ನಿಲ್ಲದಂತೆ ನನ್ನನ್ನೊಳಗೊಂಡಿತು.  ಅಪ್ಪ ಓದಿದ ಪುಸ್ತಕವನ್ನೇ ಉಳಿಸಿಕೊಂಡು ಅವರಷ್ಟೇ ಆಸ್ವಾದಿಸಿ ಓದುವ ಸುಖವೂ ಒಂದು ಸುಖವೆಂದು ನಾನು ಬಲ್ಲೆ. ಎಷ್ಟು ಜನರಿಗಿದ್ದೀತು ಈ ಸಂಪತ್ತು?    

ವಿವಿಧಭಾರತಿಯಲ್ಲಿ ಪ್ರಸಾರವಾದ ಕಾದಂಬರಿಯ ರೇಡಿಯೋ ರೂಪಾಂತರದ ಶೀರ್ಷಿಕೆ ಗೀತೆಯಾಗಿ ಗುನುಗುನಿಸಲು ಯೋಗ್ಯವಾದ ಒಂದು ಹಾಡೂ ಸಹ ಪ್ರಸಾರವಾಗಿತ್ತು. ಅದನ್ನು ನಿರ್ಮಾಣ ಮಾಡಿದವರ ಹೆಸರನ್ನು ಮರೆತಿದ್ದೇನೆ (ಕ್ಷಮೆ ಕೋರುತ್ತೇನೆ). ಹಾಡನ್ನು ನಾನು ಬರೆದಿಟ್ಟುಕೊಂಡಿದ್ದೆ. ಕಾದಂಬರಿಯನ್ನು ಪರಿಚಯಿಸಲು ಸಹಾಯ ಮಾಡುವ ಆ ಸಾಲುಗಳು ಹೀಗಿದ್ದವು.

“ಅಳಿದ ಮೇಲೆ…ಉಳಿಯುವುದೇನು…ಜೀವನ ಪಥದಲಿ

ಕೊಂಡುದು ಎಷ್ಟು ಕೊಟ್ಟುದು ಎಷ್ಟು…ಬಾಳಿನ ಲೆಕ್ಕದಲಿ

ಕೊಂಡುದುಕ್ಕಿಂತ ಕೊಟ್ಟುದು ಹೆಚ್ಚಲು…ಜೀವನ ಸಾರ್ಥಕತೆ

ಎನ್ನುವುದನ್ನು ಶೋಧಿಸ ತೊಡಗಿದೆ…ಶೋಧಕನಾತ್ಮಕಥೆ”

ಅಳಿದ ಮೇಲೆ ಕಾದಂಬರಿಯ ಮೇರುಪಾತ್ರ ಯಾರದ್ದು ಎಂದು ಕೇಳಿದರೆ ಅದು ಯಶವಂತ ರಾಯರದ್ದು ಎಂದು ಕಾದಂಬರಿಯನ್ನು ಬಲ್ಲವರು ಯಾರಾದರೂ ಹೇಳಿಯಾರು. ನನ್ನನ್ನು ಕೇಳಿದರೆ ಕಾದಂಬರಿಯ ಮುಖ್ಯವಾದ ಪಾತ್ರವಾಗಿ ಶಿವರಾಮ ಕಾರಂತರೂ ಇದ್ದಾರೆ ಎಂದೇ ಹೇಳುತ್ತೇನೆ.  ಯಶವಂತ ರಾಯರಿಗೂ ಶಿವರಾಮ ಕಾರಂತರಿಗೂ ವಯಸ್ಸಿನಲ್ಲಿ ಹೆಚ್ಚು ಕಡಿಮೆ ಒಂದು ತಲೆಮಾರಿನ ಅಂತರ (20-25 ವರ್ಷಗಳು). ರೈಲು ಪ್ರಯಾಣದಲ್ಲಿದ್ದಾಗ ಇಬ್ಬರ ನಡುವಿನ ಅಕಸ್ಮಾತ್ ಭೇಟಿ, ಆನಂತರದ ಪತ್ರ ವ್ಯವಹಾರ, ಮತ್ತು ಯಶವಂತರಾಯರ ಹಂಬಲಿಕೆಯ ಆದರೆ ನೆರವೇರದ ಕಾರಂತರೊಡಗಿನ ಕಡೆಯ ಭೇಟಿಯೇ ಕಾದಂಬರಿಯ ಅಸ್ತಿಭಾರ. ಕಾರಂತರು ಹಣದ ಬಗ್ಗೆ ಮನುಷ್ಯರಲ್ಲಿ ಇರಬಹುದಾದ ಅನುರಕ್ತಿ, ಲೋಭ, ಮತ್ತು ವಿರಕ್ತಿಗಳ ನಡುವಿನ ವ್ಯತ್ಯಾಸಗಳನ್ನೇ ಮೂಲದ್ರವ್ಯವನ್ನಾಗಿ ಇಟ್ಟುಕೊಂಡು ಇಡೀ ಕಾದಂಬರಿಯಲ್ಲಿ ಋಣ ಬಾಧೆ, ಋಣ ಪಾತಕ, ಋಣ ಸಂದಾಯ ಮಾಡುವ ಬಗೆಗಳು ಇತ್ಯಾದಿ ನಿಷ್ಕರ್ಷೆಯಲ್ಲಿ ತೊಡಗುತ್ತಾರೆ. 

ಅಳಿದ ಮೇಲೆ ಕಾದಂಬರಿಯನ್ನು ಓದುವಾಗ ಕಾರಂತರು ಕಂಡ ಶ್ರೇಷ್ಠ ಹೆಣ್ಣು ಪಾತ್ರಗಳು (ಕಾರಂತರ ಮೆಚ್ಚಿನ ವಿಷಯವೆಂದರೂ ಕಾರಂತರ ಕಲ್ಪನೆಯಲ್ಲಿ ಮಿಂದೆದ್ದಿದ್ದರೂ ತಪ್ಪಲ್ಲ) ನಿಜವಾಗಿಯೂ ಇದ್ದರು ಎಂಬುದನ್ನು ಯಾರಾದರೂ ಒಪ್ಪಬಹುದು. ಕಾದಂಬರಿಯ ಮೂಲ ಆಶಯವನ್ನು ಒಂದು ಮಟ್ಟಿಗೆ ಹಿಡಿದಿಡುವ ಕೆಲವು ಸಾಲುಗಳನ್ನು ಕಾದಂಬರಿಯಲ್ಲಿ ಕಾರಂತರೂ ಆಡುವುದಿಲ್ಲ.  ಯಶವಂತರಾಯರೂ ಆಡುವುದಿಲ್ಲ.  ಯಶವಂತರಾಯರ ಬರುವಿಕೆಯ ನಿರೀಕ್ಷೆಯಲ್ಲಿದ್ದ ಅವರ ಸಾಕು ತಾಯಿ ಪಾರ್ವತಮ್ಮನವರು ಆಡುವ ಈ ಮಾತುಗಳನ್ನು ಗಮನಿಸಿ. 

ಸೂಕ್ಷ್ಮ ಜೀವಿಗಳಾದವರಿಗೆ ಬಾಳು ಕೊನೆಯ ತನಕ ಮುಳ್ಳಿನ ಹಾಸಿಗೆಯಾಗಿ ಉಳಿಯುತ್ತದೆಯೋ ಏನೋ” (ಪುಟ 120)

ಲಕ್ಷ್ಮೀ ಅಳತೆಯಲ್ಲಿದ್ದರೆ ದೇವರು, ಇಲ್ಲವಾದರೆ ಅವಳೇ ಪಿಶಾಚಿ” (ಪುಟ 121).

ನೀನೂ ನನ್ನ ಹೊಟ್ಟೆಯ ಮಗುವೇ, ಯಾವ ಜನ್ಮದಲ್ಲೋ ನಿನಗೆ ನಾನು ತಾಯಿಯಾಗಿರಬೇಕು; ಇಲ್ಲವೇ ನಾನು ನಿನ್ನ ಮಗುವಾಗಿರಬೇಕು” (ಪುಟ 137, ಕಾರಂತರಿಗೆ ಹೇಳಿದ್ದು. ಯಶವಂತರಾಯರಿಗೂ ಅನ್ವಯಿಸುವುದು ಸಂದರ್ಭ ವಿಶೇಷ).

ಯಶವಂತರಾಯರು ಇದ್ದುದರಲ್ಲಿ ಸ್ಥಿತಿವಂತರಾಗಿದ್ದರಿಂದಲೋ ಏನೋ, ಅವರಿಗೆ ಜೀವನ ಸಂಬಂಧಗಳಲ್ಲಿ ಬದ್ಧತೆ, ಭೌತಿಕ ನಂಟು ಮತ್ತು ಸಮಯ ಬೇಡುವ ಸಂದರ್ಭಗಳು ಬಂದಾಗಲೆಲ್ಲಾ ಹಣದಿಂದಲೇ ತುಲಾಭಾರ ನಡೆಸಿ ತಾವು ಜೀವಂತ ಇರುವಾಗ ಮತ್ತು ಮರಣೋತ್ತರವಾಗಿ ಪ್ರೀತಿಪಾತ್ರರಿಗೆ ಮಾಶಾಸನ ವ್ಯವಸ್ಥೆ ಮಾಡಿದ್ದರೆಂದು ನನಗೂ ಅನ್ನಿಸದಿರಲಿಲ್ಲ.  ಯಶವಂತರಾಯರ ಮರಣಾನಂತರ ಅವರು ಬಯಸಿದ್ದನ್ನು ಬರೆದುಕೊಂಡು ಹಣೆಗೆ ಕಟ್ಟಿಕೊಂಡು ಊರೂರು ಅಲೆದು, ಅವರ ವಿಲಕ್ಷಣ ಜೀವನ ನಿರ್ಧಾರಗಳ ಹಿಂದಿನ ರಹಸ್ಯಗಳ ಬೆನ್ನತ್ತಿ ಅವುಗಳ ಒಳಮರ್ಮವನ್ನು ತಿಳಿಯಬೇಕೆಂಬ (ಕಾದಂಬರಿಯ) ಕಾರಂತರ ಕರ್ಮಾತುರವನ್ನು ನೋಡಿದಾಗ ಋಣ ಎಂದರೆ ಇದೇ ಏನೋ ಎಂತಲೂ ನಿಮಗೆ ಅನ್ನಿಸಿದರೆ (ಕಾದಂಬರಿಕಾರ) ಕಾರಂತರ ಪ್ರಯತ್ನ ಸಾರ್ಥಕವೆಂದೇ ಭಾವಿಸಬಹುದು. ಒಂದು ಪಕ್ಷ ಯಶವಂತ ರಾಯರು ಸ್ಥಿತಿವಂತರಾಗಿರದೇ ಇದ್ದಿದ್ದರೂ, ಕಾರಂತರ ಯಾವ ಸಹಾಯವನ್ನು ಅವರು ಅಪೇಕ್ಷಿಸಿದ್ದೇ ಆಗಿದ್ದರೆ ಕಾರಂತರು ತಮಗೊಪ್ಪಿಸಿದ್ದ ಕೆಲಸವನ್ನು ನಿರ್ವಂಚನೆಯಿಂದ ಯತ್ನಿಸದೇ ಬಿಡುತ್ತಿರಲಿಲ್ಲ ಎಂದು ಯಾವ ಓದುಗನಿಗಾದರೂ ಗೊತ್ತಾಗುತ್ತದೆ.  ತುಸು ಅತಿ ಎನಿಸುವ ಹಣದ ಲೆಕ್ಕಾಚಾರಗಳ ಕಸಿವಿಸಿಯ ನಡುವೆ ಕಾದಂಬರಿಯು ತಿಳಿಸ ಬಯಸಿರುವ ಮುಖ್ಯ ಕಾಣ್ಕೆ ಇದೇ ಆಗಿದೆ. ವ್ಯಾಪಾರದ ಒಳಪಟ್ಟು, ಆಸ್ತಿ, ಹಣದ ಚರ್ಚೆಯು ಕರಾವಳಿ ಕರ್ನಾಟಕದಲ್ಲಿ ಇತರೆಡೆಗಳಿಗಿಂತ ಹೆಚ್ಚು ಎಂಬ ಅನುಭವ ನಮ್ಮಲ್ಲಿ ಅನೇಕರಿಗಾಗಿರಬಹುದು. ಅದು ಅಲ್ಲಿಯ ಜನ ಪ್ರವೃತ್ತಿಯ ಸಹಜ ಭಾಗವೆಂದು ಭಾವಿಸಿದರೂ ತಪ್ಪಲ್ಲ. ಆ ಪರಿಸರದಲ್ಲೇ ಇದ್ದ ಕಾರಂತರು ಆ ಹಣದ ಲೆಕ್ಕಾಚಾರಗಳನ್ನೂ ಒಳಗಿನಿಂದಲೇ ಟೀಕಿಸುವುದು ಈ ಕಾದಂಬರಿಯ ಲಕ್ಷಣಗಳಲ್ಲೊಂದು.  ಯು ಆರ್ ಅನಂತಮೂರ್ತಿಯವರು ಒಮ್ಮೆ ಹೇಳಿದ್ದಂತೆ ಲೇಖಕನೊಬ್ಬನು “ಕ್ರಿಟಿಕಲ್ ಇನ್ಸೈಡರ್” ಆಗಲು ಪ್ರಯತ್ನಿಸಿದಾಗ ಅವನ ಬರಹದ ಮೌಲ್ಯ ಹೆಚ್ಚಾಗುತ್ತದೆ. “ಬೆಟ್ಟದ ಜೀವ” ಬರೆಯುವ ಕಾರಂತರ ಪಾತ್ರವು ವಿಸ್ಮಿತ ವಿದ್ಯಾರ್ಥಿಯದಾಗಿಯೂ “ಆಳಿದ ಮೇಲೆ” ಬರೆಯುವ ಕಾರಂತರ ಪಾತ್ರವು ಅನುಭವಿ ಮತ್ತು ವಿಚಕ್ಷಣ ಭಾಗೀದಾರನಾದಗಿಯೂ ಕಾಣುತ್ತದೆ. 

ಇವಿಷ್ಟು ಹೇಳಿ ಕೊನೆಯದಾಗಿ ಎರಡು ಮಾತುಗಳು. “ಪ್ರೀತಿಸುವುದು ಯಾತಕ್ಕಾಗಿ ಎಂದರೆ, ಪರೋಪಕ್ಕಾರಕ್ಕಲ್ಲ, ಔದಾರ್ಯದಿಂದಲ್ಲ….ಉಳಿದವರು ಹೇಗೂ ಇರಲಿ, ತಮ್ಮ ತೂಕವನ್ನು ತಾವು ಪ್ರಾಮಾಣಿಕವಾಗಿ ಮಾಡಲು…” (ಪುಟ 60) ಎನ್ನುವಾಗಿನ ಕಾರಂತರ ವಿವೇಚನೆಯನ್ನು ನಿಮ್ಮ ಒರೆಗೆ ಹಚ್ಚಿ, “ಕಡಲಿನ ಒಂದು ಅಲೆಯು ಇನ್ನೊಂದರ ಹುಟ್ಟನ್ನು ಅಳಿಸಿ ತಾನು ಮೆರೆಯುತ್ತದೆ. ಮೆರೆದು ಕೆಲವು ನಿಮಿಷಗಳಲ್ಲಿ ಅದೂ ಅಳಿಯುತ್ತದೆ…ಆದರೆ ಕಡಲಿನ ಮೇಲೆ ಅಲೆಗಳೇ ಇಲ್ಲವೆಂದಾಗುವುದಿಲ್ಲ” (ಪುಟ 190) ಎನ್ನುವ ಯಶವಂತರಾಯರ ಕಲಕುವ ಮಾತುಗಳನ್ನು ನಿಮ್ಮ ನಾಲಿಗೆಗೆ ತಾಗಿಸಿ, ಇನ್ನೂ ಹೆಚ್ಚಿನ ತೋಯುವಿಕೆಗೆ ಕಾದಂಬರಿಯನ್ನು ಖಂಡಿತವಾಗಿ ಓದಿ ಎನ್ನುವಾಗ್ಗೆ ಪರಿಚಯವನ್ನು ಇಲ್ಲಿ ಮುಗಿಸುತ್ತೇನೆ. 

A 2-year-old’s insight into reading skills in primitive humans

[This is a long introduction to one of the longer blog articles I have published here since the blog’s inception in 2008. This article is not about the Covid19 crisis that has engulfed Karnataka and India in the middle of 2021. I am writing this with a sincere intention to give the readers some psychological relief from the misery and mayhem around us. This is not comic relief and not about sports/movies/entertainment ‘news’ channels. Covid19 has disproportionately hit the elderly. The second crueler wave of Covid19 is not sparing even children. Through this article, I am celebrating the child’s not overly proud mind, which has the tenacity and commitment to learn quickly from its past mistakes. I had been thinking and working on this for more than eight months due to my own personal circumstances. The article has come to fruition now. I will publish a Kannada translation of this article in a few days. I think mostly in Kannada and my ideas come to me in Kannada. However, when I read and refer to published scholarship (in English for obvious reasons), I switch to writing in English. I hope that the readers of CanTHeeRava will tolerate the diversion offered by this article, as we pray our way through some of the darkest and most desperate hours in our post-independence history].  

Introduction

A 2-year-old child is ascribed to know a lot, and a lot with limited understanding. Infants (<2 years) and toddlers (>2 years) follow a predictable learning curve while they attempt to speak and read their mother tongue i.e., – they recognize various aural contrasts, distinguish words from non-words, vocalise single meaningful words, learn to recognize written letters (graphemes) and their discrete sounds (phonemes), and read written words in a contemporary corresponding script. This chronology is likely preserved in any human cultural setting. Graphemes (alphabetic letters or word-building blocks) rarely represent full words except in languages that use hieroglyphic (pictorial) scripts. The earliest known formal writing systems invented by humans were hieroglyphics (Babylonian, Egyptian and Indus valley scripts). Visually intricate modern Japanese and Korean scripts may have lost their pictorial emphasis partly because hieroglyphics are easily overwhelmed by the demands of complex human thought that cannot always be accurately and objectively represented by abstract miniaturised drawings. However, pictorial graphemes have survived and continued to flourish in the digital cultural milieu. There are important differences between how children learn visually dense (e.g., Chinese) and less dense (e.g., Brahmi, Nagari, or Latin) scripts.

Assuming that the Haeckelian paradigm of ontogeny recapitulating phylogeny or its refined formulations observed in the realm of morphological and molecular embryology have parallels even in behavioural evolution, I hypothesised that an average human 2-year-old toddler learning to read graphemes (written letters) may give us insights into evolution of reading strategies in early humans. A 2-year-old may not have the ability to write, but he can read (with assistance) and remember symbols, just as prehistoric humans may have interpreted naturally occurring ‘symbol-like’ things without needing to know how to write or create coded symbols themselves.

Method

I did not know and could not teach hieroglyphs of an extinct language to a 2-year-old (2Y 5M). Instead, I exploited a subject area of great interest to him viz., cars. Car logos are abstract pictorial graphemes that never pictorially represent a car. Cars collectively formed a convenient “genus” of 4-wheeled automobiles, and car manufacturers represented car “species”. The toddler aurally learnt the names of these manufacturers while looking at corresponding logos on real cars while walking alongside parked cars. The car logos were at a convenient height for him (height: 85 cm) to stare and study. He became an expert at recognizing around 25 car logos in three days, and within a week he could recognise those logos from a distance (10 m) and even on moving vehicles. After mastering those logos, he participated in a game/task where he was asked to recall the names of car manufacturers by looking at logo graphemes in a random order on a computer screen and as paper drawings. The toddler was not exposed to languages other than his mother-tongue (Kannada, a Dravidian language). Car company names (Latin origin) were foreign to his aural conditioning and did not affect accuracy of memory recall. He was not rewarded for correct identification during the task. Several new logo graphemes that were unfamiliar to him and some distorted versions of familiar graphemes were included in the mix. The toddler was not taught and did not know what it meant to say “don’t know/can’t say”. He always attempted to identify even if the logo was unfamiliar. I summarise the main findings of this unscientific study, which was nevertheless exciting at least to me.  

Pictorial graphemes designed as logos for car manufacturing companies belonged to four broad types from the viewpoint of literate adults (see illustrations from 1 to 32). There were logo graphemes that use recognisable animal line-drawing with or without other geometric shapes and Latin letters (e.g., Peugeot, Lamborghini, Ferrari, Jaguar, Alpha-Romeo). Logos that exclusively used abstract lines and geometric shapes (e.g., Citroen, Toyota, Renault, Mercedes-Benz, Volkswagen, Mahindra, Audi, Mitsubishi, Hyundai, Tata, Honda, Chevrolet). Some logo graphemes included Latin names written within geometric shapes and lines (e.g., Nissan, Opel, BMW, Lancia, Dacia, Fiat, Mini, Kia, Volvo, Opel, Ford). Two logos were exclusively made of conventional Latin letter graphemes (Jeep, Saab). The toddler found it easiest to identify logos depicting animal drawings. He had no trouble correctly identifying logos depicting abstract shapes and mixed elements with no apparent affinity to familiar objects. He always tried to associate the logo grapheme with a name he knew, never said “I don’t know”, and chose to not answer if an alien logo stumped him completely. The most revealing behaviours were noted when the 2-year-old was shown unfamiliar logos and inaccurate versions of familiar logos. The toddler’s answers led me to the following inferences.

A 2-year-old reads by gauging the outer contours of any grapheme (pictorial or otherwise), and inner details are peripheral to comprehension

The logo of Ferrari (5), depicting a prominent black rearing horse on a yellow background, was familiar to the toddler. When shown the unfamiliar logo of Porsche (6) depicting a smaller black rearing horse on a yellowish background surrounded by other drawings, he identified it as Ferrari without hesitation. The peripheral details in the Porsche logo did not affect his reading and recollection. The reverse scenario could not be tried. He often misidentified familiar but similar Latin logos of Ford (18) as KIA (19), both with a prominent oval shape encircling Latin letters. The guessing was evident even when he dealt with familiar but similar abstract logos of Honda (16) and Hyundai (17), both representing the Latin letter ‘H’ with cursive differences. When he came across the unfamiliar logo of Volvo (30), he named it as Nissan (29), which he knew. The misidentification of Volvo (30) as Nissan (29) was resolved once he noticed and quickly internalised the arrow popping out of the outer circle of Volvo, absent in Nissan. He had overcome a similar confusion when he first came across Nissan (29) in the car parking area, and thought that it was the logo of Opel (28) that he had learnt first. When he saw the modified logos of Fiat (23) and Lancia without the names or the inner intricacies of the logo, he correctly identified them every time, but he failed to identify the same logos when presented merely as Latinised names without the surrounding outer boundaries (24). When the Latin letters from the logo of BMW (26) was removed he could identify the logo correctly but not when the + sign from the inner circle was removed even if the Latin letters were present (27). He had no trouble distinguishing between the Latin logos of Jeep (20) and Saab (21), as they had no distinct geometric outer boundaries. All indicating that the human brain is more at ease while reading whole words as pictures than letter decoding. Brain imaging studies show significant overlaps between the neuronal pathways for visual (facial) and word-form recognition, again emphasising the importance of pictorial comprehension in reading. The toddler brain appeared to put greater weightage on outer contour and shape of the objects/words to identify them, and this had other ramifications (see below).

A 2-year-old toddler applies less than stringent similarity criteria and equates substantially different logos

The most startling instance of all was when he was shown the unfamiliar logo of Buick (32, with three interwoven shields within a circle) during the task and he immediately named it as Audi (31, with four interwoven circles) familiar to him. The three shields were distinct from the four circles and the toddler had barely begun to learn how to count. The only explanation could be that the toddler was following a simple strategy while learning to read i.e., anything roughly looking like what he already knew, should be the same object. Even if outer contours were dissimilar, the toddler saw higher-order superseding common features. We have often seen young toddlers identifying curly haired dogs as sheep. 2-year-olds perceive closely related phonological cues as those referring to familiar objects, both suggest that 2-year-olds have a handle on approximation and generalisation. The most studied manifestation of such approximating ability in young children is the mirror-error i.e., incapacity to differentiate letters and words from their mirrored versions.  Mirror-error is gradually lost through training in older children and may persist in literate and illiterate adults not exposed to language scripts needing mirror discrimination. The question whether the earliest ‘literate’ adult humans were as mirror-insensitive as modern toddlers and untrained adults, becomes enticing.  Keeping aesthetic and utilitarian (ease of seal/tool-making) aspects aside, it is intriguing that ancient hieroglyphics of the Egyptian and Indus scripts are mostly bilaterally symmetrical and mirror insensitive, except when depicting animals (see the seals from the Indus, Mesopotamian, and Egyptian collection, given at the end of this article). Passive aural imprinting potentially begins even when the baby is in the womb while the visual discriminating ability is acquired more actively between 1st and 2nd year after birth. It remains to be seen if a 2-year-old’s sensitivity to phonological (mispronunciation) errors in familiar words is greater than to visual distortions of familiar objects.

Conclusion

A 2-year-old has an astonishing capacity to recognise, remember, and recollect intricate information but evidently lacks the experience to separate seeds from weeds. His/her attention to the “irrelevant” details in anything they see and hear can challenge the limits of adult reason. I do not intend to ignore the quagmire in questions such as whether the human cognition is unique or whether a 2-year-old is a moral being. Even if we accept that a toddler is neither culturally nor cognitively as sophisticated as early humans (and other extinct Homo species) were, patterns in a 2-year-old learning to read pictorial graphemes (recalling associated aural cues) lit at least some gullies of the vast evolutionary mindscape of early ‘literate’ humans. The 2-year-old toddler can spot subtle differences between two similar-looking familiar pictorial graphemes but errs at differentiating them if the outer contours are identical. He does not shy away from guessing and equating familiar with unfamiliar by applying a less than stringent criteria for similarity compliance. The first ever formal writing by humans may have involved symbolic number/counting systems not meant to convey speech. However, the human ability to verbally interpret (read) symbols potentially predate invention of writing in any form. At a metaphysical level, this may mean that the early humans ‘actively’ sought meaning in novel, abstract and random objects, equating unknowns with knowns even when they are wildly dissimilar. Clever tasks designed for slightly older toddlers may help investigate this further. At a pragmatic level, 2-year-olds are early human (hunter-gatherer) reincarnates, who had learnt to guess and hedge their bets while deciphering weathered footprints (pictorial graphemes) of an animal, be that of a prey or a predator. 

Ancient Hieroglyphic Scripts: From left to right, an Animal seal from the Indus valley (2500 BCE), a temple facade from the Uruk period in Iran (3300 BCE), and an Egyptian slate (1500 BCE).

References

  1. Dehaene, S., & Cohen, L. (2011). The unique role of the visual word form area in reading. Trends in Cognitive Sciences, 15(6), 254-262.
  2. Dehaene, S., Nakamura, K., Jobert, A., Kuroki, C., Ogawa, S., & Cohen, L. (2010). Why do children make mirror errors in reading? Neural correlates of mirror invariance in the visual word form area. Neuroimage, 49(2), 1837-1848.
  3. Fernandes, T., Leite, I., & Kolinsky, R. (2016). Into the looking glass: Literacy acquisition and mirror invariance in preschool and first‐grade children. Child Development, 87(6), 2008-2025.
  4. Heldstab, S. A., Isler, K., Schuppli, C., & van Schaik, C. P. (2020). When ontogeny recapitulates phylogeny: Fixed neurodevelopmental sequence of manipulative skills among primates. Science Advances, 6(30), eabb4685.
  5. Higuchi, H., Okumura, Y., & Kobayashi, T. (2021). An eye-tracking study of letter-sound correspondence in Japanese-speaking 2-to 3-year-old toddlers. Scientific Reports, 11(1), 1-7.
  6. Houston, D. M., & Jusczyk, P. W. (2003). Infants’ long-term memory for the sound patterns of words and voices. Journal of Experimental Psychology: Human Perception and Performance, 29(6), 1143.
  7. Hulme, C., & Snowling, M. J. (2013). Learning to read: What we know and what we need to understand better. Child Development Perspectives, 7(1), 1-5.
  8. Kantartzis, K., Imai, M., Evans, D., & Kita, S. (2019). Sound symbolism facilitates long-term retention of the semantic representation of novel verbs in three-year-olds. Languages, 4(2), 21.
  9. Lalonde, K., & Holt, R. F. (2015). Preschoolers benefit from visually salient speech cues. Journal of Speech, Language, and Hearing Research, 58(1), 135-150.
  10. Maurer, D., & Werker, J. F. (2014). Perceptual narrowing during infancy: A comparison of language and faces. Developmental Psychobiology, 56(2), 154-178.
  11. McDougall, S., Hulme, C., Ellis, A., & Monk, A. (1994). Learning to read: The role of short-term memory and phonological skills. Journal of Experimental Child Psychology, 58(1), 112-133.
  12. Mostow, J. S. (1992). Painted Poems, Forgotten Words. Poem-Pictures and Classical Japanese Literature. Monumenta Nipponica, 323-346.
  13. Olsson, L., Levit, G. S., & Hoßfeld, U. (2017). The “Biogenetic Law” in zoology: from Ernst Haeckel’s formulation to current approaches. Theory in Biosciences, 136(1), 19-29.
  14. Pegado, F., Nakamura, K., Cohen, L., & Dehaene, S. (2011). Breaking the symmetry: mirror discrimination for single letters but not for pictures in the Visual Word Form Area. Neuroimage, 55(2), 742-749.
  15. Sparavigna, A. C. (2009). Ancient Egyptian seals and scarabs. Available at SSRN 2823472.
  16. Sundara, M., Polka, L., & Genesee, F. (2006). Language-experience facilitates discrimination of/d-/in monolingual and bilingual acquisition of English. Cognition, 100(2), 369-388.
  17. Swingley, D. (2005). 11‐month‐olds’ knowledge of how familiar words sound. Developmental science, 8(5), 432-443.
  18. Swingley, D. (2016). Two-year-olds interpret novel phonological neighbors as familiar words. Developmental Psychology, 52(7), 1011.
  19. Yadav, N. (2019). Structure of Indus Script. Indian Journal of History of Science, 54, 125-134.
  20. Yoshida, K. A., Fennell, C. T., Swingley, D., & Werker, J. F. (2009). Fourteen‐month‐old infants learn similar‐sounding words. Developmental Science, 12(3), 412-418.
  21. Yu, L., & Reichle, E. D. (2017). Chinese versus English: Insights on cognition during reading. Trends in Cognitive Sciences, 21(10), 721-724.

ಕೋವಿಡ್ ಮಹಾಮಾರಿಯ ಮಾರಣಾಂತಿಕ ಎರಡನೇ ಅಲೆ – ಕಾರಣಕರ್ತರು ಮತ್ತು ಜವಾಬುದಾರರು

ಕರ್ನಾಟಕ ಮೊದಲಾಗಿ ಭಾರತದ ಎಲ್ಲ ಪ್ರಾಂತ್ಯಗಳೂ ಕೋವಿಡ್ ಮಹಾಮಾರಿಯ ಎರಡನೇ ಅಲೆಯಲ್ಲಿ ಕೊಚ್ಚಿ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಸ್ಥಿತಿ ವಿಮರ್ಶೆ ಮಾಡಲು ಯತ್ನಿಸಿವುದು ಎಷ್ಟು ಸರಿಯೋ ಗೊತ್ತಿಲ್ಲ. ಆದರೂ, ಜನರ ಬವಣೆ ಮತ್ತು ಭಾವನೆಗಳನ್ನು ಗಮನಿಸಿಯೂ ಗಮನಿಸದಂತೆ ಇರುವುದು ಕಷ್ಟಸಾಧ್ಯ.
ಅನೇಕರು ಭಾರತದ ಲಸಿಕೆ ಕಾರ್ಯಕ್ರಮವನ್ನು ಪ್ರಶ್ನಿಸುತ್ತಿದ್ದಾರೆ. ಅದು ಸರಿಯಲ್ಲ. ಲಸಿಕೆ ಪಡೆಯುವುದು ಎಷ್ಟು ಮುಖ್ಯ ಎಂದು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಹೇಳುವುದೂ ಅಷ್ಟು ಸರಿಯಲ್ಲ. ಲಸಿಕೆಗಳು ಭಾರತೀಯರಿಗೆ ಹೊಸದಲ್ಲ. ಅದರ ಮಹತ್ವ ಜನಸಾಮಾನ್ಯರಿಗೂ ತಿಳಿದಿದೆ. ಆದರೆ, ಈ ಹೊಸ ಕೋವಿಡ್ ಲಸಿಕೆಗಳ “ತರಾತುರಿ”ಯು ಅನೇಕರನ್ನು ಅಧೀರರನ್ನಾಗಿ ಮಾಡಿದ್ದು ನಿಜ. ಆ ಕಸಿವಿಸಿಯನ್ನು ಕಡಿಮೆ ಮಾಡುವಲ್ಲಿ ಸರ್ಕಾರ ಇನ್ನಷ್ಟು ಜವಾಬ್ದಾರಿಯುತವಾಗಿ ಯೋಚಿಸಬಹುದಿತ್ತು. ಭಾರತದಲ್ಲಿ ತಯಾರಿಸಿದ ಲಸಿಕೆಗಳು ಎಂಬ ಗರ್ವ ಆರೋಗ್ಯಕರವಾದ ಮಟ್ಟದಲ್ಲಿ ಇರಲಿಲ್ಲ. ನಮ್ಮ ಲಸಿಕೆಯನ್ನು ನಾವೇ ತಯಾರಿಸಿಕೊಂಡೆವು, ಅದೇ ಲಸಿಕೆಯ ಜೀವನ ಸಾರ್ಥಕ್ಯ ಎನ್ನುವಂಥ ಆಲೋಚನೆಗಳಿಂದ ಲಸಿಕೆ ಕಾರ್ಯಕ್ರಮಕ್ಕೆ ಯಾವ ಉಪಯೋಗವೂ ಆಗಲಿಲ್ಲ ಎಂದಷ್ಟೇ ಹೇಳಿ ಆ ವಿಚಾರವನ್ನು ಅಲ್ಲಿಯೇ ಬಿಡುತ್ತೇನೆ.


ಭಾರತವು ಕೋವಿಡ್ ಲಸಿಕೆಗಳನ್ನು ರಪ್ತು ಮಾಡಿದ್ದರಲ್ಲೂ ಯಾವ ತಪ್ಪೂ ಇಲ್ಲ. ಭಾರತ ಅಂತಃಕರಣವುಳ್ಳ ದೇಶ ಎಂಬ ಸಂದೇಶ ಕೊಡುವ, ನಮಗಿಂತ ಹೆಚ್ಚಿನ ಕಷ್ಟದಲ್ಲಿರುವ ಹೆಚ್ಚು ಅಸಹಾಯಕವಾದ ನೆರೆಯ ದೇಶಗಳಿಗೆ ಹೆಗಲೆಣೆ ಆಗುವ ಸದುದ್ದೇಶ ಲಸಿಕೆಯ ರಪ್ತು ಮಾಡುವಂತೆ ಪ್ರೇರೇಪಿಸಿದ್ದರೆ ಅದನ್ನು ಒಪ್ಪಬೇಕಾಗುತ್ತದೆ. ಅಮೆರಿಕಾದಂತೆ ಎಲ್ಲಾ ವಿಚಾರದಲ್ಲೂ ಶಕ್ತಿ ಪ್ರದರ್ಶನ ಮಾಡುವ ಅಗತ್ಯವೂ ಭಾರತಕ್ಕೆ ಇಲ್ಲ, ಮತ್ತು ನಮ್ಮ ಶಕ್ತಿಯೂ ಅಷ್ಟು ಅಗ್ಗವಾಗಿಲ್ಲ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರವು ಎಡವಿರುವುದು ಲಸಿಕೆ ರಫ್ತು ಅಥವಾ ಲಸಿಕೆ ಕೊಡುವ ವಿಚಾರಗಳಲ್ಲಿ ಅಲ್ಲ. ನಮ್ಮ ಇಂದಿನ ಶೋಚನೀಯ (ತಾತ್ಕಾಲಿಕ) ಪರಿಸ್ಥಿತಿಗೆ ಮೂರು ಕಾರಣಗಳಿವೆ. ಮೊದಲನೇದು, ಭಾರತ ದೇಶವು ಮಹಾಮಾರಿಯ ಎರಡನೇ ಅಲೆಯನ್ನು ನಿರೀಕ್ಷಿಸಿಯೇ ಇರಲಿಲ್ಲ ಎಂಬ ವಾದವನ್ನು ಒಪ್ಪುವುದು ಕಷ್ಟ. ಆದರೆ ಆ ಅಲೆಯ ಅಬ್ಬರ ಇಷ್ಟು ತೀವ್ರವಾಗಿ ಇರಲಿದೆ ಎಂಬ ನಿರೀಕ್ಷೆ ಯಾರಲ್ಲಿಯೂ ಇರಲಿಲ್ಲ. ೨೦೨೦ ರ ಮೊದಲ ಕೋವಿಡ್ ಅಲೆಯಲ್ಲಿ ಸೋಂಕಿತರ ಮತ್ತು ಸಾವಿಗೀಡಾದವರ ಅಂಕಿ ಸಂಖ್ಯೆಯನ್ನು ಸರಿಯಾಗಿ ದಾಖಲು ಮಾಡದೇ ಇದ್ದುದರ ಕಾರಣದಿಂದ ಮಹಾಮಾರಿಯು ಹರಡುವ ಸಂಭಾವ್ಯ ಲೆಕ್ಕಾಚಾರಗಳು ಸರಿಯಾದ ತಳಹದಿಯ ಮೇಲೆ ನಿಂತಿರಲಿಲ್ಲ. ಎರಡನೆಯದು, “ಕೋವಿಡ್ ಮಹಾಮಾರಿಯನ್ನು ಭಾರತವು ಜಯಿಸಿದ್ದು ಆಗಿದೆ, ಜಗತ್ತಿಗೆ ಮಾದರಿಯಾಗಿದೆ” ಎಂದು ಪೊಳ್ಳು ಜಂಭದಿಂದ ಬೀಗುವ ಮನಸ್ಥಿತಿಯನ್ನು ಇನ್ನಷ್ಟು ಉತ್ತೇಜಿಸಿದ ಸರ್ಕಾರಿ (ಅ) ಕ್ರಮಗಳು ಮತ್ತು ಭಾಷಣಗಳು.

ಮೂರನೆಯ ಮತ್ತು ಪ್ರಾಣವಾಯು ಕಸಿಯುವ ಕಾರಣ ಮತ್ತೊಂದಿದೆ. ಅದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ನಂಬುಗೆಯ ಕೊರತೆ. ದೇಶದಲ್ಲಿ ಎಲ್ಲಾ ರೀತಿಯ ಯೋಜನೆಗಳೂ ಎರಡು ಹೆಸರಿನಲ್ಲಿ ಜಾರಿಯಾಗುತ್ತವೆ. ಕೇಂದ್ರ ಸರ್ಕಾರದ ಪಾಲು ರಾಜ್ಯ ಸರ್ಕಾರದ ಪಾಲು ಎಂದು ಶೇಕಡಾವಾರು ಹೇಳುವ ಕಾಮಗಾರಿಗಳು ಒಂದು ಕಡೆ. ಅದನ್ನು ಸದ್ಯಕ್ಕೆ ಬಿಡೋಣ. ಜನರಿಗೆ ಮಂಕು ಬೂದಿ ಎರಚುವ ಚುನಾವಣಾ ತಂತ್ರಗಳಿಂದ ಜನರ ಹಣ ಪೋಲಾಗುತ್ತದೆ ಮತ್ತು ಆಗಬೇಕಾದ ಕೆಲಸಗಳು ಆಗದೇ ಹೋಗುತ್ತವೆ. ಎಲ್ಲಾ ರೀತಿಯ ಸಮಾಜ ಕಲ್ಯಾಣ ಯೋಜನೆಗಳೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಪ್ರತ್ಯೇಕ ಪಕ್ಷವಾರು ಲೇಬಲ್ ಹಚ್ಚಿಕೊಂಡು ಬರುತ್ತವೆ. ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿರುವವರು ಯಾರು ಎಂದು ಕೇಳಿದರೆ “ಕೇಂದ್ರ ಸರ್ಕಾರವೇ ಎಲ್ಲಕ್ಕೂ ಮೂಲಾಧಾರ” ಎಂದು ಗೋಣಾಡಿಸುವ ಭಟ್ಟಂಗಿಗಳು ಉತ್ತರಿಸುತ್ತಾರೆ. ಆದರೆ ಕೋವಿಡ್ ಮಹಾಮಾರಿಯನ್ನು ನಿಭಾಯಿಸುವಾಗ ಯಾರು ಜವಾಬ್ದಾರರು ಎಂದು ಕೇಳಿದರೆ “ಜನ ಸತ್ತರೆ ಅದಕ್ಕೆ ರಾಜ್ಯ ಸರ್ಕಾರದ ಕಳಪೆ ವ್ಯವಸ್ಥೆ ಕಾರಣ” ಎಂದು ತಕ್ಷಣ ಉತ್ತರಿಸುವವರು ಅವರೇ. ಮಹಾಮಾರಿಯು ಎರಡು ಅಲೆಗಳ ನಡುವೆ ವಿರಮಿಸುತ್ತಿದ್ದ ಸಮಯದಲ್ಲಿ ಭಾರತೀಯರು ತೋರಿದ ಅಜಾಕರೂಕ ವರ್ತನೆಗಳಿಗೆ ಸರ್ಕಾರ ಒಂದನ್ನೇ ದೂರುವಷ್ಟು ದಡ್ಡ ನಾನಲ್ಲ (ಸ್ವಲ್ಪ ದಡ್ಡ ಆಗಿರಬಹುದು). ಆದರೆ, ಎರಡನೇ ಅಲೆಯು ಆರಂಭವಾಗಿದೆ ಎಂದು ತಿಳಿದು ಎರಡು ವಾರಗಳು ಕಳೆದರೂ ಅದನ್ನು ಗಂಭೀರವಾಗಿ ಪರಿಗಣಿಸದೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡು, ಜಾತಿ ಲೆಕ್ಕಾಚಾರ ಹಾಕುತ್ತಾ ಊರೂರು ಅಲೆಯುತ್ತಿದ್ದ ಆಡಳಿತಾರೂಢ ಮತ್ತು ವಿಪಕ್ಪ ರಾಜಕಾರಣಿಗಳಿಗೆ ಹಾರ ಹಾಕಿ ಪ್ರಶಸ್ತಿ ಕೊಡುವಷ್ಟು ಮುಟ್ಠಾಳನೂ ನಾನಲ್ಲ. ನೀರು ಮೂಗಿನ ಮಟ್ಟವನ್ನು ಮೀರಿ ಹರಿಯಿತು ಎಂದು ಗೊತ್ತಾದಾಗ ಈಗ “ರಾಜ್ಯ ಸರ್ಕಾರಗಳೇ, ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿ” ಎಂದು ಉಪದೇಶ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಟುವಾಗಿ ನಿಂದಿಸಬೇಕಾಗುತ್ತದೆ. ಮಿಕ್ಕಂತೆ, ಈಗಾಗಲೇ ಶಿಥಿಲವಾಗಿರುವ ನಮ್ಮ ಆರೋಗ್ಯ ಸೇವಾ ವ್ಯವಸ್ಥೆಯನ್ನು ಬುಡಮೇಲು ಮಾಡಿ ಕೋವಿಡ್ ಪರಿಸ್ಥಿತಿ ಕೈ ಮೀರಿರುವುದಕ್ಕೆ ಬಹುತೇಕ ಕಾರಣಗಳು ಮೂರು (1) ನಾವೇ ಸೃಷ್ಟಿಸಿಕೊಂಡಿರುವ ನಗರ ಜೀವನ ಕೇಂದ್ರಿತ ಅನಿವಾರ್ಯತೆಗಳು, (2) ಅದಕ್ಕೆ ತಕ್ಕುದಾದ ಆಡಳಿತವನ್ನು ಅನುಷ್ಠಾನಗೊಳಿಸಲು ಅಡ್ಡಿ ಮಾಡುವ ಮನೆಮುರುಕರ ಮಾಫಿಯಾ ಬಹುಸಂಖ್ಯೆಯಲ್ಲಿ ಆಡಳಿತ ಮಂಡಲದಲ್ಲಿ ಕರಗಿಹೋಗಿರುವುದು, (3) ಹಕ್ಕುಗಳನ್ನು ವೈಭವೀಕರಿಸಿ ಕರ್ತವ್ಯಗಳನ್ನು ಕಡೆಗಣಿಸುವ ಬೇಜವಾಬ್ದಾರಿಯುತ ಜೀವನ ಶೈಲಿ, ಎಂಬುದು ಅನೇಕರಿಗೆ ಅಪ್ರಿಯವಾದರೂ ಸತ್ಯ. ಪರಿಹಾರ ಸೂಚಿಸಲು ನಾನು ವಿಷಯ ತಜ್ಞನಲ್ಲ. ವಿಷಯ ತಜ್ಞನಾಗುವುದರಿಂದ ಪರಿಹಾರ ಸೂಚಿಸಲು ಅಥವಾ ಪರಿಸ್ಥಿಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂಬ ಖಾತರಿ ಎಂದೂ ಇರಲಿಲ್ಲ, ಇಂದೂ ಇಲ್ಲ. “ಒಗ್ಗಟ್ಟಾಗಿ ಹೋರಾಡೋಣ. ದೇಶಕ್ಕಾಗಿ ಒಂದಾಗೋಣ” ಎನ್ನುವ ಬರಿಗೊಡಗಳಿಗೆ ಸಮಾಧಾನ ಹೇಳುತ್ತಿವೆ ನೀರಿಲ್ಲದ ನಲ್ಲಿಗಳು.

ಕರ್ನಾಟಕದ ಕಾಮಧೇನುವಿಗೆ ಉರುಳು

ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಲ (ಕೆ ಎಂ ಎಫ಼್) ಉತ್ಪಾದಿಸುವ  ನಂದಿನಿ ಮೊಸರಿನ ಪೊಟ್ಟಣಗಳ ಮೇಲೆ ಹಿಂದಿ ಹೇರುವ FSSAI ನ ಹುನ್ನಾರಕ್ಕೆ ಕೊನೆಗೂ ತೆರೆ ಬಿದ್ದಿದೆ.  ಕರ್ನಾಟಕದ ಮತ್ತು ತಮಿಳುನಾಡಿನ ಜಾಗೃತ ಪ್ರಜೆಗಳು ಮತ್ತು ಕೆಲವು ಸ್ವಾಭಿಮಾನಿ ರಾಜಕೀಯ ನಾಯಕರಾದರೂ ಹಿಂದಿ ಹೇರಿಕೆಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದು ಸಮಾಧಾನಕರ ಸಂಗತಿ.  ಆದರೆ ಕರ್ನಾಟಕದ ಹೆಮ್ಮೆಯ ಸಹಕಾರ ಸಂಸ್ಥೆಗಳಲ್ಲೊಂದಾದ ಕೆಎಂಎಫ಼್ ನಂದಿನಿಯು  ಹಿಂದಿಗೆ ಸ್ವಲ್ಪವೂ ಪ್ರತಿರೋಧವನ್ನು ತೋರದೆಯೇ  “ಅವರು ದಹಿ ಎಂದರು ಇವರು ಸಹಿ ಎಂದರು” ಎನ್ನುವಂತೆ ಹಿಂದಿಯನ್ನು ಕಣ್ಣಿಗೊತ್ತಿಕೊಂಡು ಮೈಮೇಲೆ ಹೊತ್ತಿಕೊಂಡದ್ದು ನಿಜಕ್ಕೂ ಶೋಚನೀಯ.  ಹೀಗೆಲ್ಲಾ ಏಕಾಗುತ್ತಿದೆ? ಕರ್ನಾಟಕದಲ್ಲಿ ಈಗ ಉಂಟಾಗಿರುವ ಹಾಲಿನ ಕೊರತೆ ಆಕಸ್ಮಿಕವೇ ಅಥವಾ ರಾಜ್ಯ ಸರ್ಕಾರದ ಅಮುಲ್ ಪರವಾದ ಹೇಳಿಕೆಗಳು ಕಾಕತಾಳೀಯವೇ? ಎನ್ನುವ ಪ್ರಶ್ನೆ ಅನೇಕ ಪ್ರಜ್ಞಾವಂತ ನಿಜಪ್ರಜೆಗಳಲ್ಲಿ ಎದ್ದಿದೆ.

ಡಾ ಮುರಳೀಧರ ಕಿರಣಕೆರೆ ಎಂಬುವರು ನಿನ್ನೆ (14/04/2023) ಪ್ರಜಾವಾಣಿಯಲ್ಲಿ “ನಂದಿನಿ: ಕಂಟಕಕ್ಕೆ ಕಾರಣ ಬೇರೆ” ಎಂದು ಬರೆಯುತ್ತಾ ಪರಿಸ್ಥಿತಿಗೆ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಅವರು ಹೇಳಿರುವಂತೆ ಚರ್ಮಗಂಟು ರೋಗದಿಂದ ಬಳಲಿರುವ ಜಾನುವಾರುಗಳು, ಬೇಸಿಗೆಯ ಝಳ, ಮೇವಿನ ಕೊರತೆ, ದುಬಾರಿ ಹಿಂಡಿ/ಬೂಸಾ – ಇತ್ಯಾದಿ ಅಂಶಗಳು ನಂದಿನಿಯ ಹಾಲಿನ ಉತ್ಪಾದನೆಯನ್ನು ಕುಂಠಿತಗೊಳಿಸಿರುವುದು ನಿಜವೆಂದು ಒಪ್ಪಬಹುದು.    ಆದರೆ, ಅಮುಲ್ ನ ಹಾಲಿನ ಬೆಲೆ ನಂದಿನಿಗಿಂತ ಲೀಟರ್ ಗೆ 14 ರೂಪಾಯಿ ಹೆಚ್ಚಾಗಿದೆ ಎನ್ನುವ ಒಂದೇ ಕಾರಣ ಒಡ್ಡಿ, ಒಕ್ಕೂಟ ವ್ಯವಸ್ಥೆಯಲ್ಲಿ ಅಮುಲ್ ಕರ್ನಾಟಕದಲ್ಲಿ ತಾಜಾ ಹಾಲನ್ನು ಆನ್ ಲೈನ್ ಮಾರಾಟಕ್ಕೆ ಅವಕಾಶ ಕೊಡುವುದು ದೂರದೃಷ್ಟಿ ಹೀನ ನಡೆಯಾಗುತ್ತದೆ.  ಡಾ ಕಿರಣಕೆರೆ ಅವರು ಅಕ್ಕರೆಯಿಂದ ಸಹೋದರರೆಂದು ಕರೆದಿರುವ ಅಮುಲ್ ಡೈರಿಯ ಆಡಳಿತದ ಮುಖ್ಯಸ್ಥರು ಕೆಲ ದಿನಗಳ ಹಿಂದೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಕೊಟ್ಟಿರುವ ಸಂದರ್ಶನವನ್ನು ಎಲ್ಲರೂ ಗಮನಿಸಬೇಕಾಗಿದೆ.  “ನಂದಿನಿಯ ಜಿಡ್ಡು ಇರುವ ತಾಜಾ ಹಾಲು ಅಮುಲ್ ನ ಜಿಡ್ಡು ತೆಗೆದ ತಾಜಾಹಾಲಿಗಿಂತಲೂ ಬಹಳ ಅಗ್ಗವಾಗಿರುವ ಕಾರಣ ಅಮುಲ್ ಮತ್ತು ನಂದಿನಿಯ ನಡುವೆ ಸ್ಪರ್ಧೆ ಇಲ್ಲ” ಎಂಬುದು ಅಮುಲ್ ನ ಸಮ್ಜಾಯಶಿ. ಆದರೆ, ಅದೇ ಸಂದರ್ಶನದಲ್ಲಿ ಅವರು “ಮುಂದಿನ ಹತ್ತು ವರ್ಷಗಳವರೆಗೂ ಸ್ಪರ್ಧೆ ಏರ್ಪಡುವುದು ಕಷ್ಟ” ಎಂದಿದ್ದಾರೆ.  ಆ ಮಾತಿನ ಮರ್ಮವನ್ನು ಅರಿಯಬೇಕಿದೆ. 

ನಂದಿನಿಗೆ ಹಾಲನ್ನು ಪೂರೈಸುತ್ತಿರುವ ರೈತರಿಗೆ ಇನ್ನೂ ಹೆಚ್ಚಿನ ವರಮಾನ ಸಿಗಬೇಕೆಂದು ಡಾ ಕಿರಣಕೆರೆ ಮತ್ತು ಅವರಂತೆ ಅಮುಲ್ ನ ತವರು ರಾಜ್ಯವನ್ನು ಸಹೋದರನೆಂದು ಕರೆಯುವ ಎಲ್ಲರೂ ಬಯಸುತ್ತಾರೆ ಎಂಬುದು ನನ್ನ ನಂಬುಗೆ.  ಅಗ್ಗ ಎಂದರೆ ಹಳಗನ್ನಡದಲ್ಲಿ ಶ್ರೇಷ್ಠ ಎಂದೂ ಅರ್ಥವಿದೆ. ನಂದಿಯ ಹಾಲು ಈ ಹಳಗನ್ನಡದ ಅರ್ಥದಲ್ಲಿ ಅಗ್ಗವಾಗಿ ಉಳಿಯುವುದು ಒಳಿತು. ನಂದಿನಿ ಮತ್ತು ಅಮುಲ್ ನಡುವಣ ದರ ವ್ಯತ್ಯಾಸ ಇಂದಿರುವಂತೆಯೇ ಮುಂದಿನ ಹತ್ತು ವರ್ಷಗಳೂ ಇರುತ್ತದೆ ಎಂದು ಯಾರೂ ಹೇಳಲಾರರು.  ಕರ್ನಾಟಕದಲ್ಲಿ ಅನೇಕ ಹೊರ ರಾಜ್ಯದ ಡೈರಿಯ ತಾಜಾ ಹಾಲು ಸಿಗುತ್ತಲೇ ಇದೆ.  ದರವೂ ನಂದಿನಿಗೆ ಸಮನಾಗೇ ಇದೆ.  ಸ್ಪರ್ಧೆಯ ಮಾತು ಬಂದಿರಲಿಲ್ಲ.  ಆದರೆ, ಆ ಎಲ್ಲಾ ಹೊರ ರಾಜ್ಯದ ಡೈರಿಗಳೂ ಅಮುಲ್ ನಂತೆ ಹಣಬಲವನ್ನಾಗಲೀ, ರಾಜಕೀಯ ಬಲವನ್ನಾಗಲೀ ಹೊಂದಿಲ್ಲ ಎಂಬುದನ್ನು ಸಾರ್ವಜನಿಕರು ಗಮನಿಸಬೇಕು.  ತನಗಿಂತ ಬಲದಲ್ಲಿ ಕಡಿಮೆ ಇರುವವರನ್ನು ಸಾಮಂತರಂತೆ ಸಲಹುವುದು ಸಾಮ್ರಾಟರಿಗೆ ಸಾಧ್ಯ.  ಅಮುಲ್ ಮತ್ತು ನಂದಿನಿ ಸಮಾನ ಶಕ್ತರು ಮತ್ತು ಸಮಾನ ಆಸಕ್ತರು.  ಹಾಗಿರುವಾಗ, ಒಬ್ಬರ ಜಾಗದಲ್ಲಿ ಇನ್ನೊಬ್ಬರು ನುಸುಳುವ ಪ್ರಯತ್ನ ಮುಂದೆ ಇಬ್ಬರಿಗೂ ಮುಳುವಾಗುತ್ತದೆ.  ಅಮುಲ್ ನ ದೃಷ್ಟಿ ಮುಂದಿನ 20 ವರ್ಷಗಳ ಮಾರುಕಟ್ಟೆ ವಿಸ್ತರಣೆಯನ್ನು ಒಳಗೊಂಡಿದೆ.  ಲಾಭದಾಯಕ ಬೆಂಗಳೂರಿಗೆ ಆನ್ಲೈನ್ ಗಾಳ ಹಾಕುವ ಮೂಲಕ ತಮ್ಮ ಮಹತ್ವಾಕಾಂಕ್ಷಿ ಸಾಮ್ರಾಜ್ಯ ವಿಸ್ತಾರಕ್ಕೆ ಅಮುಲ್ ಡೈರಿಯವರು ಅಡಿಗಲ್ಲು ಹಾಕಿದ್ದಾರೆ.  ಕರ್ನಾಟಕವು ಎಚ್ಚರದಿಂದ ನಂದಿನಿಯನ್ನು ಸಲಹದಿದ್ದರೆ ಪರಿತಪಿಸಬೇಕಾಗುತ್ತದೆ.  ಒಕ್ಕೂಟ ವ್ಯವಸ್ಥೆಯ ಎಲ್ಲಾ ಮೌಲ್ಯಗಳನ್ನು ಗಾಳಿಗೆ ತೂರುತ್ತಿರುವ ಮತ್ತು ನೆಲದ ಉಸಿರಿನ ಧ್ವನಿಯನ್ನು ಕೇಳಿಸಿಕೊಳ್ಳದ ವಿಲಕ್ಷಣ ಕಾಲಘಟ್ಟದಲ್ಲಿ ನಾವಿದ್ದೇವೆ.  ಕಿರಣಕೆರೆ ಅವರು ಹೇಳಿರುವ ಎಲ್ಲಾ ಸವಲತ್ತುಗಳನ್ನು** ನಂದಿನಿಯ ರೈತರಿಗೆ ಒದಗಿಸುವುದರ ಜೊತೆಗೆ ಕರ್ನಾಟಕದ ಮಾರುಕಟ್ಟೆಯನ್ನು ಮುಕ್ತ ಮಾರುಕಟ್ಟೆಯ ಹೆಸರಿನಲ್ಲಿ ಹರಾಜು ಹಾಕುವುದಕ್ಕೂ ಕಡಿವಾಣ ಹಾಕಿದಾಗ ಮಾತ್ರ ನಂದಿನಿಯ ಸ್ವಾಭಿಮಾನ ಮತ್ತು ಸಾಮರ್ಥ್ಯಕ್ಕೆ ಇಂಬು ಕೊಟ್ಟಂತಾಗುತ್ತದೆ.

** “ನಂದಿನಿ ಉತ್ಪನ್ನಗಳ ಮಾರುಕಟ್ಟೆ ಪಾಲಿನ ಕುಸಿತವನ್ನು ತಡೆಯಬೇಕಿದ್ದರೆ ಲಭ್ಯತೆ ಖಾತರಿಪಡಿಸಬೇಕು. ಉತ್ಪಾದನೆಯನ್ನು ಹೆಚ್ಚಿಸಲು ಉತ್ತೇಜಕ ಕ್ರಮ ಕೈಗೊಳ್ಳುವುದು ಈಗಿನ ತುರ್ತು. ಹಾಲಿನ ಉತ್ಪಾದನಾ ವೆಚ್ಚ ಕಡಿತಗೊಳಿಸಲು ಸರ್ಕಾರವೇ ಎಲ್ಲ ಜಿಲ್ಲೆಗಳಲ್ಲೂ ಪಶುಆಹಾರ ಘಟಕಗಳನ್ನು ಸ್ಥಾಪಿಸಿ ಈಗಿನ ಅರ್ಧ ಬೆಲೆಗಾದರೂ ಹಿಂಡಿ ಸಿಗುವಂತೆ ಮಾಡಬೇಕು. ಲಭ್ಯವಿರುವ ಜಾಗದಲ್ಲೆಲ್ಲಾ ಮೇವಿನ ಬೆಳೆಗಳನ್ನು ಬೆಳೆಯಲು ಮೇವಿನ ಬೀಜ, ಸಸಿಗಳ ವಿತರಣೆಗೆ ಆದ್ಯತೆ ನೀಡಬೇಕು. ಗ್ರಾಹಕರಿಗೂ ಹೊರೆಯಾಗದೆ ಉತ್ಪಾದಕ ರೈತರಿಗೂ ನ್ಯಾಯೋಚಿತ ಉತ್ತಮ ಬೆಲೆ ಸಿಗುವಂತಹ ಕಾರ್ಯಸಾಧು ಯೋಜನೆಯನ್ನು ಸರ್ಕಾರ ರೂಪಿಸಬೇಕು. ಹಾಲು ಒಕ್ಕೂಟಗಳೂ ತಮ್ಮ ಆಡಳಿತಾತ್ಮಕ ವೆಚ್ಚವನ್ನು ಕಡಿಮೆಗೊಳಿಸಿ ಲಾಭವನ್ನು ಉತ್ಪಾದಕರಿಗೆ ವರ್ಗಾಯಿಸಬೇಕಿದೆ” – ಡಾ ಮುರಳೀಧರ ಕಿರಣಕೆರೆ (14/04/2023) ಪ್ರಜಾವಾಣಿ – “ನಂದಿನಿ: ಕಂಟಕಕ್ಕೆ ಕಾರಣ ಬೇರೆ”.

ಶಾಂತವೇರಿ ಗೋಪಾಲ ಗೌಡ – ಒಂದು ಪರಿಚಯ

ಕರ್ನಾಟಕ ಕಂಡ ಅಪರೂಪದ ಮೇರು ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಶಾಂತವೇರಿ ಗೋಪಾಲ ಗೌಡರ ಜನ್ಮ ಶತಮಾನೋತ್ಸವ ವರ್ಷ ಇದು (2022). ಅವರ ಬಗ್ಗೆ ಅಂತರ್ಜಾಲ ತಾಣಗಳಲ್ಲಿ ಸರಿಯಾದ ಮಾಹಿತಿ ಎಲ್ಲೂ ಇಲ್ಲ. ಅವರನ್ನು ಎಲ್ಲರೂ ಮರೆತಿದ್ದಾರೆ ಎನ್ನುವುದಕ್ಕೆ ಅದೂ ಒಂದು ಸಾಕ್ಷಿ ಎನ್ನಬಹುದು. ಕರ್ನಾಟಕದ ಸಾಮಾಜಿಕ, ಸಾಹಿತ್ಯ ಮತ್ತು ರಾಜಕೀಯ ಸನ್ನಿವೇಶಗಳ ಅಧ್ಯಯನ ಮಾಡುತ್ತಿರುವ ಅಧ್ಯಾಪಕರಾದ ಚಂದನ ಗೌಡ ಅವರು ಕಳೆದ ತಿಂಗಳು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಶಾಂತವೇರಿ ಗೋಪಾಲ ಗೌಡರ ಬಗ್ಗೆ ಒಂದು ಕಿರು ಪರಿಚಯ ಬರಹವನ್ನು ಬರೆದು ಬಹಳ ಉಪಕಾರ ಮಾಡಿದ್ದರು. ಅದನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿ ಇಲ್ಲಿ ಪ್ರಕಟಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣಕ್ಕೆ ಯಾರು ಮಾದರಿ ಎಂದು ಕೇಳಿದರೆ ಇಲ್ಲಿನ ಮಣ್ಣಿನ ವಾಸನೆ ಅರಿಯದ ಯಾರ್ಯಾರದೋ ಹೆಸರನ್ನು ಹೇಳುವವರ ಸಂಖ್ಯೆ ಹೆಚ್ಚಾಗಿ ಕರ್ನಾಟಕದ ಸ್ವಂತಿಕೆಯ ಬೇರಿಗೆ ಕೊಡಲಿ ಬೀಳುತ್ತಿದೆ. ಇಂಥ ದುರ್ಭಿಕ್ಷ ಕಾಲದಲ್ಲಿ ಗೋಪಾಲ ಗೌಡರ ಬಗ್ಗೆ ಕನ್ನಡಿಗರು ತಿಳಿದುಕೊಳ್ಳಬೇಕಾದ ಅಗತ್ಯವಿದೆ.

1923 ರಲ್ಲಿ ತೀರ್ಥಹಳ್ಳಿ ಸಮೀಪದ ಶಾಂತವೇರಿ ಎಂಬ ಹಳ್ಳಿಯಲ್ಲಿ ಬಡ ಕೃಷಿಕ ಕುಟುಂಬದಲ್ಲಿ ಜನಿಸಿದ ಗೋಪಾಲ ಗೌಡ ಅವರು ಪ್ರೌಢಶಾಲಾ ದಿನಗಳಲ್ಲಿ ಬ್ರಿಟಿಷರ ದಬ್ಬಾಳಿಕೆಯಲ್ಲಿದ್ದ ಭಾರತದ ಬಿಡುಗಡೆಗಾಗಿ ನಡೆಯುತ್ತಿದ್ದ ಚಳುವಳಿಗಳಿಂದ ಪ್ರೇರಿತರಾದರು. ತಮ್ಮ ಶಾಲಾ ಗೆಳೆಯರೊಂದಿಗೆ ಅಂಚೆ ಪೆಟ್ಟಿಗೆಗಳನ್ನು ಕೆಳಗೆ ಎಳೆದು ಟೆಲಿಗ್ರಾಫ್ ತಂತಿಗಳನ್ನು ಕತ್ತರಿಸುತ್ತಿದ್ದರು. ಗೋಪಾಲ ಗೌಡರಿಗೆ ಹತ್ತನೇ ತರಗತಿಯ ನಂತರ ತಮ್ಮ ಶಾಲಾ ಶಿಕ್ಷಣವನ್ನು ಮುಂದುವರಿಸಲಾಗಲಿಲ್ಲ. ಬೀಡಿ ಕಟ್ಟುವುದು, ಸ್ಥಳೀಯ ಮಾಧ್ಯಮಿಕ ಶಾಲೆಯಲ್ಲಿ ಕಲಿಸುವುದು ಮತ್ತು ನಂತರ ತೀರ್ಥಹಳ್ಳಿಯ ಒಕ್ಕಲಿಗ ವಿದ್ಯಾರ್ಥಿ ನಿಲಯವನ್ನು ನಿರ್ವಹಿಸುವುದು ಸೇರಿದಂತೆ ವಿವಿಧ ಕೆಲಸಗಳಲ್ಲಿ ಕೆಲಸ ಮಾಡಿದ ನಂತರ ಅವರು ವಿದ್ಯಾರ್ಥಿ ಕಾಂಗ್ರೆಸ್‌ಗೆ ಸೇರಿದರು. 1942 ರ ಭಾರತ ಬಿಟ್ಟು ತೊಲಗಿ ಚಳವಳಿಯ ಸಂದರ್ಭದಲ್ಲಿ (ಟೆಲಿಗ್ರಾಫ್ ತಂತಿ ಕತ್ತರಿಸುವಂತಹ ಚಟುವಟಿಕೆಗಳ ಕಾರಣ) ಹಲವಾರು ತಿಂಗಳುಗಳ ಕಾಲ ಶಿವಮೊಗ್ಗದ ಕಾರಾಗೃಹದಲ್ಲಿ ಬಂದಿಯಾಗಿದ್ದರು. ಅವರೊಂದಿಗೆ ಸೆರೆಯಲ್ಲಿದ್ದ ಇತರ ಕೈದಿಗಳ ಮೂಲಕ ಅವರಿಗೆ ಮಾರ್ಕ್ಸ್, ಗಾಂಧಿ ಮತ್ತು ಟ್ರಾಟ್ಸ್ಕಿ ಮುಂತಾದವರ ವಿಚಾರಗಳ ಪರಿಚಯವಾಯಿತು. ಜೈಲಿನಲ್ಲಿದ್ದಾಗ ಅವರು ಜವಾಹರ ಲಾಲ ನೆಹರೂ ಅವರ ದಿ ಡಿಸ್ಕವರಿ ಆಫ್ ಇಂಡಿಯಾ (ಭಾರತದ ಆವಿಷ್ಕಾರ) ಮತ್ತು ಮಿನೂ ಮಸಾನಿಯವರ ಸೋಷಿಯಲಿಸಂ ರೀಕನ್ಸಿಡರ್ಡ್ (ಸಮಾಜವಾದದ ಮರು ಪರಿಶೀಲನೆ) ಮುಂತಾದ ಪುಸ್ತಕಗಳನ್ನೂ ಗಮನಿಸಿದ್ದರು. ಸೆರೆವಾಸವು ಅವರಿಗೆ “ವಿಶ್ವವಿದ್ಯಾನಿಲಯ”ದಂತೆ ಆಗಿ ಅವರ ರಾಜಕೀಯ ದಾರಿಯನ್ನು ಗುರುತಿಸಲು ಅನುವು ಮಾಡಿತೆಂದು ಅವರೇ ಹೇಳಿಕೊಂಡಿದ್ದರು. ನಂತರ ಅವರಿಗೆ ರಾಮಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯರಂತಹ ಸಮಾಜವಾದಿಗಳನ್ನು ಭೇಟಿಯಾಗುವ ಅವಕಾಶವೂ ದೊರೆಯಿತು. ಸಾತಂತ್ರ್ಯ ಬಂದ ಹೊಸದರಲ್ಲಿಯೇ (1948) ಸಮಾಜವಾದಿಗಳು ಕಾಂಗ್ರೆಸ್ ಒಕ್ಕೂಟವನ್ನು ತೊರೆದಾಗ, ಗೋಪಾಲ ಗೌಡರು ಸಮಾಜವಾದಿ ಪಂಥಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

1951 ರ ಬೇಸಗೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗೋಡು ಎಂಬ ಹಳ್ಳಿಯಲ್ಲಿ ಭೂರಹಿತ ಹಿಡುವಳಿದಾರರು ತಮ್ಮ ಜಮೀನುದಾರರ ವಿರುದ್ಧ ಹಿಡುವಳಿ ನಿಯಮಗಳ ವಿರುದ್ಧ ಪ್ರತಿಭಟಿಸಿದರು. ಶಾಂತವೇರಿ ಗೋಪಾಲ ಗೌಡರಂತಹ ಸಮಾಜವಾದಿ ನಾಯಕರ ಒಳಗೊಳ್ಳುವಿಕೆ ರೈತರ ಹೋರಾಟಕ್ಕೆ ರಾಜಕೀಯ ಚೌಕಟ್ಟು ಒದಗಿಸಿತು. ಕಾಗೋಡು ಸತ್ಯಾಗ್ರಹವು ಸ್ವಾತಂತ್ರ್ಯ ಬಂದ ನಂತರದ ಕರ್ನಾಟಕ ಕಂಡ ಮೊದಲ ರೈತ ಪ್ರತಿಭಟನೆ ಎಂದು ಗೌರವಿಸಲ್ಪಟ್ಟಿದೆ. ಈ ಸತ್ಯಾಗ್ರಹ ನಡೆದು 15 ವರ್ಷಗಳ ನಂತರ ಬರೆದ ಪ್ರಬಂಧದಲ್ಲಿ ಗೋಪಾಲ ಗೌಡರು ಆ ಪ್ರಸಂಗದ ನೆನಪುಗಳು ದಿನಕಳೆದಷ್ಟೂ ಇನ್ನೂ ಹೊಸತೆಂಬಂತೆ ಅನಿಸುತ್ತಿದೆ ಎಂದು ಬರೆದಿದ್ದರು.

ಸ್ವಾತಂತ್ರ್ಯ ಬಂದ ನಂತರ ನಡೆದ ಮೊದಲ ವಿಧಾನ ಸಭೆ ಚುನಾವಣೆಯಲ್ಲಿ ಸಾಗರ-ಹೊಸನಗರದಿಂದ (1952) ಮತ್ತು ನಂತರ ಎರಡು ಬಾರಿ ತೀರ್ಥಹಳ್ಳಿಯಿಂದ (1962 ಮತ್ತು 1967) ಗೋಪಾಲ ಗೌಡರು ಆಯ್ಕೆಯಾದರು. ಯಾವಾಗಲೂ ಸಾಮಾನ್ಯರಿಂದ ಎರವಲು ಪಡೆದ ಸಾಧಾರಣ ಸಂಪನ್ಮೂಲಗಳೊಂದಿಗೆ ನಡೆಸಲ್ಪಡುತ್ತಿದ್ದ ಅವರ ಚುನಾವಣಾ ಪ್ರಚಾರದ ವೈಖರಿಗೆ, ಅವರ ಧೈರ್ಯ ಮತ್ತು ವರ್ಚಸ್ಸಿಗೆ ಅಪಾರ ಸ್ಥಳೀಯ ಮೆಚ್ಚುಗೆ ಇತ್ತು ಮತ್ತು ತಮ್ಮ ಜಾತಿಯ ಮತ್ತು ಇತರ ಸಾಮಾಜಿಕ ಕಟ್ಟಳೆಗಳನ್ನೂ ಮೀರಿ ಜನ ಅವರನ್ನು ಬೆಂಬಲಿಸಿ ಗೆಲ್ಲಿಸಿದ್ದರು. ಕರ್ನಾಟಕ ವಿಧಾನಸಭೆಯಲ್ಲಿ ಗೋಪಾಲ ಗೌಡರು ಮಾಡಿದ್ದ ಭಾಷಣಗಳ ಗಂಭೀರ ಮತ್ತು ಭಾವಾವೇಶ ಸ್ವರೂಪವನ್ನು ಗಮನಿಸಿದರೆ ವಿರೋಧ ಪಕ್ಷದ ನಾಯಕರೊಬ್ಬರು ಮಾಡಿದ ಅತ್ಯುನ್ನತ ಮಟ್ಟದ ವಾದವಾಗಿ ಅವು ಎದ್ದು ಕಾಣುತ್ತವೆ. ಭೂಸುಧಾರಣೆಯ ಅವಶ್ಯಕತೆ, ದಲಿತರು ಮತ್ತು ಹಿಂದುಳಿದ ಜಾತಿಗಳ ಕಲ್ಯಾಣ, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳ ಸುಧಾರಣೆ, ವಿಕೇಂದ್ರೀಕೃತ ಆಡಳಿತದ ಅಗತ್ಯ ಮತ್ತು ರಾಜ್ಯ ಆಡಳಿತದ ಭಾಷೆಯಾಗಿ ಕನ್ನಡವನ್ನು ಸ್ಥಾಪಿಸುವುದು ಅವರ ನೆಲಕ್ಕಂಟಿದ ಸಮಾಜವಾದದ ಆಶಯಗಳೇ ಆಗಿದ್ದುವು. ಉಳುವವರಿಗೇ ಭೂಮಾಲೀಕತ್ವ ಸಿಗಬೇಕು ಎನ್ನುವುದನ್ನು ನೋಡುವ ಆಸೆ ಹೊತ್ತಿದ್ದ ಗೋಪಾಲ ಗೌಡರ ಪ್ರಾಮಾಣಿಕ ಪ್ರಯತ್ನಗಳು ಅಂದಿನ ರಾಜ್ಯ ಕಂದಾಯ ಸಚಿವ ಕಡಿದಾಳ್ ಮಂಜಪ್ಪ ಮತ್ತು ಮುಖ್ಯಮಂತ್ರಿ ದೇವರಾಜ್ ಅರಸ್ ಅವರ ನಂತರದ ಭೂಸುಧಾರಣಾ ಕ್ರಮಗಳ ಮೇಲೆ ಸ್ಪಷ್ಟ ಪ್ರಭಾವ ಬೀರಿತು. ಗೋಪಾಲ ಗೌಡರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ ಎಚ್ ಪಟೇಲ್ ಅವರ ಮಾರ್ಗದರ್ಶಕರಾಗಿದ್ದಷ್ಟೇ ಅಲ್ಲದೆ ಕಡಿದಾಳ್ ಶಾಮಣ್ಣ ಅವರಂತಹ ರೈತ ಚಳವಳಿಯ ನಾಯಕರನ್ನು ಪ್ರೇರೇಪಿಸಿದರು. ಕನ್ನಡ ಸಾಹಿತ್ಯದಲ್ಲಿ ಪ್ರಗತಿಶೀಲ ಮತ್ತು ಬಂಡಾಯ ಲೇಖಕರಲ್ಲಿ ಮುಖ್ಯರಾದ ಯು ಆರ್ ಅನಂತಮೂರ್ತಿ, ಪಿ ಲಂಕೇಶ್ ಮತ್ತು ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಸೃಜನಶೀಲ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿದ ಲೋಹಿಯಾ ಚಳವಳಿಯ ಕರ್ನಾಟಕದ ಅಂಗವಾಗಿದ್ದರು. ಯು ಆರ್ ಅನಂತಮೂರ್ತಿಯವರ ಕಾದಂಬರಿ ಅವಸ್ಥೆ (1978) ಯ ನಾಯಕನ ಪಾತ್ರವು ಗೋಪಾಲ ಗೌಡರೇ ಆಗಿದ್ದು ಅದು ನಂತರ ಅದು ಅನಂತ್ ನಾಗ್ ಅವರ ಅಭಿನಯದ ಚಲನಚಿತ್ರವಾಗಿಯೂ ತೆರೆಕಂಡಿತು.

ಆಗಿನ ಕಾಲಕ್ಕೆ ಬಹಳ ತಡವಾಗಿ ಆರಂಭವಾಗಿದ್ದ ಅವರ ವೈವಾಹಿಕ ಜೀವನ (ಪತ್ನಿ ಸೋನಕ್ಕ) ದಿಂದ ಅವರಿಗೆ ಇಬ್ಬರು ಮಕ್ಕಳಾದರು. ಗೋಪಾಲ ಗೌಡರು 1972 ರಲ್ಲಿ ತಮ್ಮ 49ನೇ ವಯಸ್ಸಿನಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ನಿಧನರಾದರು. ಅವರ ನಿಷ್ಠುರತೆ, ಉತ್ತಮ ಮಾತುಗಾರಿಕೆ, ಕಠಿಣ ಮತ್ತು ಸರಳ ಜೀವನಶೈಲಿ, ಆಳಚಿಂತನಾ ಶಕ್ತಿ, ಗಟ್ಟಿಯಾದ ಬೇರುಗಳು, ವಿಶ್ವ ರಾಜಕೀಯದಲ್ಲಿ ಅವರ ಆಸಕ್ತಿ, ಸಾಹಿತ್ಯ ಮತ್ತು ಸಂಗೀತದ ಮೇಲಿನ ಅವರ ಅಚಲ ಪ್ರೀತಿ, ಸಂಭಾಷಣೆಯ ಪ್ರೀತಿ, ಎಲ್ಲವನ್ನೂ ಅವರ ಸಮಕಾಲೀನರು ಹೇರಳವಾಗಿ ದಾಖಲಿಸಿದ್ದಾರೆ . ಈ ಗುಣಗಳು ಗೋಪಾಲ ಗೌಡರನ್ನು ಕರ್ನಾಟಕದ ಅತ್ಯಂತ ವಿಶಿಷ್ಟ ರಾಜಕೀಯ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡಿತ್ತು. “ದಡ ಹತ್ತದೇ ಇರೋರಿಗಾಗಿ ನಾನು ರಾಜಕೀಯ ಮಾಡಲು ಬಯಸುತ್ತೇನೆ” ಎಂದು ಹೇಳಿದ್ದ ಮತ್ತು ಹಾಗೆಯೇ ನಡೆದ ಗೋಪಾಲ ಗೌಡರ ಶ್ರೀಮಂತ ರಾಜಕೀಯ ಪರಂಪರೆಯನ್ನು ನೆನಪಿಸಿಕೊಂಡು ಮತ್ತು ಅದನ್ನು ಪುನರುಜ್ಜೀವನಗೊಳಿಸಲು ಗೋಪಾಲ ಗೌಡ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಪ್ರಯತ್ನಿಸೋಣ.

ಚೊಚ್ಚಲ ಬಾಣಂತನವು ಎಲ್ಲಿ ನಡೆಯಬೇಕು?

ಬಾಣಂತನವು ತವರು ಮನೆಯಲ್ಲೇ ನಡೆಯಬೇಕೆಂಬ ಒತ್ತಾಯಪೂರ್ವಕ ಹಟವು ತಂದೊಡ್ಡುತ್ತಿರುವ ಅಪಾಯಗಳನ್ನು ಹೇಳುತ್ತಾ “ಬಾಣಂತಿ ಮತ್ತು ಮಗುವಿನ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯಕೀಯ ಸೌಲಭ್ಯಗಳು ಎಲ್ಲಿರುತ್ತವೋ ಅಲ್ಲೇ ಅವರೂ ಇರಬೇಕು” ಎಂದು ಬಹಳ ಪರಿಣಾಮಕಾರಿಯಾಗಿ ಹೇಳುವ ಅಂಕಣ ಬರಹವೊಂದು ಮೊನ್ನೆ ಪ್ರಜಾವಾಣಿಯಲ್ಲಿ ಬಂದಿತ್ತು (ಸಂಗತ – “ಸೌಖ್ಯಕ್ಕೆ ತೊಡಕಾಗದಿರಲಿ ಸಂಪ್ರದಾಯ” 10-06-2022– ಎಚ್ ಕೆ ಶರತ್). ಹಾಗೆ ತಮ್ಮ ವಾದವನ್ನು ಸಮರ್ಥನೆಮಾಡಿಕೊಳ್ಳುವಾಗ ಲೇಖಕರು ಕೊಟ್ಟಿರುವುವೆಲ್ಲವೂ ವಿಶೇಷ ಸಂದರ್ಭದ ಉದಾಹರಣೆಗಳೇ ಆಗಿರುವುದನ್ನು ಗಮನಿಸಬೇಕು.  ಸಂಪ್ರದಾಯದ ಹೆಸರಿನಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಪಣಕ್ಕಿಡುವುದನ್ನು ಯಾರೂ ಬಯಸುವುದಿಲ್ಲ.  ಮದುವೆಯಾದ ಹೆಣ್ಣು ಮಗಳಿಗೆ ದುರದೃಷ್ಟವಶಾತ್ ತಾಯಿ ಬದುಕಿಲ್ಲ ಎನ್ನುವುದಾದರೆ ಅಥವಾ ಇದ್ದರೂ ಅವರೇ ದೈಹಿಕವಾಗಿ ಅಷ್ಟು ಶಕ್ತರಾಗಿಲ್ಲ ಎನ್ನುವಂಥ ಸಂದರ್ಭಗಳಲ್ಲಿ ಬಲವಂತವಾಗಿ ತವರು ಮನೆಯಲ್ಲೇ ಬಾಣಂತನ ನಡೆಯಬೇಕು ಎನ್ನುವುದನ್ನು ಮನುಷ್ಯತ್ವ ಇರುವ ಯಾರೂ ಒಪ್ಪುವುದಿಲ್ಲ. ಒತ್ತಾಯ ಮಾಡುವುದು ಅಪರಾಧವೂ ಆದೀತು. ಆದರೆ, ಇಂತಹ ಸಂದರ್ಭಗಳನ್ನು ಹೊರತು ಪಡಿಸಿ ಚೊಚ್ಚಲ ಬಾಣಂತಿಯ (ಎರಡನೇ ಮಗುವಿಗೆ ಜನ್ಮ ನೀಡುವ ಅನುಭವಿ ತಾಯಿಯ ವಿಚಾರ ಬೇರೆ) ತವರು ಮನೆಯಲ್ಲಿ ಕನಿಷ್ಟ ಅನುಕೂಲಗಳ ಕೊರತೆ ಇದ್ದಲ್ಲಿ, ಸಾಧ್ಯವಾದಷ್ಟೂ ಮಟ್ಟಿಗೆ  ತನ್ನ ತಾಯಿಯ ಒಡನಾಟ ಬಾಣಂತಿಗೆ ದೊರಕುವಂತೆ ಮತ್ತು ಅಗತ್ಯವಿದ್ದಲ್ಲಿ ಆರ್ಥಿಕ ಒತ್ತಾಸೆ ಕೊಡಬೇಕಾದ್ದು ಗಂಡನ ಮನೆಯವರ ಕರ್ತವ್ಯವೇ ಆಗಿರುತ್ತದೆ. ಮಗು ಹುಟ್ಟುವುದಕ್ಕೆ ಮುಂಚೆ ಬಸುರಿಯ ಆರೋಗ್ಯವು ಅಸಹಜ ಏರಿಳಿತಗಳನ್ನು ತೋರಿದ್ದೇ ಆದಲ್ಲಿ, ಅಥವಾ ಹೆರಿಗೆಯ ಸಮಯದಲ್ಲಿ ಹೆಚ್ಚಿನ ವೈದ್ಯಕೀಯ ನೆರವು ಬೇಕಾಗಬಹುದು ಎನ್ನುವ ಅನುಮಾನವನ್ನು ವೈದ್ಯರು ವ್ಯಕ್ತಪಡಿಸಿದ ಸಂದರ್ಭಗಳಲ್ಲಿ ಬಸುರಿ, ಬಾಣಂತಿಯ ಆರೈಕೆಯು ಮಾದರಿ ಆರೋಗ್ಯ ಸೌಲಭ್ಯಗಳು ಇರುವಲ್ಲಿಯೇ ಕಡ್ಡಾಯವಾಗಿ ಆಗಬೇಕಾಗುತ್ತದೆ. ಆದರೆ ಸಹಜ ಹೆರಿಗೆಯ ಅಥವಾ ಬಿಕ್ಕಟ್ಟು ಇರದ ಸಿಸೇರಿಯನ್ ಮೂಲಕ ಆರೋಗ್ಯವಂತ ಮಗುವನ್ನು ಹಡೆದ, ದೈಹಿಕವಾಗಿ ಯಾವ ದೊಡ್ಡ ತೊಂದರೆಗಳೂ ಇಲ್ಲದ ಚೊಚ್ಚಲ ಬಾಣಂತಿಗೆ ಅವಳ ತವರು ಮನೆ ಎಲ್ಲೇ ಇದ್ದರೂ ಅದೇ ಸೂಕ್ತವಾದ ಆರೈಕೆಯ ತಾಣ ಎಂಬುದನ್ನು ಒಪ್ಪಬೇಕಾಗುತ್ತದೆ. ಇವು ಯಾವುದೋ ಆದರ್ಶದ ಮಾತುಗಳಾಗಿರದೆ ಭಾರತದ ಇಂದಿನ ಆರೋಗ್ಯ ವ್ಯವಸ್ಥೆಯನ್ನೂ ಪರಿಗಣಿಸಿ ಹೇಳುತ್ತಿರುವುದಾಗಿದೆ. 

ಮದುವೆಯಾದ ಹೆಣ್ಣು ಮಗಳು ತನ್ನ ಗಂಡನ ಮನೆಗೆ ಹೋಗಿ ನೆಲೆಸುವುದು ಅನಾದಿಯಿಂದಲೂ ರೂಢಿಯಲ್ಲಿದೆ. ಅದರ ತಪ್ಪು ಒಪ್ಪುಗಳನ್ನು ಚರ್ಚಿಸುವುದರ ಬದಲಿಗೆ “ನಮ್ಮ ವ್ಯವಸ್ಥೆ  ಹೀಗಿದೆ. ಅದರಲ್ಲಿ ಸುಧಾರಣೆಯ ಆವಶ್ಯಕತೆಯೂ ಇದೆ. ಈಗ ಇರುವ ವ್ಯವಸ್ಥೆಯಲ್ಲಿ ಯಾವ ನಡವಳಿಕೆಯು ಸೂಕ್ತ” ಎಂದು ಯೋಚಿಸಿದರೆ ಗೋಜಲಂತೆ ಕಾಣುವ ಸಮಸ್ಯೆಗಳು ಘೋರವೆನಿಸುವುದಿಲ್ಲ. ಮೊದಲ ಬಾಣಂತನವು ತವರು ಮನೆಯಲ್ಲಿ ನಡೆಯುವುದರ ಅನುಕೂಲಗಳೂ ಇವೆ. ಭಾರತದ ಹೆಣ್ಣುಮಕ್ಕಳು ಮದುವೆಯಾಗುವ ವಯಸ್ಸು ಸರಾಸರಿ 19.3 ವರ್ಷ ಎಂದು 2011 ರ ಜನಗಣತಿಯ ಅಂಕಿಅಂಶಗಳಿಂದ ತಿಳಿದುಬರುತ್ತದೆ.  ಈಗಿನ ಹೈಸ್ಕೂಲ್ ವರೆಗಾದರೂ ಶಾಲೆ ಓದಿರುವ ಮತ್ತು ಸಾಮಾನ್ಯ ಆರೋಗ್ಯದ ಅರಿವುಳ್ಳ ಮದುವೆಯಾದ 20 ವರ್ಷದ ಹೆಣ್ಣುಮಗಳು ತನ್ನ ಮೊದಲ ಮಗುವನ್ನು ಹಡೆಯಲು ಸರಾಸರಿ ಒಂದು ವರ್ಷವಾದರೂ ಕಾಯಬಹುದು. ಪ್ರಾಕೃತಿಕ ಕಾರಣಗಳಿಂದ ಎರಡು ವರ್ಷವೇ ಆಗುತ್ತದೆ ಎಂದು ಭಾವಿಸಿದರೂ ಚೊಚ್ಚಲ ಬಸಿರಿನಲ್ಲಿ ತಾಯಿಯ ಸರಾಸರಿ ವಯಸ್ಸು 22 ವರ್ಷ ಆಗಿರಬಹುದು. ತನ್ನ ತಂದೆ-ತಾಯಿಯರೊಂದಿಗೆ ತವರು ಮನೆಯಲ್ಲಿ 20 ವರ್ಷ ಬೆಳೆದ ಹುಡುಗಿಯು ಮದುವೆಯಾಗಿ ಎರಡು ವರ್ಷಗಳಲ್ಲಿ ತಾನು ಸೇರಿದ ಗಂಡನ ಮನೆಯಲ್ಲಿ (ಎಷ್ಟೇ ಸಂತೋಷದಿಂದ ಇದ್ದರೂ) ತವರು ಮನೆಯ ಸಲುಗೆ ಮತ್ತು ನಿಸ್ಸಂಕೋಚ ನಡವಳಿಕೆಗಳ ಮಟ್ಟಿಗೆ ಮನಸ್ಸನ್ನು ತೆರೆದುಕೊಂಡಿರುತ್ತಾಳೆ ಎಂದು ಹೇಳಲು ಆಗುವುದಿಲ್ಲ. ಬಸುರು ಮತ್ತು ಬಾಣಂತನದ ಸಮಯದಲ್ಲಿ ಹೆಣ್ಣು ಮಕ್ಕಳಲ್ಲಿ ಆಗುವ ಹಾರ್ಮೋನ್-ಸಂಬಂಧಿತ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ.  ಮನುಷ್ಯ ಪ್ರಾಣಿಯ ಬಸುರಿನ ಒಂಭತ್ತು ತಿಂಗಳುಗಳನ್ನು ಮೂರು ತಿಂಗಳ ಮೂರು ಭಾಗಗಳನ್ನಾಗಿ ಮಾಡಿ ಹೊಟ್ಟೆಯಲ್ಲಿ ಮಗುವಿನ ಬೆಳವಣಿಗೆಗಳನ್ನು ಗುರುತಿಸುವುದು ಬಹುತೇಕರಿಗೆ ತಿಳಿದಿದೆ.  ಆದರೆ, ವೈದ್ಯ ಮತ್ತು ಜೀವ ವಿಜ್ಞಾನಿಗಳು ಬರೆದ ಆರೋಗ್ಯ ಸಂಬಂಧಿ ಸಂಶೋಧನಾ ಬರಹಗಳನ್ನು ಓದಿದರೆ ಅವರು ಮನುಷ್ಯ ಬಸುರನ್ನು ಹನ್ನೆರಡು ತಿಂಗಳುಗಳು ಎಂದು ಗುರ್ತಿಸುವುದನ್ನು ಗಮನಿಸಬಹುದು.  ಮನುಷ್ಯನ ಮಗುವು ಪ್ರಾಣಿ ಪ್ರಪಂಚದಲ್ಲೇ ಅತ್ಯಂತ ಅಸಹಾಯಕನಾಗಿ/ಳಾಗಿ ಹುಟ್ಟುವ ಪ್ರಾಣಿಗಳಲ್ಲಿ ಒಂದು ಎಂಬುದು ಅದಕ್ಕೆ ಮುಖ್ಯವಾದ ಕಾರಣ. ಹುಟ್ಟಿದ ನಂತರದ ಮೊದಲ ಮೂರು ತಿಂಗಳು ಆ ಎಳೆಯ ಮಗುವು ತಾಯಿಯ ಹೊಟ್ಟೆಯಲ್ಲಿದ್ದಷ್ಟೇ ಸೂಕ್ಷ್ಮವಾಗಿ ಇರುತ್ತದೆ ಆದರೆ ತಾಯಿಯ ಹೊಟ್ಟೆಯ ರಕ್ಷಾಕವಚ ಇರುವುದಿಲ್ಲ ಅಷ್ಟೇ. ಇಂತಹ ಸಂದರ್ಭದಲ್ಲಿ ತಾಯಿಯ ಮನಸ್ಥಿತಿಯೂ ಮಗುವಿನಂತೆಯೇ ಬಹಳ ಸೂಕ್ಷ್ಮವಾಗಿರುತ್ತದೆ (ಚೊಚ್ಚಲ ಬಾಣಂತಿಯ ಬಗ್ಗೆ ಹೇಳುತ್ತಿದ್ದೇನೆ. ಎರಡನೇ ಮಗುವಿಗೆ ಜನ್ಮ ನೀಡುವ ಅನುಭವಿ ತಾಯಿಯ ವಿಚಾರ ಬೇರೆ). ಈ ಸೂಕ್ಷ್ಮ ಸ್ಥಿತಿಯಲ್ಲಿರುವ 22 ರಿಂದ 28 ವರ್ಷದ ಬಾಣಂತಿಯನ್ನು ಮತ್ತು ಎಳೆ ಮಗುವನ್ನು ಪ್ರೀತಿಯಿಂದ ಆರೈಕೆ ಮಾಡುವುದಕ್ಕೆ ಅತಿ ಹೆಚ್ಚಿನ ಅರ್ಹತೆ ಇರುವ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿರುವವರು ಅವಳ ತಾಯಿ, ಅಂದರೆ ಆ ಮಗುವಿನ ಅಜ್ಜಿ. ತನ್ನ ಮಗಳ ದೇಹ ಪ್ರಕೃತಿ ಎಂಥದ್ದು ಎಂಬುದರ ಬಗ್ಗೆ ಮಗಳಷ್ಟೇ ತಿಳಿದುಕೊಂಡಿರುವುದು ಅವಳ ತಾಯಿ.  ತನಗೆ ಏನು ಬೇಕು, ಎಷ್ಟು ಹೊತ್ತಿಗೆ ಬೇಕು, ಏನು ಬೇಡ ಎಂದು ಯೋಚಿಸುವಷ್ಟು ತ್ರಾಣ ಚೊಚ್ಚಲ ಎಳೆ ಬಾಣಂತಿಗೆ ಇರುವುದು ಕಷ್ಟ. ಗಟ್ಟಿಗಿತ್ತಿಯರು ಇರಬಹುದು. ಬಹುಪಾಲು ಬಾಣಂತಿಯರಿಗೆ ಕಷ್ಟ. ಗಂಡನ ಮನೆಯಲ್ಲಿ, ಅಥವಾ ನರ್ಸಿಂಗ್ ಹೋಮ್ ನಲ್ಲಿ ದೈಹಿಕ ಮತ್ತು ಮಾನಸಿಕ ಆಸರೆಗಳು ಸಿಗಬಹುದು. ಕೆಲವು ವಿಷಮ ಪರಿಸ್ಥಿತಿಗಳಲ್ಲಿ ಅದೊಂದೇ ದಾರಿಯೂ ಆಗಬಹುದು. ಆದರೆ ಆರೈಕೆಯ ಗುಣಮಟ್ಟದ ವಿಚಾರ ಬಂದಾಗ ಆ ಬಾಣಂತಿಯ ಗಂಡನು ಅವಳ ಅಮ್ಮನ ಸ್ಥಾನವನ್ನು ತುಂಬುವುದು ಕಷ್ಟ. 

ಹೆಣ್ಣು ಎಷ್ಟು ಓದಿದ್ದಾಳೆ ಎನ್ನುವುದು ಅವಳು ಯಾವಾಗ ಮದುವೆಯಾಗುತ್ತಾಳೆ ಮತ್ತು ಯಾವಾಗ ಮೊದಲ ಮಗುವನ್ನು ಹಡೆಯುವ ನಿರ್ಧಾರ ಮಾಡುತ್ತಾಳೆ ಎನ್ನುವುದು ಈಗಿನ ಎಲ್ಲಾ ಸಮಾಜಗಳಲ್ಲೂ ನಿಜ. ಅದು ಅವಳ ನಿರ್ಧಾರವೂ ಆಗುವುದು ಅವಳಿಗೆ ವಿದ್ಯಾಭ್ಯಾಸ ಇದ್ದಾಗ ಮಾತ್ರ ಸಾಧ್ಯ. ಮೊದಲ ಮಗುವನ್ನು ಹಡೆಯುವಾಗ ಆ ಬಸುರಿಯ ವಯಸ್ಸು ಹೆಚ್ಚಾದಂತೆ ಅವಳು ಆರ್ಥಿಕವಾಗಿ ಹೆಚ್ಚು ಸ್ವಾವಲಂಬಿಯೂ, ಮಾನಸಿಕವಾಗಿ ಹೆಚ್ಚು ಸಂತುಳಿತಳಾಗಿಯೂ ಇರಲು ಸಾಧ್ಯವಾಗುವುದೂ ನಿಜವೇ. ಆದರೆ, ಹೆಣ್ಣು ತನ್ನಿಷ್ಟ ಬಂದಾಗ ಬಸುರಾಗುತ್ತೇನೆ, ಮೊದಲ ಮಗುವನ್ನು ಹಡೆಯುತ್ತೇನೆ ಎನ್ನುವುದಕ್ಕೆ ಪ್ರಕೃತಿ ನಿಯಮಗಳು ಅಷ್ಟಾಗಿ ಸಹಾಯ ಮಾಡುವುದಿಲ್ಲ ಎನ್ನುವುದೂ ಎಲ್ಲರಿಗೂ ಗೊತ್ತಿರುವ ವಿಚಾರ. ತಡವಾಗಿ, ಅಂದರೆ ಹೆಣ್ಣಿಗೆ 35 ವರ್ಷ ದಾಟಿದ ಮೇಲೆ, ಮೊದಲ ಬಾರಿಗೆ ಬಸುರಾದಾಗ ಅನೇಕ ವೈದ್ಯಕೀಯ ಮತ್ತು ಸಾಮಾಜಿಕ ಸವಾಲುಗಳು ತಾನಾಗಿ ಎದುರಾಗುತ್ತವೆ. ಅಂತಹ ಬಸುರಿಗೆ ಆಧುನಿಕ ವೈದ್ಯಕೀಯ ಸವಲತ್ತು ಇರುವಲ್ಲಿಯೇ ಆರೈಕೆ ಸಿಗುವಂತಾದರೆ ಅಪಾಯಗಳು ಕಡಿಮೆ ಎನ್ನುವುದನ್ನು ಅಲ್ಲಗಳೆಯದೆ, ಚೊಚ್ಚಲ ಬಾಣಂತಿಯ ವಯಸ್ಸು ಹೆಚ್ಚುತ್ತಾ ಹೋದಂತೆ ಅವಳ ತಾಯಿಯ (ಮಗುವಿನ ಅಜ್ಜಿಯ) ವಯಸ್ಸೂ ಹೆಚ್ಚಾಗುತ್ತಾ ಹೋಗಿರುತ್ತದೆ ಎಂಬುದನ್ನು ಇಲ್ಲಿ ಮರೆಯಬಾರದು. ಅನೇಕ ದೇಶಗಳಲ್ಲಿ ತನ್ನ ಹೆಂಡತಿ ಮತ್ತು ಮಗುವಿಗೆ ಸಹಾಯ ಮಾಡಲು ಗಂಡಿಗೆ ಕೆಲಸದಿಂದ ರಜೆಯನ್ನೂ ಕೊಡುವ ಪರಿಪಾಠ ಈಗ ಬೆಳೆದಿದೆ. ಅದು ಒಳ್ಳೆಯದೂ ಸಹ. ಆದರೆ ಇದು ಉಳ್ಳವರು ಮತ್ತು ಸ್ಥಿತಿವಂತರು ಕಂಡುಕೊಂಡ ಪರಿಹಾರ. ಎಷ್ಟು ಜನ ಗಂಡಸರಿಗೆ ರಜೆ ಸಿಗಬಲ್ಲ ಕೆಲಸ ಇರುತ್ತದೆ? ಎಷ್ಟು ಜನಕ್ಕೆ ರಜೆ ಸಿಕ್ಕರೆ ಸಂಬಳ ಸಿಗುತ್ತದೆ? ಆರ್ಥಿಕವಾಗಿ ಸಬಲಳಾದ ಚೊಚ್ಚಲ ಬಾಣಂತಿಯು ಹಣ ಕೊಟ್ಟು ದಾದಿಯನ್ನು ನೇಮಿಸಿಕೊಳ್ಳುತ್ತಾಳೆ ಎಂದಿಟ್ಟುಕೊಳ್ಳೋಣ. ಆದರೆ, ಆ ಸವಲತ್ತು ಕೊಳ್ಳುವ ಸಂದರ್ಭವು ಅಪರೂಪದ ಅಪವಾದವಾಗಿರಬೇಕೇ ಅಥವಾ ಸಾಮಾಜಿಕ ಅಲಿಖಿತ ನಿಯಮವಾಗಬೇಕೇ ಎನ್ನುವುದು ನಮ್ಮ ಮುಂದಿರುವ ಸವಾಲು.

ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಭಾರತ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ, ಇರುವ ಸಮಾಧಾನಕರ ಆರೋಗ್ಯ ಸೇವೆ ಮತ್ತು ಆಡಳಿತಗಳಲ್ಲಿ ಕರ್ನಾಟಕದ್ದೂ ಒಂದು ಎಂಬುದು ಅಂಕಿ ಅಂಶಗಳಿಂದ ಮತ್ತು ಜನರ ಅನುಭವಗಳ ಆಧಾರದ ಮೇಲೆ ಹೇಳಬಹುದು.  ಆದರೆ, ವಿಶೇಷ ಮತ್ತು ಪರಿಣತ ಆರೋಗ್ಯ ಸೇವೆಗಳು ನಗರ ಕೇಂದ್ರಗಳಲ್ಲೇ ತುಂಬಿಕೊಂಡುರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.  ಇದು ನಮ್ಮ ವ್ಯವಸ್ಥೆಯ ಒಂದು ಕೆಟ್ಟ ಆಯಾಮವೂ ಹೌದು. ಹಾಗೆಂದ ಮಾತ್ರಕ್ಕೆ ಎಲ್ಲಾ ಬಸುರಿಯರೂ ಮುಂಜಾಗ್ರತಾ ಕ್ರಮವಾಗಿ ಅಥವಾ ಅನಗತ್ಯ ಆತಂಕದಲ್ಲಿ  ಜಿಲ್ಲಾ ಕೇಂದ್ರ ಆಸ್ಪತ್ರೆಗೋ ಅಥವಾ ಖಾಸಗಿ ನರ್ಸಿಂಗ್ ಹೋಮಿಗೆ ಬಂದು ಮಕ್ಕಳನ್ನು ಹಡೆಯಬೇಕಾದ ಅನಿವಾರ್ಯತೆ ಬರಬಾರದು.  ಮನುಷ್ಯನ ಇತಿಹಾಸದಲ್ಲಿ ಮೊನ್ನೆ ಮೊನ್ನೆವರೆಗೂ (ಕಳೆದ ಕೆಲವು ದಶಕಗಳನ್ನು ಹೊರತು ಪಡಿಸಿ) ಬಸುರಿಯು ಮಗುವನ್ನು  ಹಡೆಯುವಾಗ ಮಗು ಅಥವಾ ತಾಯಿ ಅಥವಾ ಇಬ್ಬರೂ ಅನೇಕ ಕಾರಣಗಳಿಂದ ಸೌಲಭ್ಯಗಳಿಲ್ಲದೆ ಸಾವಿಗೀಡಾಗುತ್ತಿದುದು ಹೆಚ್ಚಿನ ಪ್ರಮಾಣದಲ್ಲಿತ್ತು.  ಅದನ್ನು ಅಷ್ಟೇ ಸಮಚಿತ್ತದಿಂದ ಸ್ವೀಕರಿಸುವುದೂ ಸಂಬಂಧಿಕರಿಗೆ ಮತ್ತು ಸಮಾಜಕ್ಕೆ ಅನಿವಾರ್ಯವಾಗಿತ್ತು.  ಈಗ ಹಾಗಿಲ್ಲ.  ಸೌಲಭ್ಯಗಳು ಸುಧಾರಿಸಿವೆ. ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯವನ್ನು ಹಂತ ಹಂತದಲ್ಲೂ ದಾಖಲಿಸಿ ಅಗತ್ಯವಿರುವ ಔಷಧ ಉಪಚಾರಗಳನ್ನು ಮಾಡುವಷ್ಟರ ಮಟ್ಟಿಗೆ ಏಳ್ಗೆ ಆಗಿದೆ (ಅಂತಹ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವವರೂ ಹೆಚ್ಚಾಗಿದ್ದು ವಿಪರ್ಯಾಸ).  ಆದಷ್ಟೂ ಚೊಕ್ಕಟವಾದ ಸುರಕ್ಷಿತ ಪರಿಸರದಲ್ಲಿ ಸಾಧ್ಯವಾದಷ್ಟೂ ಮಟ್ಟಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಥವಾ ಹೆರಿಗೆ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಆಗುವಂತಾಗಲಿ ಎಂಬ ನಿರೀಕ್ಷೆಯು ಬಹುಪಾಲು ಜನರ ನೈಜ ಜೀವನಕ್ಕೆ ಹತ್ತಿರವಾದುದು. ಎಲ್ಲಾ ಸರಿಯಿದೆ ಎಂಬ ಪರೀಕ್ಷೆ ನಿರೀಕ್ಷೆಗಳನ್ನೂ ಗಾಳಿಗೆ ತೂರಿ ಅಪಾಯಕ್ಕೆ ಸಿಕ್ಕಿಕೊಳ್ಳುವ ಕೈ ಮೀರುವ ಅಸಹಾಯಕ ಪರಿಸ್ಥಿತಿಗಳು ಬರುತ್ತಲೇ ಇರುತ್ತವೆ. ಅವನ್ನು ಒಪ್ಪಿಕೊಳ್ಳುವ ಮನಸ್ಥಿತಿಯೂ ಹೇಳಿ-ಕೇಳಿ ಬರುವಂಥದ್ದಲ್ಲ. ಅಂತಹ ಅನಿರೀಕ್ಷಿತ ಅಪಾಯಗಳು ಕಡಿಮೆ ಆಗಲಿ ಎಂದು ಆಶಿಸಬಹುದು.  ದುರಂತಗಳು ಕಡಿಮೆ ಆಗುವಂತೆ ಸಹಾಯ ಮಾಡಬಲ್ಲ ಆರೋಗ್ಯ ಆಡಳಿತ (ಪ್ರಿವೆಂಟಿವ್ ಕೇರ್) ಸೇವೆಯನ್ನು ಸುಧಾರಿಸಲು ಯತ್ನಿಸಬಹುದು. ಉಚಿತವಾಗಿ ಅಥವಾ ಕೈಗೆಟಕುವ ದರದಲ್ಲಿ ಎಲ್ಲಾ ತಾಲ್ಲೂಕುಗಳಲ್ಲೂ ಸಿಗುವಂತಾಗಬೇಕು. ಅಂತಹ ಸೇವೆಯು 10 ಕಿಮೀ ದೂರದಲ್ಲಿರಲಿ 40 ಕಿಮೀ ದೂರದಲ್ಲಿರಲಿ, ಅದು ಇವತ್ತಿನ ಸಂದರ್ಭದಲ್ಲಿ ದೊಡ್ಡ ದೂರವಲ್ಲ. ಬಸುರು, ಹಡೆಯುವುದು, ಮತ್ತು ಮುಪ್ಪು ಅನಾರೋಗ್ಯವಲ್ಲ.  ಅವು ನೈಸರ್ಗಿಕ ಕ್ರಿಯೆಗಳು. ಅವುಗಳ ಕುರಿತು ಕುತೂಹಲ ಇರಬೇಕು, ಭೀತಿ ಆತಂಕಗಳಿಗೆ ಇಂಬು ಕೊಡಬಾರದು. ಇದನ್ನು ಮನಗಂಡಿರುವ, ಆರ್ಥಿಕವಾಗಿ ಕರ್ನಾಟಕಕ್ಕಿಂತ ಶಕ್ತವಾಗಿರುವ ಅನೇಕ ದೇಶಗಳು ತಮಗೆ ಒಗ್ಗುವ ಸಂದರ್ಭಗಳಲ್ಲಿ ಮನೆಯಲ್ಲಿಯೇ ಸಿಗಬಹುದಾದ ಆರೈಕೆಯತ್ತ ಒಲವು ತೋರುತ್ತಿವೆ.

ಹೆರಿಗೆಯ ನಂತರ ಮಗುವಿನ ಆರೈಕೆಯ ನಿಸರ್ಗದತ್ತ ಜವಾಬುದಾರಳು ತಾಯಿಯೇ ಆಗಿರುತ್ತಾಳೆ. ತಂದೆಯ ಪಾತ್ರವೂ ಹಿಂದೆಂದೂ ಕಂಡರಿಯದಷ್ಟು (ಒಳ್ಳಿತಿಗಾಗಿ) ಬದಲಾಗಿದೆ.  ಆದರೂ ತನ್ನ ಸಹಧರ್ಮವನ್ನು ಮರೆತ ಗಂಡ ಆಕೆಗಿದ್ದರೆ ಅದು ಅವನು ಬೆಳೆದ ವಾತಾವರಣದ ಮತ್ತು ಮಾನಸಿಕ ತರಬೇತಿಯಲ್ಲಿರುವ ಕೊರತೆಯನ್ನು ತೋರಿಸುತ್ತದೆ. ಈ ಎಲ್ಲವನ್ನೂ ಮುಂದೆ ಬರುವ ತಾಯಂದಿರೇ ತಿದ್ದಿ ಮುಂದಿನ ಪೀಳಿಗೆಯನ್ನು ಬೆಳೆಸುತ್ತಾರೆಂಬ ವಿಶ್ವಾಸ ನಮ್ಮಲ್ಲಿರಬೇಕು. ಹಾಗೆಂದು ಎಲ್ಲವನ್ನೂ ತಾಯಿಯ ಬೆನ್ನಿಗೆ ಕಟ್ಟುವುದಲ್ಲ. ಮಗುವಿಗೆ ಸರಿಯಾದ ಮಾದರಿಗಳನ್ನು ಒದಗಿಸುವ ಜವಾಬ್ದಾರಿಯು ಅದರ ತಂದೆ, ಅಜ್ಜ, ಅಜ್ಜಿ, ಕುಟುಂಬದ ಆಪ್ತರೆಲ್ಲರ ಮೇಲೂ ಇರುತ್ತದೆ. ನಾವು ಸಂಪ್ರದಾಯ ಎಂದು ಹಣೆಪಟ್ಟಿ ಅಂಟಿಸುವ ಅನೇಕ ಆಚರಣೆಗಳಲ್ಲಿ ಲೋಪಗಳಿವೆ. ಕೆಲವು ಆಚರಣೆಗಳನ್ನು ನಿಷೇಧಿಸಲೂ ಬೇಕಾಗಬಹುದು. ಬಾಣಂತನ ಮಾಡುವ ವಿಧಾನಗಳಲ್ಲೂ ಕೆಲವು ಅಸಮಂಜಸ ನಂಬಿಕೆಗಳೂ ಪ್ರವೃತ್ತಿಗಳೂ ಸೇರಿಕೊಂಡಿವೆ. ಯಾವ ಪದ್ಧತಿಯನ್ನೂ ಯಥಾವತ್ತಾಗಿ ಒಪ್ಪಿಕೊಳ್ಳಬೇಕಾಗಿಲ್ಲ.  ರೂಢಿಗಳಲ್ಲಿ ಕಾಳು ಯಾವುದು ಜೊಳ್ಳು ಯಾವುದು ಎಂದು ಬೇರ್ಪಡಿಸುವುದು ಇಂದಿನ ಸಾಮಾಜಿಕ ಮತ್ತು ಆರ್ಥಿಕ  ಸನ್ನಿವೇಶಕ್ಕೆ ಉಪಯುಕ್ತವಷ್ಟೇ ಅಲ್ಲ, ಅದು ನಮ್ಮ ಸಮಾಜವನ್ನು ಮುಂದೆ ಕಾಪಾಡಲೂಬಹುದು.

ಕನ್ನಡ ಕವಿಗಳದ್ದು ತುಂಗೆ, ಕೃಷ್ಣೆ, ಕಾವೇರಿಯರ ಪ್ರವಾಹ

ಕರ್ನಾಟಕದ ಶಾಲಾ ಪಠ್ಯ ವಸ್ತುವಿನ ತಿದ್ದುಪಡಿಯ ಕುರಿತಾಗಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಅದರ ರಾಜಕೀಯ ದುರ್ನಾತವು ಸ್ಟ್ರಾಟೊಸ್ಫಿಯರ್ ಎತ್ತರವನ್ನು ಮೀರಿ ಪರಲೋಕದವರ ಮೂಗನ್ನೂ ಮುಚ್ಚುವಂತೆ ಮಾಡಿ ಆಗಿದೆ. ನನ್ನನ್ನು ಕಾಡುವ ಒಂದೇ ಒಂದು ಮುಖ್ಯವಾದ ವಿಚಾರವನ್ನು ಮಾತ್ರ ಇಲ್ಲಿ ಕೈಗೆತ್ತಿಕೊಂಡಿದ್ದೇನೆ. ಅದು ೧೦ ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಹೊಸದಾಗಿ ಸೇರಿಸಿರುವ ಶತಾವಧಾನಿ ರಾ ಗಣೇಶರ “ಶ್ರೇಷ್ಠ ಭಾರತೀಯ ಚಿಂತನೆಗಳು” ಎಂಬ ಹಣೆ ಪಟ್ಟಿ ಇರುವ ಗದ್ಯಭಾಗವನ್ನು ಕುರುತಾದ್ದು. ಆ ಗದ್ಯ ಹೇಳ ಹೊರಟಿರುವ ವಿಚಾರದ ಬಗ್ಗೆ ಅನೇಕರಲ್ಲಿ ತಕರಾರು ಇದೆ. ನನ್ನನ್ನು ಗದ್ಯಭಾಗದ ವಿಷಯವು ಬಾಧಿಸುವುದಿಲ್ಲ. ನನ್ನ ತಕರಾರು ಇರುವುದು ಅದನ್ನು ಬರೆದಿರುವ ಶ್ರೀಯುತ ರಾ ಗಣೇಶರ ಕನ್ನಡದ ಬಗ್ಗೆ ಮಾತ್ರ. ಅವರದ್ದು ಕನ್ನಡವೇ ಎಂಬ ಅನುಮಾನ ಇದೆ ಎಂದು ನೀವು ಭಾವಿಸಿದರೂ ತಪ್ಪಿಲ್ಲ. ಅವರು ತಮ್ಮ ಆ ಲೇಖನದ ಕುರಿತಾಗಿ ಪ್ರಜಾವಾಣಿ ಪತ್ರಿಕೆಯಲ್ಲಿ ಬಂದಿದ್ದ ಟೀಕೆಗಳಿಗೆ ಉತ್ತರಿಸುತ್ತಾ ಮೊನ್ನೆ ಒಂದು ಪುಟ್ಟ ಅಂಕಣ ಬರಹವನ್ನು ಪ್ರಕಟಿಸಿದ್ದರು (ಪ್ರಜಾವಾಣಿ, ಸಂಗತ, ಭಾರತೀಯ ಚಿಂತನೆಗಳ ಸಮರ್ಥನೆ, ೨೭. ೦೫. ೨೦೨೨). ಅದರಲ್ಲಿ ತಮ್ಮ ಬರವಣಿಗೆಯ ರೀತಿಯನ್ನು ಸಮರ್ಥನೆ ಮಾಡಿಕೊಳ್ಳುವಾಗ ಶ್ರೀಯುತರು “ಭಾಷೆಯನ್ನು ಕುರಿತ ಆಕ್ಷೇಪಗಳು ತೀರ ಸಾಪೇಕ್ಷ. ಪಂಪ, ಕುಮಾರವ್ಯಾಸ, ಕುವೆಂಪು ಅಂಥವರ ಭಾಷೆ ಕಠಿಣವಾದರೆ ನನ್ನದೂ ಆಗಲಿ. ಈ ಗಂಗಾನದಿಯಲ್ಲಿ ನಾನೂ ಒಂದು ಹನಿಯೆಂಬ ನಮ್ರವಾದ ಹೆಮ್ಮೆ ನನ್ನದು” — ಹೀಗೆ ಹೇಳಿ ತಮ್ಮನ್ನು ತಾವು ಪಂಪ ಮತ್ತು ಕುಮಾರವ್ಯಾಸರ ಸಾಲಿಗೆ ಸೇರಿಸಿಕೊಳ್ಳುವ ಆಸೆ ಅವರಿಗೆ. ಕನ್ನಡ ಸಾಮಾನ್ಯನಾದ ನಾನು ಶತಾವಧಾನಿ ರಾ ಗಣೇಶ ಅವರ ಮೂಲ ಬರಹ ಮತ್ತು ಅವರ ಪ್ರಜಾವಾಣಿಯ ಸಂಗತ ಸಮರ್ಥನೆಯಲ್ಲಿ ಕನ್ನಡ ತನವನ್ನು ಹುಡುಕಲು ತಿಣುಕಾಡಬೇಕಾಯಿತು. ಪಂಪ ಕುಮಾರವ್ಯಾಸರದು ಗಂಗೆಯ ಪ್ರವಾಹವಲ್ಲ. ಅವರು ಅಪ್ಪಟ ಕನ್ನಡ ಕವಿಗಳು. ಅವರದ್ದು ತುಂಗೆಯೋ ಕೃಷ್ಣೆಯೋ ಅಥವಾ ಕಾವೇರಿಯ ಹರಿವು ಆಗಿತ್ತೆಂಬ ಭಾವವನ್ನು ರಾ ಗಣೇಶರಂಥ ಸಂಸ್ಕೃತ ಅನುಯಾಯಿಗಳಿಂದ ನಿರೀಕ್ಷಿಸಬಹುದೇ. ಸಂಸ್ಕೃತ ಪದಗಳನ್ನು ಕುವೆಂಪು ಬೇರೆಯವರಿಗಿಂತ ಹೆಚ್ಚಾಗಿ ಬಳಸಿಕೊಂಡರು ನಿಜ. ಕನ್ನಡದ ಎಲ್ಲಾ ದೊಡ್ಡ ಕವಿಗಳೂ ಸಂಸ್ಕೃತವನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಯಾವ ಭಾಷೆಯ ಯಾವ ಪದ ಸಂಪತ್ತನ್ನೇ ಆಗಲಿ ತನ್ನದಾಗಿಸಿಕೊಂಡು, ಅವರ ಬಗ್ಗೆ ಗೌರವ ಇರಿಸಿಕೊಂಡು ತನ್ನದೇ ಹಾದಿಯಲ್ಲಿ ಬೆಳೆದಿರುವುದು ಕನ್ನಡದ ಅಗ್ಗಳಿಕೆ. ಕರ್ನಾಟಕದ ಮನೆಮನೆಗಳ ದೇವರ ಗೂಡಿನಲ್ಲಿ ಗಂಗೆಗೆ ಪೂಜೆ ಯಾವತ್ತೂ ಸಲ್ಲುತ್ತಲೇ ಬಂದಿದೆ. ಅದರ ಬಗ್ಗೆ ಹೆಮ್ಮೆಯೂ ಇದೆ. ಆದರೆ, ನಾವು ಕುಡಿಯುವ ನೀರು ಕಾವೇರಿ. ಕುವೆಂಪು ಅವರಲ್ಲಿದ್ದ ರಕ್ತಗತ “ಆರ್ದ್ರ” ಕನ್ನಡ ಅಭಿಮಾನಕ್ಕೂ ಶತಾವಧಾನಿಗಳಂಥ ಸಂಸ್ಕೃತ ಅನುಯಾಯಿಗಳು ಕನ್ನಡದ ಮೂಗಿಗೆ ತುಪ್ಪ ಸವರುವಾಗ ತೋರಿಸುವ “ಶುಷ್ಕ” ಕನ್ನಡ ಕನಿಕರಕ್ಕೂ ಹೋಲಿಕೆ ಮಾಡುವುದುಂಟೇ? ಆಕ್ಷೇಪಗಳು ಸಾಪೇಕ್ಷವಂತೆ. ಅಯ್ಯೋ. ಅವರಿಗೆ ಅಂತಹ ಬಯಕೆ ಇದ್ದರೆ ಕಾಳಿದಾಸ ಭಾಸಾದಿಗಳು ಇದ್ದಾರೆ. ಅವರೊಂದಿಗೆ ಬೆಸೆದುಕೊಳ್ಳಲಿ. ಕಾಳಿದಾಸನೂ ಒಪ್ಪಬಹುದು. ಸಂಸ್ಕೃತವನ್ನು ತಲೆಯ ಮೇಲೆ ಹೊತ್ತುಕೊಂಡು ಕುಣಿಯುವ ಕನ್ನಡಿಗರು ಯಾರೇ ಆಗಿದ್ದರೂ ಅವರು ತಮ್ಮ ಕಾಲಿನ ಮೇಲೆ ನಿಂತಿರುವುದನ್ನು ಮರೆತಿರುತ್ತಾರೆ ಎಂದೇ ಹೇಳಬೇಕಾಗುತ್ತದೆ. ಖೇಚರರಿಂದ ಕನ್ನಡಕ್ಕೆ ಅಪಾಯವಿದೆ. ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ ಇದ್ದೇ ಇದೆ. ಆದರೆ ಕನ್ನಡಕ್ಕೆ ಸಂಸ್ಕೃತದ ಪ್ರಭಾವಳಿ ಬೇಕಿಲ್ಲ. ಎನ್ನ ಕಾಲೇ ಕಂಬ (ಕನ್ನಡ). ಶಿರವು ಹೊನ್ನ ಕಳಶವೇ ಆಗಿದೆ. ಅದು ಸ್ವರ್ಣ ಕಲಶವಲ್ಲ.

ನನ್ನ ಈ ಅಭಿಪ್ರಾಯವನ್ನು ಪ್ರಜಾವಾಣಿಯ ವಾಚಕರ ವಾಣಿಗೆ ಕಳಿಸಿದ್ದೆ. ಆದರೆ, ಆ ಪತ್ರಿಕೆಯವರಿಗೆ ತಮಗೆ ಗೊತ್ತಿರುವ ನಾಲ್ಕಾರು ಮಂದಿ ಬರೆಯುವ ಪತ್ರಗಳ ಹೊರತಾಗಿರುವ ಹೊಸ ವಿಚಾರಗಳು, ನೇರ ನುಡಿಯ ಸ್ವಾಭಿಮಾನದ ಮಾತುಗಳು ಕಾಣಿಸುವುದು ಅಪರೂಪ. ಹಾಗಾಗಿ, ಇದನ್ನು ನನ್ನ ಬ್ಲಾಗಿನಲ್ಲೇ ಹಂಚಿಕೊಳ್ಳುತ್ತಿದ್ದೇನೆ.